ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಜನಸ್ತೋಮದ ನಡುವೆ ಲೋಕನಾಯಕ ಡಾ.ಭೀಮಣ್ಣ ಖಂಡ್ರೆ ಜಿ ಅವರ ಶತಮಾನೋತ್ಸವ

ಬೀದರ್:ಮಾಜಿ ಸಚಿವರು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆ ಮಾಜಿ ಅಧ್ಯಕ್ಷರೂ ಆದ ಲೋಕನಾಯಕ ಭೀಮಣ್ಣ ಖಂಡ್ರೆ ಅವರ ಜನ್ಮ ಶತಮಾನೋತ್ಸವ ಸಮಾರಂಭ ಭಾಲ್ಕಿಯ ಬಿ.ಕೆ.ಐ.ಟಿ ಕಾಲೇಜು ಆವರಣದಲ್ಲಿ ಅಪಾರ ಜನಸ್ತೋಮದ ನಡುವೆ ಜರುಗಿತು.
ಅಖಿಲ ಭಾರತ ವೀರಶೈವ–ಲಿಂಗಾಯತ ಮಹಾಸಭೆ,ಭೀಮಣ್ಣ ಖಂಡ್ರೆ ಜನ್ಮ ಶತಮಾನೋತ್ಸವ ಸಮಿತಿ ಸಹಯೋಗದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಸುತ್ತೂರು, ಶ್ರೀಶೈಲ,ಸಿದ್ದಗಂಗಾ,ಸಿರಿಗೆರೆ,ಕಾಗಿನೆಲೆ, ಕೂಡಲಸಂಗಮ,ಹರಿಹರ ಸೇರಿದಂತೆ ನಾಡಿನ ಪ್ರಮುಖ ಮಠಾಧೀಶರು,ರಾಜಕೀಯ ಪಕ್ಷಗಳ ಮುಖಂಡರು,ಮಾಜಿ ಮುಖ್ಯಮಂತ್ರಿಗಳು,ಹಾಲಿ ಹಾಗೂ ಮಾಜಿ ಶಾಸಕರು,ವೀರಶೈವ ಮಹಾಸಭೆಯ ಪ್ರತಿನಿಧಿಗಳು ಕಾರ್ಯಕ್ರಮಕ್ಕೆ ಸಾಕ್ಷಿಯಾದರು.ಈ ಸಂದರ್ಭದಲ್ಲಿ ನಿಜಾಮರ ವಿರುದ್ಧ ಹೋರಾಟ,ಕರ್ನಾಟಕದ ಏಕೀಕರಣ,ಬಸವತತ್ವದ ಪ್ರಸಾರಕ್ಕಾಗಿ ಖಂಡ್ರೆಯವರು ಮಾಡಿದ ಕೆಲಸಗಳನ್ನು ಸ್ಮರಿಸಿ ಗುಣಗಾನ ಮಾಡಿದರು.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಕಾರ್ಯಕ್ರಮ ಉದ್ಘಾಟಿಸಿದರೆ,ಮುಖ್ಯಮಂತ್ರಿ ಸಿದ್ದರಾಮಯ್ಯನವರು ‘ಲೋಕನಾಯಕ’ ಅಭಿನಂದನ ಗ್ರಂಥ ಬಿಡುಗಡೆಗೊಳಿಸಿದರು. ಮಹಾಸಭೆ ರಾಷ್ಟ್ರೀಯ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಅಧ್ಯಕ್ಷತೆ ವಹಿಸಿದ್ದರು.
ಎ.ಐ.ಸಿ.ಸಿ ಅಧ್ಯಕ್ಷ ಡಾ.ಮಲ್ಲಿಕಾರ್ಜುನ ಖರ್ಗೆ ಸಮಾರಂಭ ಉದ್ಘಾಟಿಸಿ ಮಾತನಾಡಿ ಕಲ್ಯಾಣ ಕರ್ನಾಟಕ ಭಾಗದಲ್ಲಿ ಅಂದು ಬಸವಣ್ಣನವರ ವಿಚಾರಧಾರೆ ಪ್ರಚಾರ ಮಾಡುವವರೇ ಇರಲಿಲ್ಲ. ಅಂತಹ ಸಂದರ್ಭದಲ್ಲಿ ಡಾ.ಭೀಮಣ್ಣ ಖಂಡ್ರೆಯವರು ಸಮಾಜದ ಎಲ್ಲರನ್ನೂ ಒಗ್ಗೂಡಿಸಿ ಅವರ ಸಮಸ್ಯೆಗಳಿಗೆ ಸ್ಪಂದಿಸಿ ಪರಿಹಾರ ದೊರಕಿಸುವ ನಿಟ್ಟಿನಲ್ಲಿ ಪ್ರಯತ್ನಿಸಿ ಶರಣರ ಚಿಂತನೆ ಪ್ರಸಾರಕ್ಕೆ ಮುಂದಾದರು.ಅನೇಕ ಸಾಮಾಜಿಕ, ಶಿಕ್ಷಣ ಸಂಸ್ಥೆಗಳನ್ನು ಪ್ರಾರಂಭಿಸಿ ಸಮಾಜದ ಸರ್ವಾಂಗೀಣ ಏಳಿಗಾಗಿ ಶ್ರಮಿಸಿದ್ದಾರೆ ಬೀದರಿಂದ ಮೈಸೂರವರೆಗೆ ಹೋರಾಟ ನಡೆಸಿ ಸಮಾಜವನ್ನು ಎಚ್ಚರಗೊಳಿಸಿದ ಛಲವಾದಿ ರಾಜಕಾರಣಿ ಡಾ.ಭೀಮಣ್ಣಾ ಖಂಡ್ರೆ ಅವರೊಂದಿಗೆ ನಾನೂ ಮಂತ್ರಿಯಾಗಿ ಕೆಲಸ ಮಾಡಿದ್ದೇನೆ ಬಹುತೇಕ ರಾಜಕಾರಣಿಗಳು 60-70 ವರ್ಷ ಬದುಕುವುದೇ ಕಷ್ಟ,ಆದರೆ ಮಾಜಿ ಸಚಿವ ಭೀಮಣ್ಣ ಖಂಡ್ರೆ ನೂರು ವರ್ಷದ ಸಾರ್ಥಕ ಬದುಕು ಎಲ್ಲರಿಗೂ ಸ್ಪೂರ್ತಿಗಾಗಿದೆ ರಾಜಕೀಯ ಬದುಕಿನೊಂದಿಗೆ ಶೈಕ್ಷಣಿಕ,ಸಾಮಾಜಿಕ ಕ್ಷೇತ್ರದಲ್ಲಿ ದುಡಿದ ಮಹಾನ್ ವ್ಯಕ್ತಿ‌ ಭೀಮಣ್ಣ ಖಂಡ್ರೆ,ಅವರು ಇನ್ನೂ ಹೆಚ್ಚು ದಿನಗಳ ಕಾಲ ಬದುಕು ಸಾಗಿಸಲಿ ಎಂದು ಹಾರೈಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿ, “ಸ್ವಾತಂತ್ರ್ಯ ಹೋರಾಟದಲ್ಲಿ ಗಾಂಧೀಜೀಯವರ ಕರೆಗೆ ಓಗೊಟ್ಟು ದೇಶದ ಸ್ವಾತಂತ್ರ್ಯಕ್ಕಾಗಿ ದುಡಿದವರು,ಭೀಮಣ್ಣಾ ಖಂಡ್ರೆಯವರು ರಾಜಕೀಯ,ಸಾಮಾಜಿಕ,ಶೈಕ್ಷಣಿಕ,ಧಾರ್ಮಿಕ ಸೇರಿದಂತೆ ಎಲ್ಲಾ ರಂಗದಲ್ಲಿ ತಮ್ಮನ್ನು ತೊಡಗಿಸಿಕೊಂಡು ಸಮಾಜದ ಒಳಿತಿಗಾಗಿ ಶ್ರಮಿಸಿದ ಬಗ್ಗೆ ಇಂದು ಲೋಕಾರ್ಪಣೆಗೊಂಡ ಅವರ ಅಭಿನಂದನಾ ಗ್ರಂಥ ಎಲ್ಲರಿಗೂ ಪ್ರೇರಣೆಯಾಗಿದೆ ಹುಟ್ಟು ಸಾವಿನ ಮಧ್ಯೆ ಸಮಾಜಮುಖಿ ಕಾರ್ಯಗಳಿಂದಲೇ ಸಮಾಜ ನಮ್ಮನ್ನು ಸ್ಮರಿಸುತ್ತದೆ ಆ ದಿಸೆಯಲ್ಲಿ ಡಾ.ಭೀಮಣ್ಣಾ ಖಂಡ್ರೆಯವರು ಸಾರ್ಥಕ ಬದುಕು ನಡೆಸಿ ಸಮಾಜಕ್ಕೆ ಮಾದರಿಯಾಗಿದ್ದಾರೆ. ಭೀಮಣ್ಣಾ ಖಂಡ್ರೆಯವರು ಇನ್ನೂ ಆರೋಗ್ಯವಾಗಿ ಬದುಕು ಸಾಗಿಸಲಿ” ಎಂದು ಹಾರೈಸಿದರು. ಸಮಾಜದ ಎಲ್ಲಾ ತಾರತಮ್ಯ ಹೋಗಲಾಡಿಸುವ ಪ್ರಯತ್ನವೇ ವಚನ ಸಾಹಿತ್ಯ,ಅದಕ್ಕಾಗಿ ಬಸವಾದಿ ಶರಣರು ಸಮಾನತೆ ಸಮಾಜ ರೂಪಿಸಲು ಪ್ರಯತ್ನಿಸಿದರು ಎಂಟು ಶತಮಾನಗಳ ಹಿಂದೆ ಕಲ್ಯಾಣದಲ್ಲಿ ಅನುಭವ ಮಂಟಪ ಸ್ಥಾಪಿಸಿದರು, ಹಲವು ಜಾತಿಗಳಿಂದ ಕೂಡಿದ ವರ್ಣವ್ಯವಸ್ಥೆ ಪದ್ದತಿಯನ್ನು ನಾಶಗೊಳಿಸಿ ಸಮ-ಸಮಾಜ ಕಟ್ಟಲು ಬಯಸಿ ಎಲ್ಲಾ ಜಾತಿ-ಧರ್ಮ-ವರ್ಗದ ಜನರನ್ನು ಅನುಭವ ಮಂಟಪದಲ್ಲಿ ಪಾಲ್ಗೊಳ್ಳುವಂತೆ ಮಾಡಿದ ಶ್ರೇಯಸ್ಸು ಬಸವಣ್ಣವರಿಗೆ ಸಲ್ಲುತ್ತದೆ. ಬಸವಾದಿ ಶರಣರ ವಿಚಾರಧಾರೆ ಎಂದೆಂದಿಗೂ ಪ್ರಸ್ತುತ. ಸಮಾಜದಲ್ಲಿ ಅಸಮಾನತೆ ಇರುವರೆಗೂ ಬಸವಾದಿ ಶರಣರ ಚಿಂತನೆಗಳು ಪ್ರಸ್ತುತವಾಗಿರುತ್ತವೆ ಎಂದು ಅಭಿಪ್ರಾಯಪಟ್ಟರು.
ಅಖಿಲ ಭಾರತ ವೀರಶೈವ-ಲಿಂಗಾಯತ ಮಹಾಭಾ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಮಾತನಾಡಿ, ‘ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆ ಎಂಬ ಸಂಸ್ಥೆಯೊಂದು ಇದೆ ಎಂದು ತೋರಿಸಿಕೊಟ್ಟವರು ಭೀಮಣ್ಣ ಖಂಡ್ರೆ”ಎಂದು ಹೇಳಿದರು.
ಸ್ವಾಗತ ಸಮಿತಿ ಅಧ್ಯಕ್ಷರಾದ ಬೀದರ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅವರು ಪ್ರಾಸ್ತಾವಿಕವಾಗಿ ಮಾತನಾಡಿ,ಸಮಾಜ ಸೇವೆ ಮುಂದೆ ಹಣ,ಆಸ್ತಿ ಯಾವುದೂ ಶಾಶ್ವತವಲ್ಲ. ನನಗೆ ನನ್ನ ತಂದೆಯೇ ಆದರ್ಶ,ಅವರೇ ಸ್ಫೂರ್ತಿ,ಅವರ ಗರಡಿಯಲ್ಲಿ ಬೆಳೆದು ಬಂದ ನಾನು ಅವರ ದಾರಿಯಲ್ಲಿ ಸಾಗುತ್ತಿದ್ದೇನೆ”ಎಂದರು.

ವರದಿ:ಚಂದ್ರಕಾಂತ ಝಬಾಡೆ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ