ಶಹಾಪುರ:ಸರಕಾರಿ ಪ್ರಥಮ ದರ್ಜೆ ಕಾಲೇಜು ಶಹಾಪುರದಲ್ಲಿ ಸತತ 3 ತಿಂಗಳು ಆದರೂ ಮೊದಲ ಸೆಮಿಸ್ಟರ್ ವಿದ್ಯಾರ್ಥಿಗಳಿಗೆ ತರಗತಿ ನಡೆಯದ ಕಾರಣ ವಿದ್ಯಾರ್ಥಿಗಳು ಕಾಲೇಜಿನ ಪ್ರಾಂಶಪಾಲರಿಗೆ ಮೌಖಿಕವಾಗಿ ಎಷ್ಟೇ ಕೇಳಿದರೂ ಯಾವುದೇ ಪ್ರಯೋಜನವಾಗುತ್ತಿಲ್ಲ ಕಾರಣ ಇಂದು ಭೀಮ್ ಆರ್ಮಿ ಕರ್ನಾಟಕ ಏಕ್ತಾ ಮಿಷನ್ ಸಂಘಟನೆಯ ಜೊತೆಗೂಡಿ ತಾಲೂಕ ದಂಡಾಧಿಕಾರಿಗಳ ಕಚೇರಿಯ ಮುಂದೆ ನೂರಾರು ವಿದ್ಯಾರ್ಥಿಗಳೊಂದಿಗೆ ಕೂಡಲೇ ತರಗತಿ ನಡೆಸಬೇಕೆಂದು ಹಾಗೂ ಕರ್ನಾಟಕದ ಎಲ್ಲಾ ಅತಿಥಿ ಉಪನ್ಯಾಸಕರಿಗೆ ಸೇವಾ ಭದ್ರತೆ ಮತ್ತು ಸೇವಾ ಕಾಯಂ ಗೊಳಿಸಬೇಕು ಎಂದು ಮಾನ್ಯ ತಾಲೂಕ ದಂಡಾಧಿಕಾರಿಗಳ ಮುಖಾಂತರ ರಾಜ್ಯದ ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ತಾಲೂಕ ಅಧ್ಯಕ್ಷರಾದ ಶರಣ್.ಎಸ್.ಗೊಂದನವರ್,ವಿಧ್ಯಾರ್ಥಿ ಘಟಕ ಅಧ್ಯಕ್ಷರಾದ ಮಂಜು ದೊರನಹಳ್ಳಿ,ಬಾಬು ಹೋತಪೇಠ,ದೇವು ದೊರನಹಳ್ಳಿ,ಗಿರೀಶ್,ಸಿದ್ದು ಬುಕ್ಕಲ್,ಮಂಜು ಹಳಿಸಗರ್,ಶಿವುಮಾಳು, ಚಂದು,ಮೌಲಾಲಿ,ವಿದ್ಯಾರ್ಥಿಗಳಾದ ಮಂಜುಳಾ, ಅಕ್ಷಯ,ಅಮಾತೆಪ್ಪ,ನಾಗರಾಜ್,ಚೈತ್ರ, ಅಪೂರ್ವ,ಮಾರುತಿ,ಅಮೋಘ ಹಾಗೂ ಶಾಲಾ ವಿದ್ಯಾರ್ಥಿ ವಿದ್ಯಾರ್ಥಿನಿಯರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ವರದಿ:ರಾಜಶೇಖರ ಮಾಲಿ ಪಾಟೀಲ್
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.