ಸೊರಬ:ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ನ್ಯಾಯವಾದಿ ಸೈಯದ್ ಅಹ್ಮದ್ ಕೆ.ಎ ನೇತೃತ್ವದಲ್ಲಿ ವಕೀಲರ ದಿನಾಚರಣೆ ಅಂಗವಾಗಿ ಆಸ್ಪತ್ರೆಯಲ್ಲಿನ ರೋಗಿಗಳಿಗೆ ಬ್ರೆಡ್ ಹಾಗೂ ಹಣ್ಣನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಪತ್ರಕರ್ತರೊಂದಿಗೆ ಸೈಯದ್ ಅಹ್ಮದ್ ಕೆ.ಎ ಮಾತನಾಡಿ,ಬಾಬು ರಾಜೇಂದ್ರ ಪ್ರಸಾದ್ ರವರು ವಕೀಲರಾಗಿ ಮಾಡಿದ ಸಾಧನೆಗಳನ್ನು ಆಗಾಗ್ಗೆ ನೆನಪಿನಲ್ಲಿಟ್ಟುಕೊಂಡು ಅವರ ಧ್ಯೇಯೋದ್ದೇಶಗಳನ್ನು ಪಾಲಿಸಲು ಮುಂದಾಗಬೇಕು ಸಮಾಜದಲ್ಲಿ ವಕೀಲ ವೃತ್ತಿ ಅತ್ಯಂತ ಮಹತ್ವದ ಪಾತ್ರವನ್ನು ವಹಿಸುತ್ತದೆ. ಸಮಾಜದಲ್ಲಿ ವಕೀಲ ವೃತ್ತಿಗೆ ಘನತೆ ಗೌರವ ಬರಬೇಕಾದರೆ ಶ್ರಮ ಪಡಬೇಕು ಸಮಾಜ ಪ್ರತಿಯೊಂದು ನ್ಯಾಯಾಲಯದ ಪ್ರಕರಣಗಳ ಬಗ್ಗೆ ಗಮನ ಹರಿಸುತ್ತಿರುತ್ತದೆ ಈ ನಿಟ್ಟಿನಲ್ಲಿ ಪ್ರತಿಯೊಂದು ಪ್ರಕರಣದಲ್ಲಿ ಜಾಗರೂಕತೆಯಿಂದ ಇರಬೇಕು.ನಮ್ಮ ಸುತ್ತಮುತ್ತಲಿನವರ ಜೊತೆ ಉತ್ತಮ ರೀತಿಯಲ್ಲಿ ಒಡನಾಟ ಇಟ್ಟುಕೊಂಡು ಬಡಬಗ್ಗರಿಗೆ ಸೇವೆ ಮಾಡುವ ಮನೋಭಾವ ಬೆಳಸಿಕೊಳ್ಳಬೇಕು ಈ ನಿಟ್ಟಿನಲ್ಲಿ ವಕೀಲರ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸುವ ನಿಟ್ಟಿನಲ್ಲಿ ಸ್ನೇಹಿತರ ಜೊತೆಗೂಡಿ ಆಸ್ಪತ್ರೆಯಲ್ಲಿನ ರೋಗಿಗಳಿಗೆ ಹಣ್ಣು ಹಾಗೂ ಬ್ರೆಡ್ ವಿತರಿಸಲಾಗುತ್ತಿದೆ ಎಂದರು.
ನ್ಯಾಯವಾದಿ ವೈ.ಜಿ.ಪುಟ್ಟಸ್ವಾಮಿ ಮಾತನಾಡಿ, ದೇಶದ ರಾಷ್ಟ್ರಪತಿಯಾಗಿದ್ದ ಬಾಬು ರಾಜೇಂದ್ರ ಪ್ರಸಾದ್ ರವರ ಜನ್ಮ ದಿನಾಚರಣೆಯ ಅಂಗವಾಗಿ ವಕೀಲರ ದಿನಾಚರಣೆಯನ್ನು ಆಚರಿಸಿಕೊಂಡು ಬರಲಾಗುತ್ತಿದೆ ವಕೀಲರ ದಿನಾಚರಣೆಯನ್ನು ರೋಗಿಗಳಿಗೆ ಬ್ರೆಡ್ ಹಾಗೂ ಹಣ್ಣು ವಿತರಿಸುವ ಮೂಲಕ ನೊಂದವರಿಗೆ ಶಕ್ತಿ ತುಂಬುವ ನಿಟ್ಟಿನಲ್ಲಿ ಅರ್ಥಪೂರ್ಣವಾಗಿ ಆಚರಿಸಲಾಗುತ್ತಿದೆ ಎಂದರು.
ವಕೀಲರಾದ ಡಿ.ಕೆ.ಪರಶುರಾಮ, ವೈ.ಜಿ.ಪುಟ್ಟಸ್ವಾಮಿ,ಸುರೇಶ್ ಕಲ್ಲಂಬಿ,ಯುವರಾಜ ಆರ್.ಹೆಚ್ ಕಮನವಳ್ಳಿ,ದಿನಕರಭಟ್ ಭಾವೆ, ವಿನಯ ಪಾಟೀಲ್,ಭೀಮಪ್ಪ ಹೆಚ್.ಬಿ,ಡಾಕಪ್ಪ ಹೆಸರಿ,ಎಂ.ನಾಗರಾಜ್,ಶ್ರೀಧರ,ಜಿ.ಉಮೇಶ, ತಾಲೂಕು ಆರೋಗ್ಯಾಧಿಕಾರಿ ಪ್ರಭು ಕೆ.ಸಾಹುಕಾರ್,ಹಿರಿಯ ಆರೋಗ್ಯ ನಿರೀಕ್ಷಕ ಶಬ್ಬೀರ್ ಖಾನ್ ಮತ್ತಿತರರಿದ್ದರು.
ವರದಿ-ಸಂದೀಪ.ಯು.ಎಲ್,ಕರುನಾಡ ಕಂದ ನ್ಯೂಸ್,ಸೊರಬ