ನನ್ನ ಬಾಜು ಊರ ಜಾತ್ರ್ಯಾಗ
ನನ್ನ ಹಿಂದ ನೀ ಬರುವಾಗ
ಕಳ್ಳಿತರ ಕದ್ದು ನೋಡಿ ಆಗ
ನಾನು ನೋಡಿನಿ ನಿನಗ ಈಗ//
ಎಷ್ಟು ಚಂದ ನಿನ್ನ ನಡಿಗೆ ನಿತ್ತು ನೋಡುವಂಗ
ಬಂದಾರ ಬಾರ ಜನದಾಗ ಜಾತ್ರೆ ಮಾಡುವಂಗ
ಜನ ಜಂಗುಳಿ ಜಾಸ್ತಿ ಆಯ್ತಾ ನೋಡ ಈಗ
ಜಾತ್ರೆಯ ಜನದಾಗ ಸಿಕ್ಕಿದೆ ನೋಡ ಈಗ//
ಕಂಡಂಗ ಕರಿಬೇಡ ನೋಡ
ಜಾತ್ರೆಯ ಜೇಬು ಜತನ ನೋಡ
ಎಷ್ಟಂತ ನಾನು ನಿನಗೆ ಸಂದೇಶ ಮಾಡಲಿ ನೋಡ
ಹೊಸ ಹುಮ್ಮಸು ಮುಖದಲ್ಲಿ ಮೂಡಿದೆ ನೋಡ//
ಸಂದೇಶ ಮಾಡೋಕೆ ಇಲ್ಲಿ ಕುಳಿತಿದ್ದೆ ನೋಡ
ಜಾಲಬಂದ ಸಿಗುತ್ತಾಇಲ್ಲ ಇಂದು ನೋಡ
ತಮಾಷೆ ಬೇಜಾರಾಗದೆ ಬಂದು ಹೋಗು ನೋಡು
ಗುಡಿಯ ಮುಂದೆ ಸುಮ್ಮನೆ ಮನಸ್ಸಿಗೆ ನೋಯಿಸಬೇಡ
ಹುಮ್ಮಸು ತುಂಬಿದೆ ಮನದಲ್ಲಿ ಕಷ್ಟಕೆ ಮುಹೂರ್ತವೆ ದಾರಿ//
-ಮಹಾಂತೇಶ ಖೈನೂರ