ಕಲಬುರಗಿ ಜಿಲ್ಲೆಯ ಯಡ್ರಾಮಿ ಹಾಗೂ ಚಿಗರಳ್ಳಿ ಮುಖ್ಯ ರಸ್ತೆ ವರ್ಷಗಳಾದರೂ ಕಾಮಗಾರಿ ಮುಗಿಯುವ ಯಾವ ಲಕ್ಷಣಗಳು ಕಾಣುತ್ತಿಲ್ಲ ಯಡ್ರಾಮಿಯ ಮುಖ್ಯ ರಸ್ತೆಯಂದು ಕರೆಯಲ್ಪಡುವ ಈ ಮಾರ್ಗದಲ್ಲಿ ಸಾವಿರಾರು ವಾಹನ ಚಾಲಕರಿಗೆ ಅಪಾಯ ಎದುರಾದ ಹಲವು ನಿದರ್ಶನಗಳು ಈ ಮುಖ್ಯ ರಸ್ತೆಯ ಮಾರ್ಗದಲ್ಲಿ ಸರಣಿ ಅಪಘಾತಗಳೇ ಸಾಕ್ಷಿ ಇದಕ್ಕೆ ಸಂಬಂಧಪಟ್ಟ ತಾಲೂಕಿನ ಜನಪ್ರತಿನಿಧಿ ಗಮನಹರಿಸಬೇಕು ಯಾಕಂದರೆ ಹಲವಾರು ವರ್ಷಗಳಾದರೂ ಯಡ್ರಾಮಿ ತಾಲೂಕು ಹಾಗೂ ಚಿಗರಹಳ್ಳಿ ಮಾರ್ಗ ಮಧ್ಯೆ ರಸ್ತೆ ಕಾಮಗಾರಿ ಆಮೆಗತಿಯಲ್ಲಿ ಕುಂಟುತ್ತಾ ಸಾಗುತ್ತಿದೆ ಈ ರಸ್ತೆ ಸಂಪೂರ್ಣ ಮುಗಿಯುವ ಸೂಚನೆ ವರುಷವಾದರೂ ರಸ್ತೆ ಕಾಮಗಾರಿ ಇನ್ನೂ ಸಂಪೂರ್ಣವಾಗಿ ಮುಗಿಯುವ ಅಂತ ತಲುಪಿಲ್ಲ ಹಾಗಾದ್ರೆ ಇದಕ್ಕೆ ಹೊಣೆಗಾರರು ಯಾರು ಜೇವರ್ಗಿ ಕ್ಷೇತ್ರದ ಶಾಸಕರೇ ಲೋಕೋಪಯೋಗಿ ಇಲಾಖೆ ಅಧಿಕಾರಿಗಳೇ ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಏನು ಮಾಡುತ್ತಿದ್ದಾರೆಯೋ ಆ ಯಮಧರ್ಮನೇ ಬಲ್ಲ ಎಂದು ಯಡ್ರಾಮಿ ತಾಲೂಕ ಗಾಣಿಗ ಸಮಾಜ ಪ್ರಧಾನ ಕಾರ್ಯದರ್ಶಿಯಾದ ಶಂಕರ್ ಗೌಡ ಕನ್ನೊಳ್ಳಿ ಸುಂಬಡ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
