ಮುಂಡಗೋಡ:ತಾಲೂಕ ಆಸ್ಪತ್ರೆ ಮುಂಡಗೋಡದ ಡಯಾಲಿಸಿಸ್ ವಿಭಾಗದಲ್ಲಿ ಸಾಕಷ್ಟು ದಿನಗಳಿಂದ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳು,ಪ್ರತಿನಿತ್ಯ ಡಯಾಲಿಸಿಸ್ ಮಾಡಿಸಲೇಬೇಕಾದ ಅನಿವಾರ್ಯತೆ ಇದ್ದೆ ಇದೆ.ಆದರೆ ಪ್ರಸ್ತುತ ನಡೆಯುತ್ತಿರುವ ಡಯಾಲಿಸಿಸ್ ಕೇಂದ್ರಗಳ ಸಿಬ್ಬಂದಿಗಳು ಮಾಡುತ್ತಿರುವ ವೇತನ ಪಾವತಿ ಕುರಿತ ಮುಷ್ಕರದಿಂದ ಡಯಾಲಿಸಿಸ್ ರೋಗಿಗಳಿಗೆ ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ದೊರೆಯುತ್ತಿಲ್ಲ, ಇದರಿಂದ ರೋಗಿಗಳಿಗೆ ಪ್ರಾಣಾಪಾಯದ ತೊಂದರೆ ಕೂಡ ತಪ್ಪಿದ್ದಲ್ಲ,ಅದರಲ್ಲೂ ಮುಂಡಗೋಡ ತಾಲೂಕಿನ ಗುಂಜಾವತಿ ಮೂಲದ ವ್ಯಕ್ತಿಯೊಬ್ಬರು,ಡಯಾಲಿಸಿಸ್ ಚಿಕಿತ್ಸೆ ದೊರಕದೆ ಕೆಲ ದಿನಗಳ ಹಿಂದೆ ಸಾವನ್ನಪ್ಪಿದ್ದಾರೆ.
ಸಿಬ್ಬಂದಿಗಳ ಮುಷ್ಕರಕ್ಕೆ ಕಾರಣವೇನು?
ಒಟ್ಟು 13 ರೋಗಿಗಳು ಚಿಕಿತ್ಸೆ ಪಡೆಯುತ್ತಿರುವ ಮುಂಡಗೋಡ ತಾಲೂಕ ಆಸ್ಪತ್ರೆಯ ಡಯಾಲಿಸಿಸ್ ವಿಭಾಗದಲ್ಲಿ ಪ್ರತಿ ವಾರ 110 ಪುನರಾವರ್ತಿತ ಚಿಕಿತ್ಸೆಗಳು ರೋಗಿಗಳಿಗೆ ಮಾಡಲಾಗುತ್ತದೆ. ಹೊರಗುತ್ತಿಗೆ ಅಡಿಯಲ್ಲಿ ಇಬ್ಬರು ಸಿಬ್ಬಂದಿಗಳು ಇಲ್ಲಿ ಕಾರ್ಯ ನಿರ್ವಹಣೆ ಮಾಡುತ್ತಿದ್ದು, ಅವರುಗಳಿಗೆ ಸುಮಾರು 4 ತಿಂಗಳ ಸಂಬಳ ಹಾಗೂ 30 ತಿಂಗಳ ESI ಮತ್ತು PF ಸೌಲಭ್ಯವನ್ನು ಇನ್ನುವರೆಗು ನೀಡಲಾಗಿಲ್ಲ,ಹೀಗೆ ಆದರೆ ನಮ್ಮ ಮನೆ ಹೇಗೆ ನೋಡಿಕೊಳ್ಳುವುದು,ಮನೆಯಲ್ಲಿ ಚಿಕ್ಕ ಮಕ್ಕಳು ಹಾಗೂ ವಯಸ್ಸಾದ ತಂದೆ ತಾಯಿ ಇದ್ದಾರೆ,ಆದಷ್ಟು ಬೇಗ ಸರ್ಕಾರ ವೇತನದ ಗೊಂದಲವನ್ನು ಬಗೆಹರಿಸಬೇಕೆಂದು ಹೇಳುತ್ತಾರೆ ಮುಂಡಗೋಡ ಡಯಾಲಿಸಿಸ್ ಕೇಂದ್ರದ ಸಿಬ್ಬಂದಿಗಳಾದ ಸಂತೋಷ್ ಹಾಗೂ ನೇತ್ರಾವತಿ.
ಒಟ್ಟಿನಲ್ಲಿ ಸರ್ಕಾರ ಆದಷ್ಟು ಸಮಸ್ಯೆ ಬಗೆಹರಿಸುವ ಕೆಲಸ ಮಾಡಬೇಕಿದೆ.