ಸುರಪುರ:ಯಾದಗಿರಿ ಜಿಲ್ಲೆಯ ಸುರಪುರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ದೇವಾಪುರ,ಕಕ್ಕೇರಾ ಹೊರವಲಯದ ರೈತರು ಬೆಳೆದ ಭತ್ತದ ಗದ್ದೆಗಳಿಗೆ ಹತ್ತಿಯ ಹೊಲಗಳಿಗೆ ಭೇಟಿ ನೀಡಿ ಭತ್ತ ಮತ್ತು ಹತ್ತಿ ಖರಿದಿಸಲು ಬಂದಂತ ಮಾಲೀಕರಾಗಲಿ ಹಾಗೂ ದಲ್ಲಾಳಿಗಳ ಮಾತಿಗೆ ಮರಳಾಗಿ ನೀವು ಬೆಳೆದಂತೆ ಭತ್ತವನ್ನು ಉದ್ರಿ ನೀಡಬಾರದು.
ಅಪರಿಚಿತ ವ್ಯಕ್ತಿಗೆ ಯಾವುದೇ ಕಾರಣಕ್ಕೂ ನೀವು ಬೆಳೆದಂತ ಭತ್ತ ಮತ್ತು ಹತ್ತಿಯನ್ನು ಮಾರಾಟ ಮಾಡದಂತೆ ಸುರಪುರ ಪೋಲಿಸ್ ಠಾಣೆಯ ದಕ್ಷ ಅಧಿಕಾರಿ ಜನಸ್ನೇಹಿ ದಯಾನಂದ.ಬಿ.ಜಮಾದಾರ್ ಅವರು ತಾಲೂಕಿನ ರೈತರ ಜಮೀನುಗಳಿಗೆ ಭೇಟಿ ನೀಡಿ ಮೋಸ ಹೋಗದಂತೆ ರೈತರಿಗೆ ಜಾಗೃತಿ ಮೂಡಿಸಿದರು.
ಭತ್ತ ಬೆಳೆದಂತ ರೈತರನ್ನು ಉದ್ದೇಶಿಸಿ ಮಾತನಾಡುತ್ತಾ ಈ ಹಿಂದೆ ಭತ್ತ ಮತ್ತು ಹತ್ತಿ ಬೆಳೆಯನ್ನು ಬೆಳೆದಂತ ಹಲವಾರು ರೈತರು ಅಪರಿಚಿತ ವ್ಯಕ್ತಿಗಳಿಗೆ ಭತ್ತ,ಹತ್ತಿ ಕೊಟ್ಟು ಮೊಸ ಹೋದಂತ ಸಾಕಷ್ಟು ಉದಾಹರಣೆಗಳು ಇವೆ ಎಂದು ಹೇಳಿದರು.
ಯಾದಗಿರಿ ಜಿಲ್ಲೆಯಲ್ಲಿ ಇಂತಹ ಪ್ರಕರಣಗಳು ಸಾಕಷ್ಟು ನಡೆದ ನೈಜ್ಯ ಘಟನೆಗಳು ತಾವುಗಳು ಪತ್ರಿಕೆ ಮಾಧ್ಯಮಗಳಲ್ಲಿ ಬಹಳಷ್ಟು ನೋಡರಬಹುದು ಎಂದರು ಆದ ಕಾರಣ ತಮಗೆ ಪರಿಚಯ ಇರದಂತ ವ್ಯಕ್ತಿಗಳಿಗೆ ಭತ್ತ ಮತ್ತು ಹತ್ತಿ ಬೆಳೆಯನ್ನು ಕೊಟ್ಟು ಮೋಸ ಹೋಗಬೇಡಿ ಮತ್ತು ಚೆಕ್ ಕೊಡುತ್ತೇವೆ ಎಂದು ಹೇಳಿದಾಗ ನಮಗೆ ಚೆಕ್ ಬೇಡಾ ಅಂತಾ ಹೇಳಿ ಎಂದು ದಕ್ಷ ಅಧಿಕಾರಿ ದಯಾನಂದ.ಬಿ.ಜಮಾದಾರ್ ಅವರು ರೈತರಿಗೆ ಉತ್ತಮ ಸಲಹೆಗಳು ನೀಡಿ ರೈತರಲ್ಲಿ ಜಾಗೃತಿ ಮೂಡಿಸಿದರು.
ಈ ಸಂದರ್ಭದಲ್ಲಿ ಕಕ್ಕೇರ ಗ್ರಾಮದ ರೈತರು ಹಾಗೂ ದೇವಾಪುರ ಗ್ರಾಮದ ರೈತರು ಉಪಸ್ಥಿತರಿದ್ದರು.
ವರದಿ:ರಾಜಶೇಖರ ಮಾಲಿ ಪಾಟೀಲ್