ಹಾಸನ ಜಿಲ್ಲೆಯ ಅರಕಲಗೂಡು ಕೊಣನೂರು/ ಅರಸೀಕಟ್ಟೆ ಅಮ್ಮನ ದೇವಾಲಯವನ್ನು ತಾಲ್ಲೂಕು ಆಡಳಿತಕ್ಕೆ ಪಡೆಯುವಂತೆ ಅರಸೀಕಟ್ಟೆ ಅಮ್ಮ ಅಚ್ಚುಕಟ್ಟುದಾರರು ಪ್ರತಿಭಟನೆ ನಡೆಸಿ ತಹಶೀಲ್ದಾರ್ ಬಸವರೆಡ್ಡಪ್ಪ ರೋಣದ ರವರಿಗೆ ಮನವಿ ಸಲ್ಲಿಸಿದರು.
ಅರಸೀಕಟ್ಟೆ ಅಮ್ಮನ ದೇವಾಲಯ ಸರ್ಕಾರಿ ಜಾಗದಲ್ಲಿದ್ದು ಸದರಿ ದೇವಾಲಯ ತಹಶೀಲ್ದಾರರ ವಶದಲ್ಲಿದ್ದು ಪೂಜಾಕಾರ್ಯ ನಡೆಯುತ್ತಿರುತ್ತದೆ 2020 ನೇ ಸಾಲಿನ ಖಾಸಗಿ ವ್ಯಕ್ತಿಗಳು ಸಂಘ ರಚಿಸಿಕೊಂಡು ಅನಧಿಕೃತವಾಗಿ ದೇವಸ್ಥಾನವನ್ನು ವಶಕ್ಕೆ ಪಡೆದು “ದೇವಸ್ಥಾನದ ಹಣವನ್ನು ದುರುಪಯೋಗ ಮಾಡುತ್ತಿದ್ದು ತಹಶೀಲ್ದಾರ್ ರವರ ಜಂಟಿ ದೇವಸ್ಥಾನದ ಖಾತೆಯಲ್ಲಿದ್ದು 80 ಲಕ್ಷ ಹಣವನ್ನು ಖಾಸಗಿ ವ್ಯಕ್ತಿಗಳಿಗೆ ವರ್ಗಾವಣೆ ಮಾಡಿದ್ದಾರೆ ಅವ್ಯವಹಾರ ನಡೆಯುತ್ತಿದ್ದು ಕೂಡಲೇ ದೇವಸ್ಥಾನವನ್ನು ತಾಲ್ಲೂಕು ಆಡಳಿತಕ್ಕೆ ಪಡೆಯುವಂತೆ ಮನವಿ ಪತ್ರವನ್ನು ಓದಿ ಸೂಕ್ತ ವಾಗಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.ಈ ಸಂದರ್ಭದಲ್ಲಿ ಶ್ರೀನಿವಾಸ್ ಮೂರ್ತಿ,ಮಂಜುನಾಥ್,ನವೀನ್,ಮೋಹನ,ಬಾಣದಹಳ್ಳಿ ಗಣೇಶ್,ಮನು,ಪಟೇಲ್ ಮಂಜೇಗೌಡ,ನಾಗಮ್ಮ,ರೇಣುಕಮ್ಮ ಉಪಸ್ಥಿತರಿದ್ದರು
ವರದಿ:ಸುಧೀಂದ್ರ ಡಿ
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.