ಶುಲ್ಕ ಹೆಚ್ಚಳ ಮಾಡದಿದ್ದರೆ ಡಿ.೧೫ ರಿಂದ ತೆಪ್ಪೆ ನಡೆಸುವುದು ಸ್ಥಗಿತ
ಚಾಮರಾಜನಗರ:ಜಿಲ್ಲೆಯ ಪ್ರವಾಸಿತಾಣವಾದ ಹೊಗೆನಕಲ್ ಜಲಪಾತ ವೀಕ್ಷಣೆಯ ಪ್ರವಾಸಿ ತೆಪ್ಪದ ಶುಲ್ಕವನ್ನು ಹೆಚ್ಚಿಸುವಂತೆ ಒತ್ತಾಯಿಸಿ ಹನೂರು ತಾಲೂಕಿನ ಗೋಪಿನಾಥಂ ಮಾರಿ ಕೊಟ್ಟಾಯಿ ಗ್ರಾಮದ ಬೋಟ್ ಮೆನ್ ಸಂಘದ ಪದಾಧಿಕಾರಿಗಳು ಕಾಂಗ್ರೆಸ್ ಓಬಿಸಿ ವಿಭಾಗದ ರಾಜ್ಯ ಕಾರ್ಯದರ್ಶಿ ಸಿದ್ದರಾಜು ಹೆಬ್ಬಸೂರು ಅವರ ನೇತೃತ್ವದಲ್ಲಿ ನಗರದ ಜಿಲ್ಲಾಡಳಿತ ಭವನದಲ್ಲಿ ಜಿಲ್ಲಾಧಿಕಾರಿ ಶಿಲ್ಪಾನಾಗ್ ಅವರಿಗೆ ಮನವಿ ಸಲ್ಲಿಸಲಾಯಿತು.
ಹೊಗೆನಕಲ್ ಜಲಪಾತ ವೀಕ್ಷಣೆಗೆ ತೆಪ್ಪದಲ್ಲಿ ೪ ಪ್ರವಾಸಿಗರಿಗೆ ಒಂದು ತೆಪ್ಪದಂತೆ ನಡೆಸಲು ಕಳೆದ ೧೦-೧೨ ವರ್ಷಗಳ ಹಿಂದೆ ರಾಜ್ಯ ಸರ್ಕಾರ (ಅರಣ್ಯ ಇಲಾಖೆ) ಶುಲ್ಕವಾಗಿ ೫೦೦ ರೂ.ನಿಗದಿಪಡಿಸಿತು. ಆದೆ ಅದೇ ಸಮಯದಲ್ಲಿ ತಮಿಳುನಾಡು ಸರ್ಕಾರ ೧೫೦೦ ರೂಪಾಯಿಗಳನ್ನು ಶುಲ್ಕವನ್ನಾಗಿ ವಸೂಲಿ ಮಾಡುತ್ತಿದೆ ಆದ್ದರಿಂದ ಕಡಿಮೆ ದರದಲ್ಲಿ ತೆಪ್ಪ ನಡೆಸಿ,ಜೀವನ ಸಾಗಿಸುವುದು ಕಷ್ಠಕರವಾಗಿರುವುದರಿಂದ ಪ್ರತಿ ಪ್ರವಾಸಿಗರ ಒಂದು ತೆಪ್ಪಕ್ಕೆ ಕನಿಷ್ಠ ೧೫೦೦ ರೂ.ಶುಲ್ಕವನ್ನು ನಿಗದಿಪಡಿಸಿ ಆದೇಶಿಸಬೇಕಾಗಿ ಇಲ್ಲವಾದಲ್ಲಿ ಡಿ. ೧೫ ರಿಂದ ತೆಪ್ಪ ನಡೆಸುವುದನ್ನು ಸಂಘದ ವತಿಯಿಂದ ಸ್ಥಗಿತಗೊಳಿಸುವುದಾಗಿ ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿರುವ ಮನವಿಯಲ್ಲಿ ಎಚ್ಚರಿಸಿದ್ದಾರೆ.
ಈ ಸಂದರ್ಭದಲ್ಲಿ ಬೋಟ್ ಮೆನ್ ಸಂಘದ ಅಧ್ಯಕ್ಷ ರತ್ನವೇಲು,ಕೆ.ಪಳನಿಸ್ವಾಮಿ,ಪ್ರಶಾಂತ್, ತೆರುಮಾಲ್,ಧರ್ಮರಾಜು,ಮುತ್ತು,ಪಳನಿಸ್ವಾಮಿ ಇತರರು ಹಾಜರಿದ್ದರು.
ವರದಿ-ಪ್ರದೀಪ್ ಕುಮಾರ್