ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ನಗರಸಭೆ ವ್ಯಾಪ್ತಿಯಲ್ಲಿ ಬರುವ ಬೀದರ್-ಶ್ರೀರಂಗಪಟ್ಟಣಕ್ಕೆ ಹಾದು ಹೋಗುವ ರಾಜ್ಯ ಹೆದ್ದಾರಿ ಶ್ರೀ ಶರಣಬಸಪ್ಪ ನಿಷ್ಠಿ ಇಂಜಿನಿಯರಿಂಗ್ ಕಾಲೇಜನಿಂದ ನಾಲ್ವಡಿ ರಾಜಾ ವೆಂಕಟಪ್ಪ ನಾಯಕ ವೃತ್ತದ ಮಾರ್ಗವಾಗಿ ಸುರಪುರ ಹೊರ ವಲಯದಿಂದ ಹಾದು ಹೋಗುವ ರಾಜ್ಯ ಹೆದ್ದಾರಿ ರಸ್ತೆಯ ಅಕ್ಕ ಪಕ್ಕದಲ್ಲಿ ಹೈಮಾಸ್ಟ್ ದೀಪಗಳು ರೋಡ್ ಬ್ರೇಕ್ ಗಳು ಹಾಗೂ ಜನ ಸಾಮಾನ್ಯರಿಗೆ ತೊಂದರೆ ಆಗದಂತೆ ತಡೆಗೋಡೆ ನಿರ್ಮಿಸುವಂತೆ ಒತ್ತಾಯಿಸಿ ಜಯ ಕರ್ನಾಟಕ ರಕ್ಷಣಾ ಸೇನೆ ತಾಲೂಕ ದಂಡಾಧಿಕಾರಿಗಳ ಕಚೇರಿಯ ಮುಂಭಾಗದಲ್ಲಿ ಪ್ರತಿಭಟನೆ ಮಾಡಿ ಮನವಿ ಪತ್ರವನ್ನು ಸಲ್ಲಿಸಿದರು.
ಈ ಪ್ರತಿಭಟನೆಯಲ್ಲಿ ಜಯ ಕರ್ನಾಟಕ ರಕ್ಷಣಾ ಸೇನೆಯ ಮುಖಂಡರು ಮಾತನಾಡಿದರು ಈ ಒಂದು ರಸ್ತೆಯಲ್ಲಿ ಭಾರೀ ವಾಹನಗಳು,ಕಾರುಗಳು, ಟ್ರ್ಯಾಕ್ಟರ್,ಎತ್ತಿನ ಬಂಡಿಗಳು,ಹೆದ್ದಾರಿ ಮೇಲೆ ತಿರುಗಾಡುತ್ತಿದ್ದು ತುಂಬಾ ಜನ ಸಾಂದ್ರತೆಯುಳ್ಳ ರಸ್ತೆಯಾಗಿದ್ದು ರಾಜ್ಯ ಹೆದ್ದಾರಿ ಹೊಂದಿಕೊಂಡು ಶ್ರೀ ಶರಣಬಸಪ್ಪ ಅಪ್ಪ ನಿಷ್ಠಿ ಕಾಲೇಜು,ಬಸ್ ಡಿಪೋ, ಅಗ್ನಿ ಶಾಮಕ ಠಾಣೆ,ಅಂಗಡಿ ಮುಗ್ಗಟ್ಟಗಳು,ವಸತಿ ಗೃಹಳು ಹಾಗೂ ಲಾಡ್ಜ್ ಗಳಿದ್ದು ರಾಜ್ಯ ಹೆದ್ದಾರಿಯ ಮೇಲೆ ವಾಹನ ಸವಾರರು ವೇಗವಾಗಿ ಚಲಿಸುವುದರಿಂದ ಸಾಕಷ್ಟು ಅಪಘಾತ ಸಂಭವಿಸುತ್ತಿರುವುದು ಬಹಳಷ್ಟು ಉದಾಹರಣೆಗಳಿವೆ ಎಂದು ಪ್ರತಿಭಟನಕಾರರು ಹೇಳಿದರು.ಕೆಲವು ದಿನಗಳ ಹಿಂದೆ ನಮ್ಮ ಕರ್ನಾಟಕ ರಕ್ಷಣಾ ಸೇನೆ ತಾಲೂಕು ಅಧ್ಯಕ್ಷ ಮಲ್ಲಪ್ಪ ಕಬಾಡಗೇರಾ ನೇತೃತ್ವದಲ್ಲಿ ನಗರದ ನಗರಸಭೆ ಮುಂಭಾಗದಲ್ಲಿ ಪ್ರತಿಭಟನೆ ಮಾಡಿ ಮನವಿ ಪತ್ರವನ್ನು ಸಲ್ಲಿಸಿದರು ಯಾವ ಒಬ್ಬ ಅಧಿಕಾರಿಗಳು ಕೂಡಾ ಸ್ಪಂದಿಸುತ್ತಿಲ್ಲ ಇಂತಹ ನಾಲಾಯಕ್ ಅಧಿಕಾರಿಗಳಿಗೆ ಕೂಡಲೇ ಅಮಾನತು ಮಾಡಬೇಕು ಎಂದು ಒತ್ತಾಯಿಸಿದರು.ಸುರಪುರ ನಗರದ ಹೊರವಲಯದ ರೈತರು ಮೃತ್ಯುವಿಗೆ ಆವಾಹನ ನೀಡುತ್ತದೆ ಮುಂದಿನ ದಿನಗಳಲ್ಲಿ ಜನ ಸಾಮಾನ್ಯರಿಗೆ ತೊಂದರೆ ಆಗದಂತೆ ನೋಡಿಕೊಳ್ಳಬೇಕು ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಉಗ್ರವಾದ ಹೋರಾಟ ಮಾಡುತ್ತೇವೆ ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಜಯ ಕರ್ನಾಟಕ ರಕ್ಷಣಾ ಸೇನೆಯ ಮುಖಂಡರಾದ ಶಿವುರಾಜ್ ವಗ್ಗರ್, ಶರಣಪ್ಪ ಭೈರಿಮಡ್ಡಿ,ಮಲ್ಲಪ್ಪ ಕಬಾಡಗೇರಾ, ತಾಲೂಕು ಅಧ್ಯಕ್ಷ ,ರಾಜು ದರಬಾರಿ,ಕೃಷ್ಣಾ ಹಾವಿನ್,ರಾಜು ಹುಂಡೇಕಲ್,ತಿಪ್ಪಣ್ಣ ಖಾನಿಕೇರಾ, ರವಿ ಬಿಚ್ಚತ್ತಿಕೇರಾ,ರಾಘವೇಂದ್ರ ಗೋಗಿಕೇರಾ,ಧನರಾಜ್ ರಾಠೋಡ,ರಮೇಶ್ ಓಕುಳಿ,ರಮೇಶ ಭಂಡಾರಿ ಸೇರಿದಂತೆ ಅನೇಕ ಕಾರ್ಯಕರ್ತರು ಈ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ವರದಿ:ರಾಜಶೇಖರ ಮಾಲಿ ಪಾಟೀಲ್