ಮಹಾ ಪರಿನಿರ್ವಾಣ ದಿನದಂದು ಸರ್ಕಾರಿ ಬಸ್ ನಿಲ್ದಾಣ ಮುಂಭಾಗ ವೃತವನ್ನು ಅಂಬೇಡ್ಕರ್ ವೃತ್ತ ಎಂದು ನಾಮಕರಣ ಮಾಡುವಂತೆ ಒತ್ತಾಯ
ಕೊಟ್ಟೂರು:ಪಟ್ಟಣದ ಅಂಬೇಡ್ಕರ್ ನಗರ ಮುಂಭಾಗದಲ್ಲಿ ಅಂಬೇಡ್ಕರ್ ರವರ 67 ಮಹಾ ಪರಿ ನಿರ್ವಾಣ ದಿವಸದಂದು ದಲಿತ ಸಮುದಾಯ ವತಿಯಿಂದ ಅಂಬೇಡ್ಕರ್ ರವರ ಭಾವ ಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಪುಷ್ಪ ನಮನವನ್ನು ಸಲ್ಲಿಸಿದರು ನಂತರ ನೂರಾರು ಸಂಖ್ಯೆಯಲ್ಲಿ ಯುವಕರು ಹಾಗೂ ಮುಖಂಡರು ಮೇಣದ ಬತ್ತಿ ಹಿಡಿದು ಜಾಥ ಕೈಗೊಂಡು ಸರ್ಕಾರಿ ಬಸ್ ನಿಲ್ದಾಣದ ಮುಂಭಾಗದ ವರೆಗೂ ಘೋಷಣೆಗಳನ್ನು ಕೂಗುತ್ತಾ ಸಾಗಿದರು ಸರ್ಕಲ್ ಸುತ್ತಲೂ ಮಾನವ ಸರಪಳಿ ನಿರ್ಮಿಸಿ ಸಂವಿಧಾನ ಪೀಠಕೆಯನ್ನು ಓದುವುದರ ಮೂಲಕ ಅಂಬೇಡ್ಕರ್ ರವರ ಮಹಾ ಪರಿ ನಿರ್ವಾಣ ಅರ್ಥೈಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಡಿಎಸ್ಎಸ್ ಜಿಲ್ಲಾಧ್ಯಕ್ಷ ಬದ್ದಿ ಮರಿಸ್ವಾಮಿ ಯವರು ಅಂಬೇಡ್ಕರ್ ರವರು ತಮ್ಮ ಜೀವನದುದ್ದಕ್ಕೂ ನಿರಂತರ ಹೋರಾಟ ಕಷ್ಟ ನೋವುಗಳನ್ನು ಅನುಭವಿಸಿ ಸಮಾಜದಲ್ಲಿ ಕಟ್ಟ ಕಡೆಯ ವ್ಯಕ್ತಿಗೆ ಸ್ಥಾನ,ಮಾನ,ನ್ಯಾಯ ದೊರಕುವಂತೆ ನಮ್ಮ ದೇಶಕ್ಕೆ ಅತ್ಯುನ್ನತ ಸಂವಿಧಾನವನ್ನು ನೀಡಿದರು.
ಇವರು ಒಂದೇ ಜಾತಿ,ಧರ್ಮಕ್ಕೆ ಸೀಮಿತ ಇಲ್ಲ ಎಲ್ಲಾ ಸಮುದಾಯದವರ,ಬಡವರ,ಶೋಷಿತ ವರ್ಗದವರ,ಮಹಿಳೆಯರ,ಪರ ಇವರ ಸಿದ್ದಾಂತ ತಾರ್ಕಿಕವಾಗಿತ್ತು ಹಾಗೂ ಇವರ ಪುಣ್ಯ ಸ್ಮರಣೆ ದಿವಸ ದೇಶದ ಎಲ್ಲಾ ಸಮುದಾಯದವರು ದೀಪ ಬೆಳಗುವ ಮೂಲಕ ನಮನವನ್ನು ಸಲ್ಲಿಸಬೇಕು ಎಂದರು ಹಾಗೂ ಕೊಟ್ಟೂರಿನ ಸರ್ಕಾರಿ ಬಸ್ ನಿಲ್ದಾಣ ಮುಂಭಾಗದ ಸರ್ಕಲ್ ನಲ್ಲಿ ಅಂಬೇಡ್ಕರ್ ರವರ ಮೂರ್ತಿ ಪ್ರತಿಷ್ಠಾಪನೆ ಮಾಡಿ,ಅಂಬೇಡ್ಕರ್ ಸರ್ಕಲ್ ಎಂದು ನಾಮಕರಣ ಮಾಡಬೇಕು ಎಂದು ಎಲ್ಲ ದಲಿತ ಸಮುದಾಯದವರ ಪರವಾಗಿ ಈ ಸಂದರ್ಭದಲ್ಲಿ ಸರ್ಕಾರಕ್ಕೆ ಒತ್ತಾಯ ಮಾಡಿದರು.
ಅಂಬೇಡ್ಕರ್ ರವರ ನೀಡಿರುವ ಸಂವಿಧಾನ ಅಡಿಯಲ್ಲಿ ಈ ದೇಶದ ಎಲ್ಲ ರಾಜ್ಯಗಳ ಇಲಾಖೆಗಳು ನಡೆತ್ತಿವೆ ಇವರು ಪರಿನಿರ್ವಾಣ ಹೊಂದಿದ್ದರು ಕೂಡಾ ತತ್ವ ಸಿದ್ಧಾಂತಗಳು ಸೂರ್ಯ ಚಂದ್ರ ಇರುವವರೆಗೂ ಜೀವಂತವಾಗಿ ಇರುತ್ತವೆ ಹಾಗೇ ಅಂಬೇಡ್ಕರ್ ಅವರನ್ನು ಜೀವಂತವಾಗಿ ಉಳಿಸಿಕೊಳ್ಳಬೇಕಾದರೆ ಪ್ರತಿಯೊಬ್ಬರೂ ಜ್ಞಾನವನ್ನು ಸಂಪಾದಿಸುವ ಮೂಲಕ ಅರ್ಥವನ್ನು ಕಲ್ಪಿಸಿದಂತಾಗುತ್ತದೆ ಎಂದು ವಕೀಲ ಹನುಮಂತಪ್ಪ ನವರು ಮಾತನಾಡಿದರು.
ಈ ಸಂದರ್ಭದಲ್ಲಿ ಶಿಕ್ಷಕ ಕೊಟ್ರೇಶ್,ಅಂಬೇಡ್ಕರ್ ಸಂಘದ ತಾಲೂಕು ಅಧ್ಯಕ್ಷ ಬದ್ದಿ ದುರುಗೇಶ್, ಡಿಎಸ್ಎಸ್ ಭೀಮವಾದ ಜಿಲ್ಲಾ ಸಂಚಾಲಕ ರಾಂಪುರ ಸುರೇಶ,ಮಾಜಿ ಸೈನಿಕ ಅಜ್ಜಪ್ಪ,ಮೈಲಪ್ಪ, ಬದ್ದಿ.ದುರುಗೇಶಪ್ಪ,ಶ್ರೀನಿವಾಸ್,ಪಿ.ಚಂದ್ರಶೇಖರ್, ಕನ್ನಕಟ್ಟಿ ಭರ್ಮಪ್ಪ,ಬಣಕಾರ್ ಪರಶುರಾಮ್,ಎಲ್. ಕುಬೇರಪ್ಪ,ಕೊಲ್ಲಾರಪ್ಪ, ಮುಂತಾದ ದಲಿತ ಕಾಲೋನಿಯ ಯುವಕರು ಇದ್ದರು.