ಯಾದಗಿರಿ:ಶಹಾಪುರ ತಾಲೂಕಿನ ಒಕ್ಕಲುತನ ಹುಟ್ಟುವಳಿ ಸಹಕಾರ ಸಂಘ ನಿಯಮಿತ ಗೋಧಾಮಿನಲ್ಲಿ ಸಂಗ್ರಹಿಸಿಟ್ಟ ಸುಮಾರು 6047.77 ಕ್ವಿಂಟಲ್ ಆಹಾರ ಪಡಿತರ ಧಾನ್ಯಗಳನ್ನು ಕಾಳಸಂತೆಯಲ್ಲಿ ಮಾರಾಟ ಮಾಡಿ ಪಡಿತರದಾರರಿಗೆ ಮೋಸ ಮಾಡುತ್ತಿರುವುದು ಇದೇನು ಹೊಸದೇನಲ್ಲ ಸುಮಾರು ವರ್ಷಗಳಿಂದ ನಡೆದಿದೆ ಹಾಗೂ ಆಹಾರ ಪಡಿತರ ಧಾನ್ಯ ಸಾಗಾಣಿಕೆಯನ್ನು ಸುರಪುರ ನಗರದ ಗಿರೀಶ್ ಎಸ್ ಮಾಳದಕರ್ ಎಂಬುವಬರಿಗೆ ಸುಮಾರು 6-7 ವರ್ಷಗಳಿಂದ ಟೆಂಡರ್ ಆಗಿದ್ದು ಇದಕ್ಕೂ ಮುಂಚೆ ಹಲವಾರು ಬಾರಿ ಗೊತ್ತಿಲ್ಲದ ಹಾಗೆ ಪಡಿತರ ಆಹಾರ ಧಾನ್ಯಗಳು ಹಾಲಿನ ಪೌಡರ್ ಇತ್ಯಾದಿ ಸಾಮಾಗ್ರಿಗಳು ಕಾಳಸಂತೆಯಲ್ಲಿ ಮಾರಾಟ ಮಾಡಿರುವ ಬಗ್ಗೆ ಶಂಕೆ ವ್ಯಕ್ತಪಡಿಸಿದ ಕರ್ನಾಟಕ ರಕ್ಷಣಾ ವೇದಿಕೆ ಚಳುವಳಿ ಡಾ.ಚಲಪತಿಗೌಡ ಬಣದ ಯಾದಗಿರಿ ಜಿಲ್ಲಾಧ್ಯಕ್ಷ ಶಿವುಮೋನಯ್ಯ.ಎಲ್.ಡಿ ನಾಯಕ ಆಹಾರ ಪಡಿತರ ಧಾನ್ಯಗಳನ್ನು ಕಾಳಸಂತೆಯಲ್ಲಿ ಮಾರಾಟ ಮಾಡುವವರು ಜೊತೆ ಗೋಧಾಮಿನ ವ್ಯವಸ್ಥಾಪಕರು,ಸಿಬ್ಬಂದಿಗಳು ಶ್ಯಾಮಿಲಾಗಿದ್ದು ಅವರನ್ನು ತನಿಖೆಗೆ ಒಳಪಡಿಸ ಬೇಕು ಮಾಲು ಉಗ್ರಾಣಗಳಿಂದ ಹೊರ ಹೋಗಬೇಕಾದರೆ ಗೋಧಾಮಿನ ವ್ಯವಸ್ಥಾಪಕರು,ಸಿಬ್ಬಂದಿಗಳಿಗೆ ಗೊತ್ತಿಲ್ಲದ ಮಾಲು ಹೊರಗೆ ಹೋಗಲು ಹೇಗೆ ಸಾಧ್ಯ ಎಂಬುದು ಯಕ್ಷ ಪ್ರಶ್ನೆಯಾಗಿದೆ ಎಂದರು
ಇದಕ್ಕೂ ಮುಂಚೆ ಸುರಪುರ ಪಟ್ಟಣದ ಆಹಾರ ಪಡಿತರ ಧಾನ್ಯ ಸಾಗಾಣಿಕೆಯನ್ನು ನಗರದ ಸುರೇಶ ತಂಬಾಕೆ ಎಂಬುವವರಿಗೆ ನೀಡಲಾಗಿತ್ತು.
ಅವರು ಕೂಡಾ ಇದೆ ರೀತಿ ಆಹಾರ ಪಡಿತರ ಧಾನ್ಯಗಳನ್ನು ಕಾಳಸಂತೆಯಲ್ಲಿ ಮಾರಾಟ ಮಾಡಲು ಹೋಗುತ್ತಿದ್ದಾಗ ಮಾಲು ಸಮೇತ ಸಿಕ್ಕ ಮೇಲೆ ಇವರ ಮೇಲೆ ಪ್ರಕರಣ ದಾಖಲಾಗಿ ಇವರ ಪರವಾನಿಗೆಯನ್ನು ರದ್ದುಪಡಿಸಲಾಗಿದೆ ಎಂದರು.
ಈಗಲೂ ಕೂಡಾ ಗಿರೀಶ್ ಎಸ್ ಮಾಳದಕರ್ ಎಂಬುವವರ ಪರವಾನಿಗೆಯ ಮೇಲೆ ಸುರಪುರ ನಗರದ ಸುರೇಶ್ ತಂಬಾಕೆ ಅವರು ಎಲ್ಲಾ ಬಿಲ್ಲುಗಳಿಗೆ ಡುಪ್ಲಿಕೇಟ್ ಸಹಿ ಮಾಡಿ ಮೋಸ ಮಾಡುತ್ತಿದ್ದರು ಸಹ ಸಂಬಂಧಪಟ್ಟ ಅಧಿಕಾರಿಗಳು ಮೌನಕ್ಕೆ ಶರಣಗಿದ್ದು ಯಾಕೆ?ಎಂಬುದು ತನಿಖೆಯಿಂದ ತಿಳಿದು ಬರಬೇಕಾಗಿದೆ.
ಈ ಒಂದು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತಪ್ಪಿತಸ್ಥ ಗೋಧಾಮಿನ ವ್ಯವಸ್ಥಾಪಕರು ಹಾಗೂ ಸಿಬ್ಬಂದಿಗಳನ್ನು ತನಿಖೆಗೆ ಒಳಪಡಿಸಿ ಕಳ್ಳತನವಾದ ಆಹಾರ ಪಡಿತರ ಧಾನ್ಯಗಳನ್ನು ಮರಳಿ ಗೋಧಾಮಿಗೆ ತರಿಸಿ ಪಡಿತರದಾರರಿಗೆ ಹಂಚಿ ಸಾಗಾಣಿಕಯ ಗುತ್ತಿಗೆದಾರರ ಪರವಾನಿಗೆಯನ್ನು ರದ್ದುಪಡಿಸಿ ಕ್ರಿಮಿನಲ್ ಪ್ರಕರಣವನ್ನು ದಾಖಲಿಸಿ ಕ್ರಮ ಕೈಗೊಳ್ಳಬೇಕು ಒಂದು ವೇಳೆ ವಿಳಂಬ ನೀತಿ ತೋರಿದರೆ ನಮ್ಮ ಸಂಘಟನೆ ವತಿಯಿಂದ ಉಗ್ರವಾದ ಹೋರಾಟ ಮಾಡಲಾಗುತ್ತದೆ ಎಂದು ಎಚ್ಚರಿಕೆ ನೀಡುತ್ತಾ ಜಿಲ್ಲಾಧಿಕಾರಿಗಳ ಕಾರ್ಯಾಲಯಕ್ಕೆ ಮನವಿಪತ್ರವನ್ನು ಸಲ್ಲಿಸಿದರು.
ಈ ಸಂದರ್ಭದಲ್ಲಿ ವೇದಿಕೆಯ ಮುಖಂಡರಾದ ಎಸ್.ಫಕೀರಪ್ಪ ಯಲ್ಲಪ್ಪ ನಾಯಕ ಇತರರು ಉಪಸ್ಥಿತರಿದ್ದರು.
ವರದಿ:ರಾಜಶೇಖರ ಮಾಲಿ ಪಾಟೀಲ್
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.