ಬಿಡಾಡಿ ದನಗಳನ್ನು ಗೋ ಶಾಲೆಗೆ ಕಳುಹಿಸುವುದು ಯಾವಾಗ ?
ಕೊಟ್ಟೂರು:ಅಭಿವೃದ್ಧಿ ಹೊಂದುತ್ತಿರುವ ಕೊಟ್ಟೂರು ಪಟ್ಟಣದಲ್ಲಿ ವಾಹನಗಳ ದಟ್ಟಣೆ ಈಗಾಗಲೇ ಹೆಚ್ಚಿದ್ದು ವಾಹನ ಸವಾರರೇ ರಸ್ತೆಯಲ್ಲಿ ಮುಂದೆ ಹೋಗಬೇಕಾದರೆ ಖಾಲಿ ಸ್ಥಳ ಹುಡುಕುವಂತಹ ಪರಿಸ್ಥಿತಿ ವಾಹನ ಸವಾರರಿಗೆ ಇದೆ ಇಂಥಹ ಸಂದರ್ಭದಲ್ಲಿ ಕೊಟ್ಟೂರು ಪಟ್ಟಣದಲ್ಲಿ ಬಿಡಾಡಿ ದನಗಳ ಹಾವಳಿ ಹೆಚ್ಚಿದ್ದು,ಬಿಡಾಡಿ ದನಗಳು ರಸ್ತೆ ಮದ್ಯದಲ್ಲಿ ಮಲಗುವುದು,ಒಂದಕ್ಕೊಂದು ಬಡಿದಾಡುವುದು,ರಸ್ತೆ ಮದ್ಯೆಯೇ ನಿಲ್ಲುವುದು ಹೀಗೆ ವಾಹನ ಸವಾರರಿಗೆ ತೊಂದರೆ ಕೊಡುತ್ತವೆ, ಭಾರೀ ವಾಹನಗಳ ಸವಾರರು ಧ್ವನಿವರ್ಧಕಗಳಿಂದ ಶಬ್ಧ ಮಾಡಿದರೂ ದನಗಳು ಮಾತ್ರ ಕ್ಯಾರೆ ಅನ್ನುತ್ತಿಲ್ಲ,ಈ ತೊಂದರೆ ಕೊಟ್ಟೂರು ಪಟ್ಟಣದ ಮುಖ್ಯರಸ್ತೆಗಳಲ್ಲಿ ಹೆಚ್ಚಾಗಿ ಕಂಡು ಬಂದಿದ್ದರೂ ಸಂಬಂಧ ಪಟ್ಟವರು ಸಂಬಂಧವಿಲ್ಲದಂತೆ ಓಡಾಡುತ್ತಿರುವುದು ವಿಪರ್ಯಾಸವೇ ಸರಿ,ಬಿಡಾಡಿ ದನಗಳು ವಾಹನಗಳಿಗೆ ದಾರಿಬಿಡದೆ ಮದವೇರಿದ ಆನೆಗಳಂತೆ ನಿಂತಿರುತ್ತವೆ ಜೊತೆಗೆ ಗುರುದೇವ ಶಾಲಾ ಅವರಣದ ಹತ್ತಿರ ಇವುಗಳು ಹೆಚ್ಚಾನುಹೆಚ್ಚು ಇರುವುದರಿಂದ ಶಾಲೆ ಬಿಟ್ಟನಂತರ ಮಕ್ಕಳು ಮನೆಗೆ ಹೋಗಲು ಭಯಪಡುವಂತಾಗಿದೆ ಬಿಡಾಡಿ ದನಗಳ ಸುದ್ದಿ ಬಂದಾಗ ಮಾತ್ರ ಕೆಲವರಿಗೆ ಗೋ ಶಾಲೆ ನೆನಪಿಗೆ ಬರುತ್ತದೆ ಇನ್ನೂ ಸ್ಥಳಿಯ ಸಂಸ್ಥೆ ಕೂಡ ಇತ್ತ ಗಮನಹರಿಸಿಲ್ಲ ಇದನ್ನೆಲ್ಲಾ ಕಂಡ ಸಾರ್ವಜನಿಕರು ಮತ್ತು ಮಕ್ಕಳ ಪೋಷಕರು ಜಾನುವಾರುಗಳಿಗೆ ಮತ್ತು ಅದಕ್ಕೆ ಸಂಬಂಧ ಪಟ್ಟವರಿಗೆ ಮಕ್ಕಳ ಮೇಲೆ ಬಿಡಾಡಿ ದನಗಳ ಹಾವಳಿ ಆಗುವ ಮುನ್ನ ಎಚ್ಚರ ವಹಿಸಿ ಮುಂದಾಗುವ ಅಪಾಯಗಳನ್ನು ತಡೆಯಬೇಕು, ಆದಷ್ಟು ಬೇಗ ದನಗಳನ್ನು ಗೋ ಶಾಲೆಗೆ ಕಳಿಸುವ ವ್ಯವಸ್ಥೆ ಮಾಡಿದರೆ ಒಳಿತು ಎಂಬುದು ಸಾರ್ವಜನಿಕರ ಅಭಿಪ್ರಾಯ.