ಯಾದಗಿರಿ:ಕಲ್ಬುರ್ಗಿ ನಗರದಲ್ಲಿ ಹಾಡುಹಗಲೆ ನ್ಯಾಯವಾದಿ ಒಬ್ಬರನ್ನು ಸಿನಿಮೀಯ ರೀತಿಯಲ್ಲಿ ಅಟ್ಟಾಡಿಸಿಕೊಂಡು ಹೋಗಿ ಮಾರಾಕಾಸ್ತ್ರಗಳಿಂದ ಬರ್ಬರವಾಗಿ ಕೊಲೆ ಮಾಡಿದ ಹಂತಕರನ್ನು ಬಂಧಿಸುವಂತೆ ಒತ್ತಾಯಿಸಿ ನಿನ್ನೆ ಯಾದಗಿರಿ ಜಿಲ್ಲೆಯ ಸುರಪುರ ತಾಲೂಕ ಗಾಂಧಿ ವೃತ್ತದಲ್ಲಿ ವಕೀಲರ ಸಂಘದಿಂದ ಪ್ರತಿಭಟನೆ ಮಾಡಲಾಯಿತು.
ನ್ಯಾಯವಾದಿ ಈರಣ್ಣಗೌಡ ನ್ಯಾಯಾಲಯಕ್ಕೆ ದ್ವಿಚಕ್ರದ ಮೇಲೆ ಹೋಗುವಾಗ ಅಪಾರ್ಟ್ಮೆಂಟ್ ನ ಕೂಗಳತೆಯ ದೂರದಲ್ಲಿ ಇಬ್ಬರು ದುಷ್ಕರ್ಮಿಗಳು ದ್ವಿಚಕ್ರ ವಾಹನವನ್ನು ತಡೆದು ಕಣ್ಣಿಗೆ ಖಾರದ ಪುಡಿ ಎರಚಿದರು.
ಖಾರದ ಪುಡಿ ಎರಚಿದ ಕೂಡಲೇ ನ್ಯಾಯವಾದಿ
ಈರಣ್ಣಗೌಡ ದ್ವಿಚಕ್ರ ವಾಹನವನ್ನು ಬಿಟ್ಟು ಅಪಾರ್ಟ್ಮೆಂಟ್ ನ ಕಡೆ ಓಡಲಾರಂಭಿಸಿದರು.ಇಬ್ಬರು ಹಂತಕರು ಹರಿತವಾದ ಕತ್ತಿಯನ್ನು ಹಿಡಿದು ಬೆನ್ನಟ್ಟಿ ಅಪಾರ್ಟ್ಮೆಂಟ್ ನ ಮೂಲೆಯೊಂದರಲ್ಲಿ ಮಾರಕಾಸ್ತ್ರಗಳಿಂದ ಬರ್ಬರವಾಗಿ ಹಲ್ಲೆ ಮಾಡಿ ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿ ಪರಾರಿಯಾದರು ಎನ್ನಲಾಗಿದೆ ಪರಾರಿಯಾದ ದೃಶ್ಯ ಸಿಸಿ ಸಿಸಿಯಲ್ಲಿ ಸೆರೆಯಾಗಿದೆ.
ಪರಾರಿಯಾದ ಘಟನೆಯು ನಗರದ ಜೇವರ್ಗಿ ರಸ್ತೆಯ ಸಾಯಿ ಮಂದಿರ ಗಂಗಾ ವಿಹಾರ ಅಪಾರ್ಟ್ಮೆಂಟ್ ನಲ್ಲಿ ಗುರುವಾರ ಬೆಳಿಗ್ಗೆ 10:00 ಗಂಟೆ ಸುಮಾರಿಗೆ ಘಟನೆ ನಡೆದಿದೆ.
ಮೃತ ನ್ಯಾಯವಾದಿ ಈರಣ್ಣಗೌಡ ತಂದೆ ಅಂಬರಾಯ್ ಪೋಲಿಸ್ ಪಾಟೀಲ ಉದನೂರ್ ಅವರ ವಯಸ್ಸು 41 ಎಂದು ಗುರುತಿಸಲಾಗಿದೆ.
ಹಾಡುಹಗಲಲ್ಲೆ ನ್ಯಾಯವಾದಿ ಒಬ್ಬರನ್ನು ಸಿನಿಮೀಯ ರೀತಿಯಲ್ಲಿ ಮಾರಕಾಸ್ತ್ರಗಳಿಂದ ಬರ್ಬರವಾಗಿ ಕೊಚ್ಚಿ,ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿ ಪರಾರಿಯಾದ ಹಂತಕರನ್ನು 24 ಗಂಟೆಯಲ್ಲೆ ಬಂಧಿಸಿ ಮರಣದಂಡನೆ ಶಿಕ್ಷೆಗೆ ಗುರಿಪಡಿಸಬೇಕು ಎಂದು ದಂಡಾಧಿಕಾರಿಗಳಿಗೆ ಮನವಿ ಪತ್ರವನ್ನು ಸಲ್ಲಿಸಿದರು.
ಈ ಸಂದರ್ಭದಲ್ಲಿ ವಕೀಲರ ಸಂಘದ ತಾಲೂಕು ಪದಾಧಿಕಾರಿಗಳು ರಮಾನಂದ ಕವಲಿ, ಹಣಮಂತ್ರಾಯ ಕಟ್ಟಿಮನಿ,ನಂದಕುಮಾರ್ ಕನ್ನೆಳ್ಳಿ, ಮಲ್ಲಯ್ಯ ನಾಯಕ,ಮಲ್ಲಿಕಾರ್ಜುನ ಮಂಗಿಹಾಳ, ನಿಂಗಣ್ಣ ಚಿಂಚೋಡಿ,ದೇವಿಂದ್ರಪ್ಪ ಬೇವಿನಕಟ್ಟಿ, ಸಂಗಣ್ಣ ಬಾಕಲಿ,ಗೋಪಾಲ್ ವಜ್ಜಲ,ನಾಗಪ್ಪ ಚವಲಕರ್,ಅಶೋಕ ಕವಲಿ,ಬಲಭೀಮ ನಾಯಕ ದೇವಾಪುರ ಹಾಗೂ ಹಿರಿಯ ವಕೀಲರು ಉಪಸ್ಥಿತರಿದ್ದರು.
ವರದಿ ರಾಜಶೇಖರ ಮಾಲಿ ಪಾಟೀಲ್ ಯಾದಗಿರಿ