ಸುರಪುರ:ಕಕ್ಕೇರಾ ಪಟ್ಟಣದಲ್ಲಿ ನಡೆಯುವ ಶ್ರೀ ಮಹರ್ಷಿ ವಾಲ್ಮೀಕಿ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮ ಹಾಗೂ ತಾಲೂಕ ಜಯಂತಿಯ ಕಾರ್ಯಕ್ರಮವನ್ನು ದಿನಾಂಕ 10/12/2023 ರಂದು ನಡೆಯಲಿದ್ದು ಈ ಕಾರ್ಯಕ್ರಮದ ಸ್ಥಳ ಪರಿಶೀಲನೆ ನಡೆಸಿ ಕಾರ್ಯಕ್ರಮ ಅತ್ಯಂತ ವಿಜೃಂಭಣೆಯಿಂದ ಸಾಗಲು ಸುಂದರವಾದ ಶಾಮಿಯಾನ ಹಾಕುವ ಸಂಭ್ರಮ ಸಡಗರದಿಂದ ನಡೆಯುತ್ತಿದ್ದು,
ವಾಲ್ಮೀಕಿ ಸಮುದಾಯದ ಮುಖಂಡರು ಹಾಗೂ ಯುವಕರಿಗೆ ಇದು ಹಬ್ಬದ ಸಂಭ್ರಮದಂತೆ ಸಾಗುತ್ತದೆ ಎಂದು ಹೇಳಿದರೂ ತಪ್ಪಾಗುವುದಿಲ್ಲ ಅಷ್ಟೊಂದು ಅದ್ದೂರಿಯಾಗಿ ಸಾಗುತ್ತಿದೆ ಈ ಸಂದರ್ಭದಲ್ಲಿ ತಾಲೂಕಿನಲ್ಲಿ ಹಿರಿಯ ಮುಖಂಡರಾದ ವಿಠ್ಠಲ್.ವಿ.ಯಾದವ್,ವೆಂಕೋಬ ಸಾಹುಕಾರ ಹಾಗೂ ಸುರಪುರ ಶಾಸಕರ ಆಪ್ತ ಕಾರ್ಯದರ್ಶಿ ಮಕಾಶಿ,ರಮೇಶ್ ದೋರೆ ಆಲ್ದಾಳ ವೆಂಕಟೇಶ್ ಬೇಟೆಗಾರ,ಹನುಮಂತರಾಯ ನಾಯಕ ಅಮ್ಮಾಪೂರ,ತಾಲೂಕಿನ ವಾಲ್ಮೀಕಿ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಹಾಗೂ ಕಕ್ಕೇರಾ ಹಿರಿಯ ಮುಖಂಡರು ಹಾಗೂ ಪದಾಧಿಕಾರಿಗಳು ಸುತ್ತಮುತ್ತಲಿನ ಗ್ರಾಮಸ್ಥರು ಯುವಕರು ಭಾಗವಹಿಸಿದ್ದರು.
ವರದಿ:ರಾಜಶೇಖರ ಮಾಲಿ ಪಾಟೀಲ್ ಯಾದಗಿರಿ