ಗಂಗಾವತಿ ತಾಲೂಕಿನ ಡಣಾಪೂರ ಗ್ರಾಮದ ಶ್ರೀ ಶರಣಬಸವೇಶ್ವರ ಕಲ್ಯಾಣ ಮಂಟಪದಲ್ಲಿ ಇಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿಸಿ ಟ್ರಸ್ಟ್ ವತಿಯಿಂದ ಒಕ್ಕೂಟ ಸಭೆ ಹಾಗೂ ಪ್ರಧಾನ ಮಂತ್ರಿ ಡಿಜಿಟಲ್ ಸಾಕ್ಷರತಾ ಪ್ರಮಾಣ ಪತ್ರ ವಿತರಣೆ ಕಾರ್ಯಕ್ರಮ ಜರುಗಿತು.
ನೊಡಲ್ ಅಧಿಕಾರಿ ಪರಶುರಾಮ ಮಾತನಾಡಿ ಭಾರತದಲ್ಲಿ ಪ್ರತಿಯೊಬ್ಬರೂ ಸಾಕ್ಷರತೆ ಆಗಬೇಕೆನ್ನುವ ಸಂಕಲ್ಪದಿಂದ ಕೇಂದ್ರ ಸರಕಾರದ ಪಿಎಂಜಿ ದಿಶಾ ಕಾರ್ಯಕ್ರಮವನ್ನು ಸಿ ಎಸ್ ಸಿ ಸೇವಾ ಕೇಂದ್ರದಿಂದ ಆಯೋಜಿಸಲಾಗಿದ್ದು ಪ್ರತಿ ಮನೆಮನೆಗೂ ಮುಟ್ಟುವಂತ ಕೆಲಸವನ್ನು ಶ್ರೀ ಧರ್ಮಸ್ಥಳ ಸೇವಾ ಸಂಸ್ಥೆ ಮಾಡುತ್ತಿದೆ ಹಾಗೂ ಸಂಘವು ಮುಂದುವರೆದು ಕೇಂದ್ರ ಸರಕಾರದ ಯೋಜನೆಗಳಾದ ಆಯುಷ್ಮಾನ್ ಕಾರ್ಡ,ಈ ಶ್ರಮ ಕಾರ್ಡ,ಕಿಸಾನ ಮನ್ ಧನ ಯೋಜನೆ,ಶ್ರಮಯೋಗಿ ಮನ್ ಧನ್ ಯೋಜನೆಗಳಂತ ಮಹತ್ತರ ಯೋಜನೆಗಳನ್ನು ಸಂಘದ ಸಿ ಎಸ್ ಸಿ ಸೇವಾ ಕೇಂದ್ರದಲ್ಲಿ ಉಚಿತವಾಗಿ ನೋಂದಣಿ ಮಾಡಿಕೊಡಲಾಗುವುದು ಇದರ ಸದುಪಯೋಗವನ್ನು ಗ್ರಾಮಸ್ಥರು ಪಡೆದುಕೊಳ್ಳಬೇಕೆಂದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯು ಕೇಂದ್ರ ಸರಕಾರದ ಪಿ ಎಂ ದಿಶಾ ಯೋಜನೆಯಲ್ಲಿ ಪ್ರತಿ ಗ್ರಾಮದಲ್ಲಿ ಮನೆ ಮನೆಗೂ ಡಿಜಿಟಲ್ ವ್ಯವಸ್ಥೆ ಬಗ್ಗೆ ಮಾಹಿತಿ ತಲಪು ಪ್ರಯತ್ನದಿಂದ ಪಿಎಂ ದಿಶಾ ಯೋಜನೆಯಡಿಯಲ್ಲಿ ಎಲ್ಲರು ಡಿಜಿಟಲ್ ಸಾಕ್ಷತರಾಗಬೇಕು ಎನ್ನುವ ದಿಶೆಯಲ್ಲಿ ಡಣಾಪೂರ ಗ್ರಾಮದಲ್ಲಿ ಸಿಎಸಿ ಕೇಂದ್ರದಲ್ಲಿ ನೂರಕ್ಕೂ ಹೆಚ್ಚು ಧರ್ಮಸ್ಥಳದ ಸಂಘದ ಸದಸ್ಯರಿಗೆ,ಯುವಕರಿಗೆ,ಯುವತಿಯರಿಗೆ,ಶಾಲೆ ಮಕ್ಕಳಿಗೆ,ಕಾಲೇಜ್ ವಿದ್ಯಾರ್ಥಿಗಳಿಗೆ,ಆಶಾ ಕಾರ್ಯಕರ್ತೆರಿಗೆ ಹಾಗೂ ಹಿರಿಯರಿಗೆ ಸೇರಿದಂತೆ 10 ದಿನದ ತರಬೇತಿಯನ್ನು ನೀಡ ತರಬೇತಿಯಲ್ಲಿ ಭಾಗಿಯಾದ ಪ್ರತಿಯೊಬ್ಬರಿಗೂ ಸಾಕ್ಷರತೆ ಪರಿಕ್ಷೆ ನಡೆಸಿ ಉತ್ತೀರ್ಣರಾದ ಎಲ್ಲರಿಗೂ ಪಿಎಂ ದಿಶಾ ಪ್ರಮಾಣ ಪತ್ರ ನೀಡಲಾಯಿತು.
ಈ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಗಣೇಶ್,ತಾಲೂಕು ಪಂಚಾಯತಿ ಮಾಜಿ ಸದಸ್ಯರಾದ ಬಿ ಫಕೀರಪ್ಪ ಹಾಗೂ ಒಕ್ಕೂಟದ ಅಧ್ಯಕ್ಷರಾದ ನಾಗರತ್ನಮ್ಮ ಉಪಾಧ್ಯಕ್ಷರಾದ ಶರಣಮ್ಮ ಸಂಘದ ಕೋಶಾಧಿಕಾರಿಯಾದ ಲಕ್ಷ್ಮಿ ಹೆಬ್ಬಾಳ್ ಒಕ್ಕೂಟ ಕಾರ್ಯದರ್ಶಿ ಅನಿತಾ ರಾಥೋಡ್ ಜಿಲ್ಲಾ ನೋಡಲ್ ಅಧಿಕಾರಿ ಪರಶುರಾಮ್ ಸಿದ್ದಾಪುರ ವಲಯದ ಮೇಲ್ವಿಚಾರಕರಾದ ನೂರ್ ಮಹಾಮದ್ ನೋಡಲ್ ತಾಲೂಕ ರಂಗಪ್ಪ ಗ್ರಾಮದ ಗಣ್ಯರಾದ ಮಲ್ಲನಗೌಡ,ಅಯ್ಯಪ್ಪ , ಚಿದಾನಂದಪ್ಪ ಗ್ರಾಮ ಪಂಚಾಯತಿ ಸದಸ್ಯರಾದ ವೀರನಗೌಡ ಹನುಮೇಶ್ ಡಣಾಪುರ ಕಾರ್ಯ ಕ್ಷೇತ್ರದ ಸೇವಾ ಪ್ರತಿನಿಧಿಯಾದ ವಿಶಾಲಕ್ಷಮ್ಮ ಲಲಿತ ಹಾಗೂ ವಿಎಲ್ ಇ ಬಸವನಗೌಡ, ಶರಣಮ್ಮ ಸಂಘದ ಸದಸ್ಯರು ಭಾಗಿಯಾಗಿದ್ದರು.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.