ಬೀದರ್:ನಗರದ ಹೈ.ಕ.ಶಿ. ಸಂಸ್ಥೆಯ ಬಸವೇಶ್ವರ ಶಿಕ್ಷಣ ಮಹಾವಿದ್ಯಾಲಯ,(ಬಿ.ಇಡಿ) ಬೀದರನ ಕಳೆದ ಜುಲೈ-ಆಗಸ್ಟ್ ನಲ್ಲಿ ನಡೆದ ಗುಲಬರ್ಗಾ ವಿಶ್ವವಿದ್ಯಾಲಯ ಕಲಬುರಗಿಯ ಬಿ.ಇಡಿ. ಪ್ರಥಮ ಹಾಗೂ ತೃತೀಯ ಸೆಮಿಸ್ಟರ್ ಪರೀಕ್ಷೆಯಲ್ಲಿ ಮಹಾವಿದ್ಯಾಲಯಕ್ಕೆ ನೂರಕ್ಕೆ ನೂರು ಪ್ರತಿಶತ ಫಲಿತಾಂಶ ಬಂದಿದೆ.ತೃತೀಯ ಸೆಮಿಸ್ಟರ್‌ನಲ್ಲಿ ಪ್ರಶಿಕ್ಷಣಾರ್ಥಿಗಳಾದ ಸ್ನೇಹಾ ಕಲ್ಯಾಣರಾವ (89.2%) ಪ್ರಥಮ ಸ್ಥಾನ,ವೈಷ್ಣವಿ ಚಂದ್ರಕಾಂತ ಬುಕ್ಕಾ (88.8%)ದ್ವಿತೀಯ ಸ್ಥಾನ ಹಾಗೂ ಶ್ರೀಧರ ನಿಂಗಪ್ಪಾ ಅಲ್ಯಾಳ (87.2%)ತೃತೀಯ ಸ್ಥಾನ ಪಡೆದಿದ್ದಾರೆ.ಪ್ರಥಮ ಸೆಮಿಸ್ಟರ್‌ನಲ್ಲಿ ಪ್ರಶಿಕ್ಷಣಾರ್ಥಿಗಳಾದ ವಿಷ್ಣು ಅಶೋಕ,ವಾಣಿ ರವಿ ಹಾಗೂ ಅಮರ ಹಣಮಂಡಲು (88.7%) ಪ್ರಥಮ ಸ್ಥಾನ,ರಶ್ಮೀ ರಾಜೇಂದ್ರ,ವಿಶಾಲ ಶ್ರೀಮಂತ ಹಾಗೂ ನಿಖೀಲ್ ಅಶೋಕ (88.2%) ದ್ವಿತೀಯ ಸ್ಥಾನ, ರೋಹಿತ್ ರಾಜಕುಮಾರ ಮತ್ತು ಶಿವಾನಿ ಸಿದ್ರಾಮ ಮುಗಟೆ (87.3%) ತೃತೀಯ ಸ್ಥಾನ ಪಡೆದಿದ್ದಾರೆ.ಮಹಾವಿದ್ಯಾಲಯದ ಪ್ರಶಿಕ್ಷಣಾರ್ಥಿಗಳ ಸಾಧನೆಗೆ ಹೈದ್ರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಡಾ. ಭೀಮಾಶಂಕರ ಬಿಲಗುಂದಿ,ಆಡಳಿತ ಮಂಡಳಿಯ ಸದಸ್ಯರು ಹಾಗೂ ಬಿ.ವಿ.ಬಿ. ಕಾಲೇಜು ಆವರಣ ಸಂಸ್ಥೆಗಳ ಸುಧಾರಣಾ ಸಮಿತಿಯ ಸಂಚಾಲಕರಾದ ಡಾ.ರಜನೀಶ ವಾಲಿ ಮತ್ತು ಕಾಲೇಜಿನ ಪ್ರಾಂಶುಪಾಲರಾದ ಡಾ.ಮಲ್ಲಿಕಾರ್ಜುನ ಚ.ಕನಕಟ್ಟೆ ಹಾಗೂ ಎಲ್ಲಾ ಸಿಬ್ಬಂದಿ ವರ್ಗದವರು ವಿದ್ಯಾರ್ಥಿಗಳಿಗೆ ಅಭಿನಂದನೆಯನ್ನು ಸಲ್ಲಿಸಿ ಹರ್ಷ ವ್ಯಕ್ತಪಡಿಸಿದ್ದಾರೆ.
ವರದಿ:ಸಾಗರ ಪಡಸಲೆ