ಭದ್ರಾವತಿ:ಅಪರಾಧ ತಡೆ ಮಾಸಾಚರಣೆ ಅಂಗವಾಗಿ ಶಿವಮೊಗ್ಗ ಜಿಲ್ಲಾ ಪೋಲಿಸ್ ಹಾಗೂ ಭದ್ರಾವತಿ ಉಪ ವಿಭಾಗದ ಪೊಲೀಸರು ಹಮ್ಮಿಕೊಳ್ಳಲಾಗಿದ್ದ ಬೀದಿ ನಾಟಕ ಹಾಗೂ ಜಾಗೃತಿ ಜಾಥಾಗೆ ತಮಟೆ ಬಾರಿಸುವ ಮೂಲಕ ಜಿಲ್ಲಾ ರಕ್ಷಣಾಧಿಕಾರಿ ಜಿ ಕೆ ಮಿಥುನ್ ಕುಮಾರ್ ಚಾಲನೆ ನೀಡಿದರು.
ಅಂಡರ್ ಬ್ರಿಡ್ಜ್ ನಲ್ಲಿ ಡಾ.ಬಿ ಆರ್ ಅಂಬೇಡ್ಕರ್ ಜಾನಪದ ಕಲಾ ತಂಡದ ತಮಟೆ ಜಗದೀಶ್ ಹಾಗೂ ತಂಡದ ಕಲಾವಿದರು ಮಹಿಳಾ ಸುರಕ್ಷತೆ,ಸೈಬರ್ ಅಪರಾಧ ತಡೆ ಹಾಗೂ ಸಂಚಾರಿ ನಿಯಮಗಳ ಪಾಲನೆ ಕುರಿತು ಹಾಡು ಹಾಗೂ ಬೀದಿ ನಾಟಕದ ಮೂಲಕ ಸಾರ್ವಜನಿಕರಲ್ಲಿ ಅರಿವು ಮೂಡಿಸಿದರು. ಇದಕ್ಕೂ ಮೊದಲು ನ್ಯೂಟೌನ್ ಪೋಲಿಸ್ ಠಾಣೆಯಿಂದ ಅಂಡರ್ ಬ್ರಿಡ್ಜ್,ಹೊಸ ಸೇತುವೆ ರಸ್ತೆ, ತಾಲ್ಲೂಕು ಕಚೇರಿ,ರಂಗಪ್ಪ ವೃತ್ತ,ಮಾಧವಾಚಾರ್ ವೃತ್ತ,ಬಿ ಹೆಚ್ ರಸ್ತೆ ಮೂಲಕ ಅಂಡರ್ ಬ್ರಿಡ್ಜ್ ವರೆಗೆ ದ್ವಿಚಕ್ರ ವಾಹನದಲ್ಲಿ ಜಾಥಾ ನಡೆಸಿದರು.
ಉಪವಿಭಾಗದ ಡಿವೈಎಸ್ಪಿ ಕೆ ಆರ್ ನಾಗರಾಜ್ ನೇತೃತ್ವದಲ್ಲಿ ನಗರ ಸಿಪಿಐ ಶ್ರೀಶೈಲಕುಮಾರ್, ಕಾಗದನಗರ ಪಿಐ ನಾಗಮ್ಮ,ಗ್ರಾಮಾಂತರ ಪಿ ಐ ಜಗದೀಶ್ ಹಂಚನಾಳ್,ಉಪವಿಭಾಗದ ವಿವಿಧ ಪೋಲಿಸ್ ಠಾಣೆಗಳ ಠಾಣಾಧಿಕಾರಿಗಳಾದ ಶಾಂತಲಾ,ರಮೇಶ್,ಪೋಲಿಸ್ ಠಾಣೆಗಳ ಠಾಣಾಧಿಕಾರಿಗಳು,ಶರಣಪ್ಪ ಹಂಡ್ರಗಲ್, ಕೃಷ್ಣಕುಮಾರ್,ಶಿಲ್ಪ,ಜಯ್ಯಪ್ಪ ಹಾಗೂ ಎಲ್ಲಾ ಠಾಣೆಗಳ ಸಹಾಯಕ ಠಾಣಾಧಿಕಾರಿಗಳು ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿದ್ದರು.
ವರದಿ:ಕೆ ಆರ್ ಶಂಕರ್ ಭದ್ರಾವತಿ