ಕೊಟ್ಟೂರು:ಪಟ್ಟಣದಲ್ಲಿ ಮಾನ್ಯತೆ ಪಡೆದ ಅನುದಾನ ರಹಿತ ಖಾಸಗಿ ಶಾಲೆಗಳ ಸಂಘದ ರಾಜ್ಯ ಕಾರ್ಯಧ್ಯಕ್ಷರಾದ ಕೊಟ್ರೇಶ್ ಜಿ.ಎಂ. ಅವರನ್ನೊಳಗೊಂಡ ಸಂಘದ ಎಲ್ಲಾ ಪದಾಧಿಕಾರಿಗಳು ಹಾಗೂ ಖಾಸಗಿ ಶಿಕ್ಷಣ ಸಂಸ್ಥೆಗಳ ಮಾಲೀಕರು ಎಲ್ಲಾ ವಿಭಾಗಗಳ ಸಂಘದ ಅಧ್ಯಕ್ಷರು ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ ಹಲವು ಬೇಡಿಕೆಗಗಳಿಗೆ ಒತ್ತಾಯ
1) ಶಾಲಾ ಮಾನ್ಯತೆಗಳ ನವೀಕರಣ ಹೈಕೋರ್ಟ್ ಆದೇಶದನ್ವಯ ಕನಿಷ್ಠ ಹತ್ತು ವರ್ಷಗಳಿಗೆ ಸೀಮಿತಗೊಳಿಸಬೇಕು.
2) ಶೇ 25% RTE ಅಡಿ ಮಕ್ಕಳ ನೋಂದಣಿಗೆ ಮರು ಅನುಷ್ಟಾನಗೊಳಿಸಬೇಕು.
3) ಫೈಯರ್ ಸೇಫ್ಟಿ ಬಿಲ್ಡಿಂಗ್ ಸೇಫ್ಟಿಯಿಂದ ವಿನಾಯಿತಿ ನೀಡಬೇಕು.
4) RT ಮರುಪಾವತಿ ಹಣ ಶಾಲಾ ವೆಚ್ಚಗಳಿಗೆ ತಕ್ಕಂತೆ ರೂ 35,000/- ಸಾವಿರ ನೀಡಬೇಕು.
5) ರಾಷ್ಟ್ರೀಯ ಶಿಕ್ಷಣ ನೀತಿ 2020 ರಾಜ್ಯದಲ್ಲಿ ಕಡ್ಡಾಯವಾಗಿ ಜಾರಿಗೆ ತರಬೇಕು.
6) SEP ಅನುಷ್ಟಾನವನ್ನು ಕೈಬಿಡಬೇಕು.
7) 1995 ರಿಂದ ಕನ್ನಡ ಶಾಲೆಗಳ ಅನುದಾನಕ್ಕೆ ಒತ್ತಾಯ ಸೇರಿ
ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಖಾಸಗಿ ಶಾಲೆಗಳ ಸಂಘ ವಿಜಯನಗರ ಜಿಲ್ಲೆಯ ಶಾಲಾ ಮಕ್ಕಳ ಪೋಷಕರು ದಿನಾಂಕ 11/12/2023 ರಂದು ಸುವರ್ಣ ಸೌಧದ ಮುಂದೆ ಪ್ರತಿಭಟನೆಯಲ್ಲಿ ಭಾಗವಹಿಸಿ ನಮ್ಮ ವಿವಿಧ ಬೇಡಿಕೆಗಳನ್ನು ಬೆಂಬಲಿಸಿ ಎಂದು ಪತ್ರಿಕೆ ಪ್ರಕಟಣೆ ಮೂಲಕ RUPSA (R)ನ ರಾಜ್ಯ ಕಾರ್ಯಧ್ಯಕ್ಷರಾದ ಕೊಟ್ರೇಶ್ ಜಿ.ಎಂ.ಮನವಿ ಮಾಡಿದರು.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.