ಯಾದಗಿರಿ:ಏವೂರ ಗ್ರಾಮದಲ್ಲಿ ನಾಲ್ಕು ಜಾನುವಾರುಗಳು ವಿದ್ಯುತ್ ತಗುಲಿ ಮೃತಪಟ್ಟ ಕಾರಣ ಜಾನುವಾರು ಮಾಲೀಕರಿಗೆ ಮಾನ್ಯ ಸಣ್ಣ ಕೈಗಾರಿಕೆ ಹಾಗೂ ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪಗೌಡ ದರ್ಶನಪುರ ನೇತೃತ್ವದಲ್ಲಿ ಜೆಸ್ಕಾಂ ಇಲಾಖೆಯ ವತಿಯಿಂದ ದೊಡ್ಡಪ್ಪ ತಂದೆ ಗದ್ದಿಗೆಪ್ಪಾ ಪೂಜಾರಿ,ಯಮನಪ್ಪ ತಂದೆ ಬಸಪ್ಪ ಪೂಜಾರಿ,ಸೀತಾಬಾಯಿ ಗಂಡ ದೀಪಲು ಜಾಧವ, ರಾಮು ತಂದೆ ಪೋಮು ಇವರಿಗೆ ಜೆಸ್ಕಾಂ ಇಲಾಖೆಯ ವತಿಯಿಂದ ತಲಾ ಒಂದು ಜಾನುವಾರಿಗೆ 50 ಸಾವಿರ ರೂಪಾಯಿ ಪರಿಹಾರ ವಿತರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಜೆಸ್ಕಾಂ ಅಧಿಕಾರಿಗಳು ಶ್ರೀಶೈಲ ತಮದ್ದೂಡ್ಡಿ ಹಾಗೂ ಏವುರ ಗ್ರಾಮದ ಚಂದಯ್ಯ ಗುತ್ತೇದಾರ ಹಾಗೂ ರೈತರು ಏವೂರ ಗ್ರಾಮಸ್ಥರು ಉಪಸ್ಥಿತರಿದ್ದರು.
ವರದಿ ರಾಜಶೇಖರ ಮಾಲಿ ಪಾಟೀಲ್



















