ಯಾದಗಿರಿ:ಜಿಲ್ಲಾಡಳಿತ,ತಾಲೂಕ ಆಡಳಿತ ಹಾಗೂ ಪೋಲಿಸ್ ಇಲಾಖೆ ಅಧಿಕಾರಿಗಳು ಅಕ್ಕಿ ಕಳ್ಳರ ಜೊತೆ ಶಾಮೀಲು ಆಗಿರುವ ಲಕ್ಷಣ ಕಂಡು ಬರುತ್ತಿದೆ ಆದರೆ ಬೇಲಿನೆ ಎದ್ದು ಹೊಲ ಮೆಯ್ದರೇ ಹೊಲ ಹಾಳಾಗದೆ ಇರಲು ಸಾಧ್ಯವೇ ಎಂಬ ಗಾದೆ ಮಾತಿನಂತೆ ಇಲ್ಲಿನ ಪೋಲಿಸ್ ಅಧಿಕಾರಿಗಳೇ ಅಕ್ಕಿ ಕಳ್ಳರ ಜೊತೆಗೆ ಶಾಮೀಲು ಆಗಿದ್ದಾರೆ ಎಂದು ಕರ್ನಾಟಕ ರಕ್ಷಣೆ ವೇದಿಕೆ ತಾಲೂಕ ಅಧ್ಯಕ್ಷರು ಹೇಳಿದರು.
ಶಹಾಪುರ ಸರ್ಕಾರಿ ದಾಸ್ತಾನುದಿಂದ ಅಕ್ಕಿ ಕಳುವಾಗಿ ಸುಮಾರು ಒಂದು ತಿಂಗಳು ಕಳೆದರೂ ಪೋಲಿಸ್ ಇಲಾಖೆ ಕಳ್ಳರನ್ನು ಹಿಡಿಯುವಲ್ಲಿ ಸಂಪೂರ್ಣ ವಿಪುಲರಾಗಿದ್ದಾರೆ ಅಕ್ಕಿ ಪ್ರಕರಣದಲ್ಲಿ ಆರೋಪಿಗಳಿಗೆ ಪೋಲಿಸ್ ಠಾಣೆಯಲ್ಲಿ ಎಫ್.ಐ.ಆರ್. ಹಾಕಿದರೆ ಸಾಲದು ಮೂಲ ಅಕ್ಕಿ ಕಳ್ಳರು ಯಾರು,ಶಂಕತರಿಗೆ ಕಳ್ಳರು ಎಂದು ಪ್ರಮಾಣ ಪತ್ರ ನೀಡಿದರೆ ಸಾಲದು ಇಲ್ಲಿವರೆಗೆ ಏನು ಕ್ರಮ ಕೈಗೊಂಡಿದ್ದೀರಿ ಎಂದು ಶಹಾಪುರ ಯುವ ಹೋರಾಟಗಾರ ಕರ್ನಾಟಕ ರಕ್ಷಣಾ ವೇದಿಕೆ ತಾಲೂಕ ಅಧ್ಯಕ್ಷರಾದ ಅಬ್ದುಲ್.ಸಿ.ಹಾದಿಮನಿ ಖಾರವಾಗಿ ಪ್ರಶ್ನಿಸಿದ್ದಾರೆ.
ಅನ್ನಭಾಗ್ಯ ಅಕ್ಕಿ ನಾಪತ್ತೆ ಪ್ರಕರಣ ತನಿಖೆಯು ಜಿಲ್ಲಾಡಳಿತ,ತಾಲೂಕ ಆಡಳಿತ ಹಾಗೂ ಪೋಲಿಸ್ ಇಲಾಖೆಯಿಂದ ಆಗುವ ಲಕ್ಷಣಗಳು ಕಾಣುತ್ತಿಲ್ಲ. ಆದಷ್ಟು ಬೇಗನೆ ಅಕ್ಕಿ ಪ್ರಕರಣವನ್ನು ಸಿಬಿಐಗೆ ಒಪ್ಪಿಸಬೇಕೆಂದು ಹೇಳಿದರು.
ವರದಿ:ರಾಜಶೇಖರ ಮಾಲಿ ಪಾಟೀಲ್