ಗರ್ಭದ ಅರಮನೆಯಲ್ಲಿ ಬೆಚ್ಚಗಿನ ಕಾಳಜಿಯಿಂದ ತನ್ನ ಉಸಿರಿನ ಜೊತೆ ಜಗವ ಪರಿಚಯಿಸಿದ ನಿಸ್ವಾರ್ಥಿ ಅಮ್ಮ||
ಮಮತೆಯ ಅಮೃತ ಉಣಿಸಿ
ಇರುಳಿನ ಅಕ್ಕರೆಯ ಜೋಗುಳ ಹಾಡಿ ಪ್ರೀತಿಯ ಮೊದಲ ಕೈ ತುತ್ತು ನೀಡಿ ಅದ್ಭುತ ಬದುಕು ಭಿಕ್ಷೆ ನೀಡಿದ ತ್ಯಾಗಮಯಿ ಅಮ್ಮ||
ಬದುಕಿನ ಪ್ರತಿ ಹೆಜ್ಜೆಗೆ ಜೋಪಾನವಾಗಿ ಕೈ ಹಿಡಿದು ಜ್ಞಾನದ ದೀವಿಗೆಯಾದ ಗುರು ಅಮ್ಮ
ತಪ್ಪಿದ ಹೆಜ್ಜೆಗೆ ಸಹನೆಯಿಂದ ಸರಿಯಾದ ಹಾದಿ ತೋರಿಸಿದ ಕರುಣೆಯ ಕಣಜ ಅಮ್ಮ||
ಕುರುಡಾದ ಕಣ್ಣಿಗೆ ಬಣ್ಣ ಬಣ್ಣದ ಕನಸ ಕಟ್ಟಿಕೊಟ್ಟ ಕಾಣುವ ದೈವ ಅಮ್ಮ
ಅಕ್ಕರೆಯ ಆಸರೆಯಲ್ಲಿ ಧೈರ್ಯ ತುಂಬಿ ಬದುಕಿಗೊಂದು ಅರ್ಥ ಕೊಟ್ಟ ದೇವತೆ ಅಮ್ಮ||
ಅಮ್ಮ ಎಂದರೆ ಪೂಜ್ಯನೀಯ ಭಾವ ಜಗತ್ತಿನಲ್ಲಿ ಎಂದಿಗೂ ಬದಲಾಗದ ಪ್ರೀತಿ ಅಮ್ಮನ ಪ್ರೀತಿಗೆ ಯಾವುದು ಸಮವಲ್ಲ ಅಮ್ಮ ನಿಜ ದೈವ||
ನಮ್ಮನ್ನ ಸಹಿಸಿ,ಮುದ್ದಿಸಿ,ಮನ್ನಿಸಿ,ಹರಸಿ,ತಿದ್ದಿ, ಕ್ಷಮಿಸಿ ಪ್ರೀತಿಯ ಧಾರೆ ಎರೆದ ಕರುಣಾಮಯಿ ಅಮ್ಮ||
ಲೇಖಕಿ-ಮಾನಸ.ಎಂ.ಸೊರಬ