ಬೆಂಗಳೂರು
ಕೆಆರ್ ಪುರ:ಬಹುಮಹಡಿ ಕಟ್ಟಡದ ಫ್ಲಾಟ್ ನ ಮುಂಬಾಗ ಸ್ವಚ್ವಗೊಳಿಸುವಾಗ ಆಯ ತಪ್ಪಿ 5 ನೇ ಮಹಡಿಯಿಂದ ಕೆಳಗೆ ಬಿದ್ದು ಧಾರುಣವಾಗಿ ಸಾವನ್ನಪ್ಪಿರುವ ಘಟನೆ ದೊಡ್ಡಬನಹಳ್ಳಿಯಲ್ಲಿ ನಡೆದಿದೆ.
ಖುಷ್ಬೂ ಆಶಿಶ್ ತ್ರೀವೇದಿ (31) ಸಾವನ್ನಪ್ಪಿದ ಗೃಹಿಣಿ,ಗುಜರಾತ್ ಮೂಲದ ಆಶೀಶ್ ದಂಪತಿಗಳು ಬೆಂಗಳೂರು ಪೂರ್ವ ತಾಲ್ಲೂಕಿನ ದೊಡ್ಡಬನಹಳ್ಳಿಯಲ್ಲಿ ಬಿಡಿಎ ನಿರ್ಮಾಣ ಮಾಡಿರುವ 18 ಅಂತಸ್ತಿನ ವಿಂದ್ಯಗಿರಿ ಬಹುಮಹಡಿ ಕಟ್ಟಡದಲ್ಲಿ 5 ನೇ ಅಂತಸ್ತಿನಲ್ಲಿ ಸ್ವಂತ ಫ್ಲಾಟ್ ಖರೀದಿಸಿ ವಾಸವಿದ್ದ ಇವರಿಗೆ ಇತ್ತೀಚೆಗಷ್ಟೆ ವಿವಾಹವಾಗಿತ್ತು,ಗುರುವಾರ ಫ್ಲಾಟ್ ನ ಮುಂಭಾಗದಲ್ಲಿಡಲಾಗಿದ್ದ ಶೂ ಭಾಕ್ಸ್ ಮೇಲೆ ನಿಂತು ಸ್ವಚ್ವಗೊಳಿಸುವಾಗ ಆಯ ತಪ್ಪಿ ಕೆಳಗೆ ಬಿದ್ದಿದ್ದು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಜೀವ ಉಳಿಯಲಿಲ್ಲ,ಕಾಡುಗುಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು ತನಿಖೆ ಕೈಗೊಂಡೊದ್ದಾರೆ.
(ಸರ್ಕಾರದ ಅಂಗ ಸಂಸ್ಥೆ ಬಿಡಿಎ ಬಡವರು ಮತ್ತು ಮಧ್ಯಮ ವರ್ಗದ ಜನರಿಗೆ ಬೆಂಗಳೂರಿನಲ್ಲಿ ಸೂರು ಕಲ್ಪಿಸುವ ಸದುದ್ದೇಶದಿಂದ ಆರಂಭವಾಗಿದ್ದು ಇತ್ತೀಚೆಗೆ ಈ ಸಂಸ್ಥೆ ಖಾಸಗಿ ಕಟ್ಟಡ ನಿರ್ಮಾಣ ಸಂಸ್ಥೆಗಳಂತೆ ವ್ಯವಹರಿಸುತ್ತಿರದ್ದು ಬಡವರ ಪ್ರಾಣಕ್ಕೆ ರಕ್ಷಣೆ ಇಲ್ಲದಂತಾಗಿದೆ,ಫೈರ್ ಸೇಫ್ಟಿ ಇಲ್ಲ, ತುರ್ತು ರಕ್ಷಣೆ ಸಲಕರಣಗಳಿಲ್ಲ,ಲಿಫ್ಟ್ ಗಳು ಸರಿ ಇಲ್ಲ,ಇದಕ್ಕಿಂತ ಪ್ರಮುಖವಾಗಿ ಅಪಾರ್ಟ್ಮೆಂಟ್ ನಲ್ಲಿ ಅಳವಡಿಸಿದ ಸೋಲಾರ್ ವಾಟರ್ ಹೀಟರ್ ಗಳು ಕಳೆದ 2 ವರ್ಷಗಳಾದರೂ ಇನ್ನೂ ಕೆಲಸ ಪ್ರಾರಂಭಿಸಿಲ್ಲ,ಈ ರೀತಿಯಲ್ಲಿ ಅನೇಕ ಸಮಸ್ಯೆಗಳಿದ್ದು ಬಿಡಿಎ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಖುಷ್ಬೂ ಎಂಬ ಮಹಿಳೆ ಸಾವನ್ನಪ್ಪಿದ್ದಾರೆಂದು ಸಾಮಾಜಿಕ ಹೋರಾಟಗಾರ ಸುಭಾಷ್ ಆರೋಪಿಸಿದ್ದಾರೆ.