ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲೂಕಿನ ಬಾಗೇವಾಡಿ ಗ್ರಾಮದಲ್ಲಿ ಸಂತ ದಾಸ ಶ್ರೇಷ್ಠ ಶ್ರೀ ಕನಕದಾಸರ ಜಯಂತಿ ಹಮ್ಮಿಕೊಳ್ಳಲಾಯಿತು.
ಇದರ ಅಂಗವಾಗಿ ದಿನಾಂಕ 10 ಡಿಸೆಂಬರ್ 2023 ರಂದು ಕನಕದಾಸರ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.
ಕನಕದಾಸರ ಮೂರ್ತಿ ಪ್ರತಿಷ್ಠಾಪನೆ ಅದ್ದೂರಿಯಾಗಿ ನಡೆಯಿತು ಮೂರ್ತಿಗೆ ಪೂಜೆ ಮಾಲಾರ್ಪಣೆ ಮಾಡುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಆಚರಣೆಯಲ್ಲಿ ಊರಿನ ಮುಖಂಡರು ಹಾಗೂ ಹಾಲುಮತ ಸಮಾಜದ ಕುರುಬ ಸಮಾಜದ ಯುವಕರು ಹಿರಿಯರು ಮಹಿಳೆಯರು ನಾಗರಿಕರು ಎಲ್ಲರೂ ಪಾಲ್ಗೊಂಡಿದ್ದರು.
ಕನಕದಾಸರ ವೃತ್ತದಲ್ಲಿ ಮೂರ್ತಿಗೆ ಪೂಜೆಗೈದು ಮಾಲರ್ಪಣೆ ಮಾಡಿದ ನಂತರ ಪ್ರತಿವರ್ಷದಂತೆ ಈ ಬಾರಿ ಹೆಚ್ಚಿಗೆ ಜಯಂತಿಯ ಪ್ರಯುಕ್ತ ಬೃಹತ್ ಮೆರವಣಿಗೆ,ರಂಗು ರಂಗಿನ ಡೊಳ್ಳುಗಳೊಂದಿಗೆ ಸಾಂಸ್ಕೃತಿಕ ಕಾರ್ಯಕ್ರಮಗಳು,ಭಜನೆ,ವಾದನದ ಕಲಾತಂಡಗಳ ಪ್ರದರ್ಶನ,ಚಿಂತಕರಿಂದ ಉಪನ್ಯಾಸ,ಪ್ರತಿಭಾವಂತ ಕಲಾವಿದರಿಂದ ಡೊಳ್ಳು ಕುಣಿತ,ಕನಕದಾಸರ ಕೀರ್ತನೆ,ಭಜನೆಗಳು, ಚಿಂತನೆಗಳು ಹಾಗೂ ಪಟಾಕಿಗಳನ್ನ ಮುಗಿಲೆತ್ತರಕ್ಕೆ ಹಾರಿಸುವುದರ ಮೂಲಕ ಜಯಂತಿಯನ್ನ ಅದ್ದೂರಿಯಾಗಿ ವಿಜೃಂಭಣೆಯಿಂದ ಆಚರಿಸಲಾಯಿತು.
ಊರಿನ ಮುಖಂಡರಾದ ಉಪ್ಪಳಪ್ಪ ಮಾತನಾಡಿ ಕನಕದಾಸರು ಒಂದು ಸಮಾಜಕ್ಕೆ ಸೀಮಿತರಾದವರಲ್ಲ ಅವರ ತತ್ವ ಮತ್ತು ಆದರ್ಶ ಎಲ್ಲರೂ ಅನುಸರಿಸುವ ನಿಟ್ಟಿನಲ್ಲಿ ಈ ಗ್ರಾಮಸ್ಥರು ಒಟ್ಟಿಗೆ ಸೇರಿ ಕಿರಿಯರು, ಹಿರಿಯರು,ನಾಗರಿಕರು, ಮಹಿಳೆಯರು,ಪುರುಷರು,ಯುವಕರು ಎನ್ನದೆ ಒಗ್ಗೂಡಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನು ತುಂಬಾ ಸಂತೋಷದಿಂದ ಆಚರಿಸಿದರು.ಈ ಸಂದರ್ಭದಲ್ಲಿ ಗ್ರಾಮಸ್ಥರಾದ ಉಪ್ಪಳಪ್ಪ,ಪಂಪಯ್ಯ,ತರಸಾಲಪ್ಪ,ಶಿವಣ್ಣ ಇನ್ನಿತರರು ಇದ್ದರು.
ವರದಿ-ಪವನ ಕುಮಾರ್