ಕೊಟ್ಟೂರು:ಮಾನ್ಯ ಜಿಲ್ಲಾಧಿಕಾರಿಗಳ ಅದೇಶದನ್ವಯ ಪಟ್ಟಣದ ಹಳೇ ಪಟ್ಟಣ ಪಂಚಾಯಿತಿ ಕಛೇರಿಯಲ್ಲಿ ಹಾಗೂ ಶ್ರೀ ಗುರು ಕೊಟ್ಟೂರೇಶ್ವರ ದೇವಾಲಯದ ಮುಂಭಾಗದಲ್ಲಿ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಗಳಾದ ಎ.ನಸ್ಸರುಲ್ಲಾ ನೇತ್ರತ್ವದಲ್ಲಿ ಸಾರ್ವಜನಿಕರಿಗೆ ಕಿರು ಪುಸ್ತಕಗಳು ಹಾಗೂ ಕರಪತ್ರಗಳನ್ನು ವಿತರಣೆ ಮಾಡುವುದರ ಮೂಲಕ ಮಾನವ ಹಕ್ಕುಗಳ ದ ಪ್ರತಿಜ್ಞಾ ದಿನಾಚರಣೆಯನ್ನು ಆಚರಿಸಲಾಯಿತು.
ಈ ಸಂಧರ್ಭದಲ್ಲಿ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಎ.ನಸ್ಸರುಲ್ಲಾ ರವರು ಮಾತನಾಡಿ ಮಾನವ ಹಕ್ಕುಗಳು ಎಂದರೆ ಮನುಷ್ಯ ಬದುಕಿಗಾಗಿ ಇರುವ ಮನುಷ್ಯನ ಅಸ್ತಿತ್ವಕ್ಕಾಗಿ ಇರುವ ಹಕ್ಕುಗಳು 1948 ರಲ್ಲಿ ವಿಶ್ವ ಸಂಸ್ಥೆಯ ಸಾಮನ್ಯ ಸಭೆಯಲ್ಲಿ ಮಾನವ ಹಕ್ಕುಗಳ ಸಾರ್ವತ್ರಿಕ ಘೋಷಣೆಯನ್ನು ಅನುಮೋದಿಸಲಾಯಿತು.
ಈ ದಿನದ ನೆನಪಿಗಾಗಿ ಪ್ರತಿವರ್ಷ ಡಿಸೆಂಬರ್ 10 ರಂದು ಮಾನವ ಹಕ್ಕುಗಳ ದಿನವನ್ನು ಅಚರಿಸಲಾಗತ್ತದೆ.
ಈ ಮಹತ್ವದ ದಿನದಂದು ರಾಷ್ಟೀಯತೆ,ಜನಾಂಗೀಯತೆ,ಧರ್ಮ ಮತ್ತು ಇನ್ನಾವುದೇ ವ್ಯತ್ಯಾಸವನ್ನು ಲೆಕ್ಕಿಸದೆ ಪ್ರತಿಯೊಬ್ಬ ಮನುಷ್ಯನಿಗೂ ಅರ್ಹವಾಗಿರುವ ಮೂಲಭೂತ ಸ್ವಾತಂತ್ರ್ಯ ಗಳು ಮತ್ತು ಹಕ್ಕುಗಳ ಕುರಿತು ಜಗತ್ತು ನೆನಪಿಸುತ್ತದೆ.ಈ ದಿನದಂದು ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಮಾನವ ಹಕ್ಕುಗಳಿಗಾಗಿ ಹೋರಾಡಿದ ಎಲ್ಲಾ ಪ್ರಮುಖರನ್ನು ನೆನಪಿಸಿಕೊಳ್ಳಲಾಗುತ್ತದೆ ಎಂದು ತಿಳಿಸಿದರು.
ಈ ಸಂಧರ್ಭದಲ್ಲಿ ಅನುಷಾ ಮೇಡಂ ಅರೋಗ್ಯ ಕಿರಿಯ ನೀರಿಕ್ಷಕರು,ಎಸ್.ಕೊಟ್ರಪ್ಪ ಕಂದಾಯ ನಿರೀಕ್ಷಕರು,ಅಗಡಿ ಮಂಜುನಾಥ,ಚೆನ್ನಬಸಪ್ಪ, ಮುತ್ತುರಾಜ್,ಮಾದೂರು ಕೊಟ್ರೇಶ,ಚಿಗಟೇರಿ ಪ್ರಕಾಶ್ ಹಾಗೂ ಪೌರಕಾರ್ಮಿಕರು ಸಾರ್ವಜನಿಕರು ಇದ್ದರು
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.