ಯಾದಗಿರಿ:ಕಿಲ್ಲನಕೇರಾ ಗ್ರಾಮದಲ್ಲಿ ಸರಕಾರಿ ಶಾಲೆ ನಿರ್ಮಿಸಲು ತಮ್ಮ ಸ್ವಂತ ಹೊಲವನ್ನೇ ಸರ್ಕಾರಿ ಶಾಲೆಗೆ ಭೂದಾನ ಮಾಡಿದ ದಿ.ಬನ್ನಪ್ಪ ಗೌಡ ಮಾಲಿ ಪಾಟೀಲ್ ಅವರ ಪುಣ್ಯಸ್ಮರಣೆ ಕಾರ್ಯಕ್ರಮ ಜರುಗಿತು.
ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ದಿ.ಬನ್ನಪ್ಪಗೌಡ ಮಾಲಿ ಪಟೀಲ್ ಕಿಲ್ಲನಕೇರಾ ಅವರ 22 ನೇ ಪುಣ್ಯ ಸ್ಮರಣೆಯ ಕುರಿತು ಶಾಲೆಯ ಮುಖ್ಯ ಗುರುಳಾದ ಶ್ರೀ ರಾಮಚಂದ್ರ ಜೋಷಿ ಮಾತನ್ನಾಡಿ ಈ ಗ್ರಾಮ ಶಿಕ್ಷಣದಲ್ಲಿ ಪ್ರಖ್ಯಾತ ಪಡೆದು ಜಿಲ್ಲೆಯಲ್ಲಿ ಉತ್ತಮ ಹೆಸರುವಾಸಿ ಆಗಿರುವುದಕ್ಕೆ ಕಾರಣೀಭೂತರಾದ ದಿ.ಬನ್ನಪ್ಪ ಗೌಡ ಮಾಲಿ ಪಾಟೀಲ್ ರವರ ಮೊಮ್ಮಕ್ಕಳಾದ ಶ್ರೀ ವಿಶ್ವನಾಥ ಗೌಡ ಮಾಲಿ ಪಾಟೀಲ್ ಹಾಗೂ ಮಲ್ಲಿಕಾರ್ಜುನ ಗೌಡ ಮಾಲಿ ಪಾಟೀಲ್ ರವರು ಜವಾಬ್ದಾರಿಯಿಂದ ಗ್ರಾಮದ ಏಳಿಗೆಗಾಗಿ ಹಗಲಿರುಳೂ ಜನಪರ ಸೇವೆಯನ್ನು ಸಲ್ಲಿಸುತ್ತಾ ಬಂದಿದೆ ಈ ಕುಟುಂಬ ಎಂದರು.
ಈ ಸಂದರ್ಭದಲ್ಲಿ ಮಲ್ಲಿಕಾರ್ಜುನ ಗೌಡ ಮಾಲಿ ಪಾಟೀಲ,ಯುವ ಮುಖಂಡ ಮೋದಿನ್ ಕತ್ತಣೋರ್,ಶಾಲೆಯ ಮುಖ್ಯ ಗುರುಗಳಾದ ರಾಮಚಂದ್ರ ಜೋಶಿ,ರೈತ ಸಂಘದ ಅಧ್ಯಕ್ಷರಾದ ಬನ್ನಪ್ಪ ದೊರೆ,ಶಿಕ್ಷಕರಾದ ಮಾರ್ತಾಂಡಪ್ಪ,ಲಕ್ಷ್ಮಿ, ವಂದನ,ಅನಿತಾ,ರಾಚಮ್ಮ ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ವರದಿ:ರಾಜಶೇಖರ ಮಾಲಿ ಪಾಟೀಲ್