ವಡಗೇರಾ:ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಉಪಯೋಗಿಸುವ ನೀರು ಶುಚಿಯಾಗಿರಬೇಕು,ಆ ನಿಟ್ಟಿನಲ್ಲಿ ವಡಗೇರಾ ತಾಲೂಕಿನ,ಎಲ್ಲಾ ಗ್ರಾಮ ಪಂಚಾಯತಿಗಳಲ್ಲಿ,ಪ್ರತಿ ತಿಂಗಳ ಎರಡನೇ ಶನಿವಾರ ಮತ್ತು ರವಿವಾರ,ಕುಡಿಯುವ ನೀರಿನ ಘಟಕಗಳ ಶುದ್ದೀಕರಣ ಅಭಿಯಾನ ಆರಂಭಿಸಿದ್ದು, ಸಾರ್ವಜನಿಕರು ಈ ಎರಡು ದಿನಗಳಲ್ಲಿ ನೀರಿನ ಕೊರತೆಯಾದಲ್ಲಿ,ಸಾರ್ವಜನಿಕರು ದಯವಿಟ್ಟು ಸಹಕರಿಸಬೇಕು ಎಂದು ವಡಗೇರಾ ತಾಲೂಕು ಪಂಚಾಯತಿ ಕಾರ್ಯನಿರ್ವಾಹಣಾ ಅಧಿಕಾರಿಗಳಾದ ಶ್ರೀ ಮಲ್ಲಿಕಾರ್ಜುನ ಸಂಗ್ವಾರ ಅವರು ವಿನಂತಿಸಿಕೊಂಡಿದ್ದಾರೆ.
ವರದಿ:ಶಿವರಾಜ ಸಾಹುಕಾರ್ ವಡಗೇರಾ