ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)​​

"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.

ವಿಶ್ವಕಂಡ ಜ್ಞಾನಯೋಗಿ ಶ್ರೇಷ್ಠ ಸಂತ ಶ್ರೀಸಿದ್ದೇಶ್ವರ ಶ್ರೀ ಶರಣಬಸಪ್ಪಾ.ಎನ್.ಕೆ.

ಇಂಡಿ:ಈ ಹಿಂದೆ ಭಂಥನಾಳದ ಶ್ರೀಸಂಗನಬಸವಶ್ರೀಗಳು ಜಿಲ್ಲೆಯಲ್ಲಿ ಶೈಕ್ಷಣ ಕ ದಾಸೋಹ ನೀಡಿದರೆ ೨೧ನೇ ಶತಮಾನದಲ್ಲಿ ಸಂತಶ್ರೇಷ್ಠ ಸಿದ್ದೇಶ್ವರ ಮಹಾಸ್ವಾಮಿಗಳು ಅಧ್ಯಾತ್ಮಿಕ ಜ್ಞಾನ ದಾಸೋಹ ನೀಡುವ ಮೂಲಕ ಈ ಭಾಗದ ಜನರಿಗೆ ಹೃದಯ ಶ್ರೀಮಂತರನ್ನಾಗಿಸಿದ್ದಾರೆ. ಎಂದು ವಿಶ್ವವಾಣಿ ಪತ್ರಕರ್ತ ಶರಣಬಸಪ್ಪ.ಎನ್.ಕೆ. ಹೇಳಿದರು.
ತಾಲೂಕಿನ ಅಥರ್ಗಾ ಗ್ರಾಮದ ಷಣ್ಮುಖ ಶಿವಯೋಗಿಗಳ ಗುರುದೇವಾಶ್ರಮದಲ್ಲಿ ಆಯೋಜಿಸಿದ ಶ್ರೀಸಿದ್ದೇಶ್ವರ ಮಹಾಸ್ವಾಮಿಗಳ ಕುರಿತು ೧೦೮ ದಿನಗಳ ಜಪಯಜ್ಞ ಹಾಗೂ ೧೦೮ ಸಾಧಕರಿಂದ ನುಡಿನಮನ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ ಮಾತನಾಡಿದ ಅವರು ಶ್ರೀಸಿದ್ದೇಶ್ವರ ಮಹಾಸ್ವಾಮಿಗಳು ನಿಸರ್ಗ ಹಾಗೂ ಪ್ರಕೃತಿಯಲ್ಲಿರುವ ಕಲ್ಲು,ಗಿಡ,ಮರ,ಹೂ ಪ್ರಾಣ,ಪಕ್ಷಿ ಪ್ರತಿಯೊಂದು ಜೀವಿ ಹಾಗೂ ವಸ್ತುಗಳಲ್ಲಿ ಚೈತ್ಯನೆವಿದೆ ಎಂದಿದ್ದಾರೆ ವನದೇವಿಯನ್ನು ಪ್ರೀತಿಸಿ ವನದೇವಿಯಲ್ಲಿ ಕೂಡಾ ದೇವರಿದ್ದಾನೆ ನಮಗೆ ಅತ್ಯೆಂತ ಪವಿತ್ರ ವಸ್ತು ಗಾಳಿ ಹತ್ತು ನಿಮಿಷ ಸ್ಥಗಿತವಾದರೆ ನಾವೆಲ್ಲಿ,ಆದ್ದರಿಂದ ಅನ್ನ ಇಲ್ಲದೆ ಇರಬಹುದು ಗಾಳಿ ಅವಶ್ಯ ಪ್ರಾಚೀನ ಕಾಲದ ಖುಷಿ,ಮುನಿಗಳು ವನದೇವಿಯ ಮಡಿಲಲ್ಲಿ ತಪಸ್ಸು ಮಾಡಿ ದಿವ್ಯಶಕ್ತಿಯನ್ನು ಪಡೆದಿದ್ದಾರೆ. ಅಪ್ಪಾಜೀಯವರು ಒಂದರ ಮೇಲೂ ಅಸ್ಥಿತ್ವ, ಮೋಹ ಇರಲ್ಲಿಲ್ಲ ಇವರ ಜೀವನವೆ ಬೇಡಗಳ ಸಂತೆ. ಉಡುಗೆ,ಹಣ,ಸಂಪತ್ತು ಬೇಡ,ಕಾರು,ಬಂಗಲೆ, ಅದ್ದೂರಿ ಸ್ವಾಗತ ಬೇಡ,ಸರಕಾರ ಕೂಡ ಮಾಡುವ ಪದ್ಮಶ್ರೀ ರಾಜ್ಯ ಪ್ರಶಸ್ತಿಗಳು ಎಲ್ಲವೂ ಬೇಡ ಎಂದು ಸರಳ ಜೀವನ ಸಾಗಿಸಿದ ಅವರು ಧರಿಸುತ್ತಿದ್ದ ಶ್ವೇತ ವರ್ಣದ ನಿಲುವಂಗಿಗೆ ಜೇಬು ಇಲ್ಲದ ರಾಷ್ಟ್ರ ಸಂತ ಶ್ರೀಸಿದ್ದೇಶ್ವರ ಶ್ರೀಗಳು ಇವರನ್ನು ಎರಡನೇ ಸ್ವಾಮಿವಿವೇಕಾನಂದರು ಎಂದರೆ ತಪ್ಪಾಗುವುದಿಲ್ಲ.
೧೨ನೇ ಶತಮಾನದಲ್ಲಿ ಅಣ್ಣ ಬಸವಣ್ಣ ವಚನಗಳ ಮೂಲಕ ಸಮ-ಸಮಾಜವನ್ನು ನಿರ್ಮಿಸಲು ಕ್ರಾಂತಿ ಮಾಡಿದರೆ ೨೧ನೇ ಶತಮಾನದಲ್ಲಿ ಸಂತಶ್ರೇಷ್ಠ ಸಿದ್ದೇಶ್ವರ ಮಹಾಸ್ವಾಮಿಗಳು ಅಧ್ಯಾತ್ಮಿಕ ಜ್ಞಾನದ ದೀಪ ಹಚ್ಚಿ ಇಡೀ ವಿಶ್ವವನ್ನೆ ಬೆಳಗಿಸಿದ ಮಾಹಾನ್ ತತ್ವಜ್ಞಾನಿ.
ಈಶಪ್ರಸಾದ ಸ್ವಾಮೀಜಿ ದಿವ್ಯಸಾನಿಧ್ಯವಹಿಸಿ ಆರ್ಶೀವಚನ ನೀಡಿದರು.
ವಿಶ್ರಾಂತ ಶಿಕ್ಷಕ ರೇವಣಸಿದ್ದಪ್ಪ ಕೂಡಲಕಟ್ಟಿ ಸ್ವಾಗತಿಸಿ ವಂದಿಸಿದರು.
ಸುಭಾಷ ಹಿಟ್ನಳ್ಳಿ,ರಾವುತಪ್ಪ ಹುಲ್ಲೂರ,ಸುನೀಲ ರಬಶೆಟ್ಟಿ,ಸುಭಾಷ ಚೀಲಿ,ಕುಲಪ್ಪ ಬಗಲಿ,ಗುರಪ್ಪ ಕಂಟೇಪ್ಪಗೊಳ್ಳ,ಈರಣ್ಣಾ ಹಾವಿನಾಳ,ಬಾಳು ರಾಠೋಡ,ಪ್ರದೀಪ ಬಿರಾದಾರ.ಬಸವರಾಜ ಕಲ್ಲೂರ,ಗಣಪತಿ ಬಾಣ ಕೋಲ,ನಿವೃತ್ತ ಪ್ರಾಚಾರ್ಯ ಈರಣ್ಣಾ ಪೂಜಾರ,ಕುಲಪ್ಪ ಜೇವೂರ,ಶಿವಾನಂದ ರೂಗಿ,ರೇವಪ್ಪ ಕನ್ನನೂರ ಸೇರಿದಂತೆ ಅನೇಕ ಮುಖಂಡರು ಅಥರ್ಗಾ ಹಾಗೂ ಸುತ್ತಮುತ್ತಲಿನ ಗ್ರಾಮದ ನೂರಾರು ಶ್ರೀಸಿದ್ದೇಶ್ವರ ಮಹಾಸ್ವಾಮಿಗಳ ಭಕ್ತಾದಿಗಳು ಪಾಲ್ಗೊಂಡಿದ್ದರು.

ವರದಿ:ಅರವಿಂದ್ ಕಾಂಬಳೆ ಇಂಡಿ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ