ಭದ್ರಾವತಿ:ಶ್ರೀ ಶೀಲಸಂಪಾದನಾ ಮಠಕ್ಕೆ ಹೆಚ್ಚಿನ ಭಕ್ತರು ಆಗಮಿಸಲು ಕಾರಣ ತಪಸ್ಸಿನ ಶಕ್ತಿ ಹೊರತು ವೈಭವವಲ್ಲ.ಭಕ್ತರ ಪಾಲ್ಗೊಳ್ಳುವಿಕೆಯಿಂದಲೇ ಮಠದ ಕಾರ್ಯಕ್ರಮಗಳು ಯಶಸ್ವಿ ಎಂದು ಶೀಲಸಂಪಾದನಾ ಮಠದ ಡಾ.ಸಿದ್ದಲಿಂಗ ಸ್ವಾಮೀಜಿ ಹೇಳಿದರು.
ಗೋಣಿಬೀಡಿನ ಶೀಲ ಸಂಪಾದನಾ ಮಠದಲ್ಲಿ ಆಯೋಜಿಸಲಾಗಿದ್ದ 25ಸಹಸ್ರ ಜ್ಯೋತಿಗಳ ಕಾರ್ತಿಕ ದೀಪೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಆಶೀರ್ವಚನ ನೀಡಿದರು.2009ನೇ ಸಾಲಿನಲ್ಲಿ ತಪಸ್ಸಿನ ಅನುಷ್ಠಾನ ಆರಂಭಿಸಿದಾಗ ಬಹಳಷ್ಟು ಜನರು ಸಲಹೆ ನೀಡಿದರು.ಭಕ್ತರು ದೂರಾಗುತ್ತಾರೆ, ನೀವು ಉಳಿಯುವುದಿಲ್ಲ ಎಂದು ಆದರೆ ಇಂದು ಆ ತಪಸ್ಸಿನ ಫಲವಾಗಿಯೇ ಭಕ್ತರು ಈ ಮಠಕ್ಕೆ ಆಗಮಿಸುತ್ತಿದ್ದಾರೆ.ಪ್ರೀತಿ-ವಿಶ್ವಾಸಕ್ಕೆ ಬೆಲೆಕಟ್ಟಲು ಸಾಧ್ಯವಿಲ್ಲ ಎಂದರು.
ಮೈಸೂರಿನ ಅರ್ಜುನ ಅವಧೂತ ಮಹಾರಾಜ್ ಮಾತನಾಡಿ,ಇಂದು ಆಚರಿಸಲಾಗುತ್ತಿರುವ 25ಸಹಸ್ರ ಜ್ಯೋತಿಗಳ ಕಾರ್ತೀಕೋತ್ಸವ ಮುಂದಿನ ದಿನಗಳಲ್ಲಿ ಲಕ್ಷ ದೀಪೋತ್ಸವವಾಗಲಿ ಇಂದು ಪೋಷಕರು ಮಕ್ಕಳಿಗೆ ಇತಿಹಾಸ ತಿಳಿಸುತ್ತಿಲ್ಲ. ಪ್ರಕೃತಿಯ ಕೊಡುಗೆ ಮತ್ತು ಇತಿಹಾಸ ಮರೆಯುವುದು ಅಸಮಂಜಸ ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಮುಖಂಡ ಎಂ.ಶ್ರೀಕಾಂತ್,ಧಾರ್ಮಿಕ ಗುರುಗಳಾದ ಕ್ಲಿಪರ್ ರೋಷನ್ ಪಿಂಟೋ,ಅಬ್ದುಲ್ ಲತೀಫ್,ನಿವೃತ್ತ ಐಎಎಸ್ ಅಧಿಕಾರಿಗಳಾದ ದಯಾಶಂಕರ್, ಪ್ರಕಾಶ್,ತರೀಕೆರೆ ಶಾಸಕರ ಪತ್ನಿ ವಾಣಿ ಶ್ರೀನಿವಾಸ್, ನಗರಸಭೆ ಸದಸ್ಯ ಬಿ.ಕೆ.ಮೋಹನ್,ಯುವ ಮುಖಂಡ ಬಿ.ಎಸ್.ಗಣೇಶ್ ಸೇರಿದಂತೆ ಹಲವರು ಹಾಜರಿದ್ದರು.
ಭದ್ರಾನದಿ ತಟದಲ್ಲಿ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಜರುಗಿದ ಗಂಗಾರತಿ ಮತ್ತು ಗಾಯಕ ರಾಜೇಶ್ ಕೃಷ್ಣನ್ ಗಾಯನ ನೆರೆದಿದ್ದ ಭಕ್ತರನ್ನು ಆಕರ್ಷಿಸಿತು.
ವರದಿ:ಕೆ ಆರ್ ಶಂಕರ್,ಭದ್ರಾವತಿ