ಯಾದಗಿರಿ:ಅಜ್ಞಾನವೆಂಬ ಕತ್ತಲಿನಲ್ಲಿ ತೊಳಲಾಡುತ್ತಿರುವ ಮುಗ್ಧ ಜನರಿಗೆ ಜ್ಞಾನವೆಂಬ ಬೆಳಕನ್ನು ಚೆಲ್ಲಿದ ಡಾ:ಬಿ.ಆರ್.ಅಂಬೇಡ್ಕರ್ ರವರು ಈ ಜಗತ್ತಿಗೆ ಸೂರ್ಯನಿದ್ದಂತೆ ಎಂದು ಪ್ರಗತಿಪರ ಹಿರಿಯ ರೈತ ಮುಖಂಡರಾದ ಮಲ್ಲಿಕಾರ್ಜುನ ಸತ್ಯಂಪೇಟೆ ಹೇಳಿದರು.
ನಗರದ ಶ್ರೀ ಜನನಿ ಮಹಿಳಾ ಪದವಿ ಪೂರ್ವ ಕಾಲೇಜಿನಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಯೋಜಿಸಿದ ಡಾ:ಬಿ.ಆರ್.ಅಂಬೇಡ್ಕರ್ ಅವರ ಓದು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ವಿದ್ಯಾರ್ಥಿ ದಿಸೆಯಿಂದಲೇ ಅಂಬೇಡ್ಕರ್ ಅವರ ಚಿಂತನೆಗಳತ್ತ ಹೆಚ್ಚು ಗಮನ ಕೊಡಬೇಕು ಎಂದು ವಿದ್ಯಾರ್ಥಿನಿಯರಿಗೆ ಕಿವಿಮಾತು ಹೇಳಿದರು.
ಯುವ ಸಾಹಿತಿ ಹಾಗೂ ಉಪನ್ಯಾಸಕ ಬಿ.ಎನ್. ದೊಡ್ಡಮನಿ ಮಾತನಾಡುತ್ತಾ ಜಾತಿ,ಮತ,ಧರ್ಮ, ಬಿಟ್ಟು ದೇಶದ ಅಭಿವೃದ್ಧಿಗೆ ಸುರಕ್ಷತೆಗೆ ಪ್ರಾಮುಖ್ಯತೆ ನೀಡಿದಂತವರು ಡಾ:ಬಿ.ಆರ್.ಅಂಬೇಡ್ಕರ್ ಅವರು ಮಹಿಳೆಯರ,ಕಾರ್ಮಿಕರ,ಶೋಷಿತರ,ಬಡವರ, ಹಾಗೂ ಎಲ್ಲರ ಏಳಿಗೆಗಾಗಿ ಶ್ರಮಿಸಿ ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿದಂತವರು,ಬಾಲ್ಯದಲ್ಲಿ ಎಲ್ಲಾ ರೀತಿಯ ಅವಮಾನಗಳನ್ನು ಅನುಭವಿಸಿ, ಮಹಾನ್ ನಾಯಕರದರು ಬಿ.ಆರ್.ಅಂಬೇಡ್ಕರ್ ಎಂದರು.
ಸಮಾರಂಭದ ವೇದಿಕೆಯ ಮೇಲೆ,ಶಿಕ್ಷಕ ರಾಜಶೇಖರ್ ದೇಸಾಯಿ,ದಲಿತ ಯುವ ಮುಖಂಡ ಅರವಿಂದ್ ಬಿಲ್ಲವ್,ಹಿರಿಯರಾದ ಬಸವರಾಜ ಜಮಾದರಖಾನಿ,ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಉತ್ತರದೇವಿ ಮಠಪತಿ ಹಾಗೂ ಇತರರು ಉಪಸ್ಥಿತರಿದ್ದರು,ಈ ಕಾರ್ಯಕ್ರಮದ ಅಧ್ಯಕ್ಷತೆ ಶ್ರೀಮತಿ ಬಸವರಾಜೇಶ್ವರಿ ಘಂಟಿ ವಹಿಸಿಕೊಂಡಿದ್ದರು.ಈ ಕಾರ್ಯಕ್ರಮದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಕುರಿತು ಪ್ರಬಂಧ ಸ್ಪರ್ಧೆ ಏರ್ಪಡಿಸಲಾಯಿತು.ಸುಮಾರು 45ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಈ ಪ್ರಬಂಧ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು,ವಿದ್ಯಾಶ್ರೀ ಸಂಗಪ್ಪ ಪ್ರಥಮ,ವಾಜಿಯಾದ ಬೇಗಂ ಪಟೇಲ್ ದ್ವಿತೀಯ, ಅಶ್ವಿನಿ ಮಲ್ಕಪ್ಪ ತೃತೀಯಸ್ಥಾನ ಪಡೆದರೆ, ಚಂದ್ರಕಲಾ ಭೀಮಣ್ಣ ಹಾಗೂ ನಂದಿನಿ ಬಸವರಾಜ್ ಸಮಾಧಾನಕರ ಬಹುಮಾನ ಪಡೆದುಕೊಂಡರು ಈ ಎಲ್ಲಾ ವಿಜೇತ ವಿದ್ಯಾರ್ಥಿನಿಯರಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಪ್ರಮಾಣ ಪತ್ರ ಹಾಗೂ ಅಂಬೇಡ್ಕರ್ ಅವರ ಪುಸ್ತಕ ಕಾಣಿಕೆಯನ್ನಾಗಿ ನೀಡಲಾಯಿತು.ಕಾರ್ಯಕ್ರಮದ ಪ್ರಾರಂಭದಲ್ಲಿ ಕುಮಾರಿ ಅನುರಾಧ ಪ್ರಾರ್ಥನೆ ಗೀತೆ ಹಾಡಿದರು,ವೀರೇಶಕುಮಾರ ನಿರೂಪಿಸಿದರು, ಅಂಬರೀಶ್ ವಂದಿಸಿದರು.
ವರದಿ:ರಾಜಶೇಖರ ಮಾಲಿ ಪಾಟೀಲ್