ಬಳ್ಳಾರಿ:ಯುವಜನರಲ್ಲಿ ಹೆಚ್ಚುತ್ತಿರುವ ಮಾದಕ ದ್ರವ್ಯ ಸೇವನೆಯ ಸಮಸ್ಯೆಯನ್ನು ಎದುರಿಸಲು ನಡೆಯುತ್ತಿರುವ ಪ್ರಯತ್ನದಲ್ಲಿ ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ಠಾಣೆಯ ಪೊಲೀಸರು ವಿದ್ಯಾರ್ಥಿಗಳಿಗೆ ಯುವಕರಲ್ಲಿ ಜಾಗೃತಿ ಮೂಡಿಸುವ ಮಾದಕ ದ್ರವ್ಯ ಸೇವನೆಯ ಜಾಗೃತಿ ಕಾರ್ಯಕ್ರಮವನ್ನು ಆಯೋಜಿಸಿದ್ದರು.
ಸರ್ಕಾರಿ ಪ್ರಥಮ ದರ್ಜೆ ಪಿಯು ಕಾಲೇಜಿನ ಸಂಸ್ಥೆಗೆ ಪೊಲೀಸ್ ಅಧಿಕಾರಿಗಳು ಭೇಟಿ ಕೊಟ್ಟು ವಿದ್ಯಾರ್ಥಿಗಳಿಗೆ ಮಾದಕ ದ್ರವ್ಯ ಸೇವನೆಯಿಂದ ಆಗುವ ವೈಯಕ್ತಿಕ,ಕೌಟುಂಬಿಕ,ಸಾಮಾಜಿಕವಾಗಿ ಆಗುವ ಹಾನಿಗಳ ಕುರಿತು ಜಾಗೃತಿ ಮೂಡಿಸಿ
ಇದೇ ಸಂದರ್ಭದಲ್ಲಿ
ವಿದ್ಯಾರ್ಥಿಗಳಿಗೆ ಯುವಕರಲ್ಲಿ ಮಾದಕ ವ್ಯಸನದ ಅಪಾಯಗಳನ್ನು ತಡೆಗಟ್ಟುವ ತಂತ್ರಗಳು ಮತ್ತು ಮಾದಕ ದ್ರವ್ಯ ಸಂಬಂಧಿತ ಸನ್ನಿವೇಶಗಳನ್ನು ಎದುರಿಸುವ ಸಂದರ್ಭದಲ್ಲಿ ಸೂಕ್ತ ಪ್ರತಿಕ್ರಿಯೆಗಳ ಬಗ್ಗೆ ಪೊಲೀಸರು ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿದರು.
ಅಲ್ಲದೆ ಮಾದಕ ದ್ರವ್ಯ ಕಳ್ಳ ಸಾಗಾಣಿಕೆ ಕುರಿತು ಮಾಹಿತಿ ಇದ್ದಲ್ಲಿ ಅಥವಾ ಅಂತಹ ಚಟುವಟಿಕೆ ಕುರಿತು ಸುಳಿವು ನೀಡಿದರೆ ಕೂಡಲೇ ಪೊಲೀಸ್ ಅಧಿಕಾರಿಗಳನ್ನು ಸಂಪರ್ಕ ಮಾಡುವಂತೆ ಸಲಹೆ ನೀಡಿದರು
ನಾರ್ಕೊಟಿಕ್ (ಎನ್ ಡಿ ಪಿ ಎಸ್) ಕಾಯ್ದೆಯ ಬಗ್ಗೆ ವಿದ್ಯಾರ್ಥಿಗಳಿಗೆ ಮನವರಿಕೆ ಮಾಡುವ ಜೊತೆಗೆ ಬಿಸಿಪಿ (ಎನ್‌ಡಿಪಿಎಸ್) ಕಾರ್ಪೋಲ್ ಮತ್ತು ವೆಬ್ಸೈಟ್ ಲಿಂಕ್ ಗಳನ್ನು ವಿದ್ಯಾರ್ಥಿಗಳಿಗೆ ಕೊಟ್ಟು ಪೊಲೀಸರೊಂದಿಗೆ ಸದಾ ಸಂಪರ್ಕದಲ್ಲಿರುವಂತೆ ವಿದ್ಯಾರ್ಥಿಗಳಿಗೆ ಪೊಲೀಸರು ತಿಳಿಸಿ,
ವಿದ್ಯಾರ್ಥಿಗಳಲ್ಲಿ ಆಕರ್ಷಕ ಉಪನ್ಯಾಸಗಳನ್ನು ನೀಡಿ ಮಾದಕ ದ್ರವ್ಯ ಸೇವನೆಯ ಲಕ್ಷಣಗಳನ್ನು ಗುರುತಿಸಲು ಮತ್ತು ಸೂಕ್ತ ಆರಂಭಿಕ ಪ್ರತಿಕ್ರಿಯೆಗಳ ಕುರಿತು ಮಾರ್ಗದರ್ಶನವನ್ನು ನೀಡಲು ಅವರಿಗೆ ಅಗತ್ಯವಾದ ಜ್ಞಾನವನ್ನು ಪೊಲೀಸರು ಇಂದು ನೀಡಿದರು.
ಈ ಕಾರ್ಯಕ್ರಮದಲ್ಲಿ ಮಾತನಾಡಿದ ಸಿರುಗುಪ್ಪ ವೃತ್ತ ನಿರೀಕ್ಷಕರಾದ ಹನುಮಂತಪ್ಪ ರವರು ವಿದ್ಯಾರ್ಥಿಗಳನ್ನು ಕುರಿತು ಮಾದಕ ವ್ಯಸನದ ಲಕ್ಷಣಗಳು ಕಂಡು ಬಂದಲ್ಲಿ ಕೂಡಲೇ ಪೊಲೀಸ ಅಧಿಕಾರಿಗಳನ್ನ ಸಂಪರ್ಕ ಮಾಡುವಂತೆ ಸಲಹೆ ನೀಡಿದರು ಹಾಗೂ ಮಾದಕ ದ್ರವ್ಯ ಸೇವನೆಯಿಂದ ಆಗುವ ಎಲ್ಲಾ ರೀತಿಯ ಹಾನಿಗಳನ್ನ ಕುರಿತು ಜಾಗೃತಿ ಮೂಡಿಸಿದರು
ವರದಿ ಎಂ ಪವನ್ ಕುಮಾರ್