ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಶೌಚಾಲಯದ ಗಬ್ಬು ವಾಸನೆಗೆ ಬೇಸತ್ತ ಹಳೂರ ಶಾಲೆ ವಿಧ್ಯಾರ್ಥಿಗಳು,ತಪ್ಪು ಮಾಹಿತಿ ನೀಡಿದ ಬಿ.ಇ.ಒ

ಉತ್ತರ ಕನ್ನಡ:ಮುಂಡಗೋಡ ನಗರದ ಪ್ರಮುಖ ಶಾಲೆ ಹಳೂರ ಎಚ್ ಪಿ ಎಸ್ ಮಾದರಿ ಶಾಲೆ ನಂಬರ್ 2 ರ ಮಕ್ಕಳು ಸತತ 2 ವರ್ಷಗಳಿಂದ ತರಗತಿಯ ಪಾಠ ಕೇಳಲು ಶೌಚಾಲಯ ನೀರಿನ ಗಬ್ಬು ವಾಸನೆ ತೆಗೆದುಕೊಂಡು ಪಾಠ ಕೇಳುವ ದುಸ್ಥಿತಿ ಬಂದಿದೆ.

ಎಷ್ಟು ವರ್ಷಗಳಿಂದ ಸಮಸ್ಯೆ?
ಶಾಲೆಯ ಮಕ್ಕಳು ಸತತ 2 ವರ್ಷಗಳಿಂದ ಗಬ್ಬು ವಾಸನೆಯ ಸಮಸ್ಯೆ ಅನುಭವಿಸುತ್ತಿದ್ದು,ಶಾಲೆಗೆ ಬಿಇಒ,ತಹಶೀಲ್ದಾರ್,ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿಗಳೆಲ್ಲಾ ಭೇಟಿ ನೀಡಿದರೂ ಯಾವೊಬ್ಬ ಅಧಿಕಾರಿಗಳು ಸಮಸ್ಯೆಯ ಪರಿಹಾರ ಮಾಡಲು ಇಚ್ಛಾಶಕ್ತಿ ತೋರಿಸುತ್ತಿಲ್ಲ ಎಂದು ಎಸ್ ಡಿ ಎಂ ಸಿ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು

200 ಮಕ್ಕಳಿದ್ದ ಹಳೂರ ಶಾಲೆಯಲ್ಲಿ ಈ ಶೌಚಾಲಯದ ವಾಸನೆಯಿಂದ ಬೇಸತ್ತ ಮಕ್ಕಳು ಹಾಗೂ ಪೋಷಕರು ತಮ್ಮ ಮಕ್ಕಳನ್ನು ಬೇರೆ ಶಾಲೆಗಳಿಗೆ ದಾಖಲು ಮಾಡಿದ ಕಾರಣ ಶಾಲೆಯಲ್ಲಿ ಮಕ್ಕಳ ಸಂಖ್ಯೆಯೇ ಕಡಿಮೆಯಾಗಿದೆ ಎಂದು ಶಾಲೆಯ ಮುಖ್ಯೋಪಾಧ್ಯಾಯರು ಬೇಸರದಿಂದ ಮಾಹಿತಿ ನೀಡಿದರು.

ನಮ್ಮ ಶಾಲ್ಯಾಗ ಗಬ್ಬು ವಾಸನಿಂದ ಸಾಕಾಗೆತ್ರಿ,ಸ್ವಲ್ಪ ಹುಡುಗರಿಗೆ ಆರಾಮ ಇರಲ್ಲಿ,ಮಧ್ಯಾಹ್ನ ಊಟ ಮಾಡಕು ಅಗ್ಗಲ್ಲರಿ,2 ವರ್ಷ ಆತ್ರಿ ಎಲ್ಲರೂ ಬರ್ತಾರ್ ನೋಡ್ತಾರ ಹೋಗ್ತಾರಾ ಅದ್ರು ಸಮಸ್ಯೆ ಯಾರಿಂದಾನು ಬಗೆ ಹರಿದಿಲ್ಲರಿ ಅಂತ ಆಕ್ರೋಶ ವ್ಯಕ್ತಪಡಿಸಿದ ಶಾಲೆಯ ಮಕ್ಕಳು.
ನಗರದ ಯಾವುದೇ ಶಾಲೆಗಳಲ್ಲಿ ಯಾವುದೇ ರೀತಿಯ ಸಮಸ್ಯೆಗಳು ಕಾಣಿಸಿಕೊಂಡಾಗ ಅದನ್ನು ಮುಂದೆ ನಿಂತು ಬಗೆಹರಿಸಬೇಕಾದವರು ಕ್ಷೇತ್ರದ ಬಿಇಒ ಅಂದರೆ ಬ್ಲಾಕ್ ಎಜುಕೇಷನ್ ಆಫೀಸರ್ ಆದರೆ ನಮ್ಮ ಮುಂಡಗೋಡ ಬಿಇಒ ಸಾಹೇಬರು ಬರಿ ಪ್ರವಚನ,ಆದರ್ಶ ತತ್ವಗಳ ಬಗ್ಗೆ ಮಾತನಾಡುತ್ತಾರೆ ಹೊರತು ಅವರಿಂದ ಯಾವುದೇ ರೀತಿಯ ಕೆಲಸವಾಗಲಿ ಆಗಿಲ್ಲ ಶಾಲೆಯ ಸಮಸ್ಯೆ ಬಗೆಹರಿದಿಲ್ಲ ಎಂದು ಸಾರ್ವಜನಿಕರು ಹೇಳಿದರು.

ಶಾಲೆಯ ಪಕ್ಕದಲ್ಲಿ ನಿವೇಶನ ಹೊಂದಿದ ಒಬ್ಬ ವ್ಯಕ್ತಿಗೆ ಹಾಗೂ ಹಳೂರ ಮಾದರಿ ಶಾಲೆಗೆ ಜಾಗದ ಕುರಿತು ಕೋರ್ಟ್ ನಲ್ಲಿ ವ್ಯಾಜ್ಯವಿತ್ತು ಅದು ಬಗೆಹರಿಸಬೇಕು ಎನ್ನುವಷ್ಟರಲ್ಲಿ ಪಟ್ಟಣ ಪಂಚಾಯ್ತಿ ಅವರು ಬಂದು ಗಟಾರ ತೆಗೆದುಬಿಟ್ಟರು ಹಾಗೂ ಶೌಚಾಲಯದ ನೀರು ಮುಂದೆ ಹೋಗದೆ ಕೆಟ್ಟ ವಾಸನೆ ಬರುತ್ತಿದೆ ಮತ್ತು ಶಾಲೆಯ ಶಿಕ್ಷಕರಿಗೆ ಹಾಗೂ ಮಕ್ಕಳಿಗೆ ಇದರಿಂದ ಅನಾರೋಗ್ಯ ಕೂಡ ಉಂಟಾಗುತ್ತಿದೆ ಎಂದು ಮುಖ್ಯೋಪಾಧ್ಯಯರು ತಿಳಿಸಿದರು.

ಮೊನ್ನೆ ನಗರದಲ್ಲಿ ಖಾಸಗಿ ಸಮಾರಂಭಕ್ಕೆ ಬಂದಿದ್ದ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ಶಾಲೆಗಳ ಮಕ್ಕಳ ಕೆಲಸ ಮಾಡುವುದು ದೇವರ ಪೂಜೆ ಮಾಡದಷ್ಟು ಸಮ ಎಂದು ಹೇಳಿದ್ದರು,ಆದರೆ ಸಚಿವರು ಮಕ್ಕಳ ಇಂತಹ ಸಮಸ್ಯೆಗಳನ್ನು ಮೊದಲು ಬಗೆಹರಿಸಲಿ ಎಂದು ಸಾರ್ವಜನಿಕರು ಅಭಿಪ್ರಾಯ ಪಟ್ಟರು.
ಈ ಸಮಸ್ಯೆಯ ಬಗ್ಗೆ ಬಿಇಒ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿದರೆ ಬೆಳಿಗ್ಗೆಯೇ ನಾನು ಸ್ಥಳಕ್ಕೆ ಹೋಗಿ ಸಮಸ್ಯೆ ಬಗೆಹರಿಸಿ ಬಂದೆ ಎಂದರು,ಆದರೆ ಶಾಲೆಯ ಮುಖ್ಯೋಪಾಧ್ಯಾಯ ರಿಗೆ ಈ ಬಗ್ಗೆ ಬಿಇಒ ಶಾಲೆಗೆ ಭೇಟಿ ನೀಡಿದ್ದರೆ ಎಂದು ಕೇಳಿದರೆ ಅವರು ಇಲ್ಲ ಎಂದರು. ಪತ್ರಕರ್ತರಿಗೆ ಈ ರೀತಿ ಸುಳ್ಳು ಹೇಳುವ ಬಿಇಒ ಅವರು ಮೇಲಧಿಕಾರಿಗಳಿಗೆ ಇನ್ಯಾವ ಮಟ್ಟಿಗೆ ಹೇಳಿಯಾರು ಎಂದು ಅವರಿಂದ ಶಾಲೆಗಳು ಇನ್ಯಾವ ರೀತಿ ಪ್ರಗತಿ ಕಾಣಲಿವೆ ಎಂದು ಹಳೂರ ನಾಗರಿಕರು ಬೇಸರ ವ್ಯಕ್ತಪಡಿಸಿದರು.

ಬೆಳಿಗ್ಗೆ ಸಮಸ್ಯೆ ಗಮನಕ್ಕೆ ಬಂದ ಕೂಡಲೇ ಸಿಬ್ಬಂದಿಗಳನ್ನು ಸ್ಥಳಕ್ಕೆ ಕಳಿಸಿದ್ದೇನೆ,ಪ್ರಾಧಿಕಾರ ದವರು ಲೇಔಟ್ ಮಾಡುವಾಗ ಮಾಡಿದ ತಪ್ಪಿಗೆ , ಈಗ ಸಮಸ್ಯೆ ಉಂಟಾಗಿದೆ.13 ಮನೆಗಳ ತ್ಯಾಜ್ಯ ನೀರು ಒಂದೇ ಗಟರಿಗೆ ಬರುವುದರಿಂದ ಈ ಸಮಸ್ಯೆ ಆಗಿದೆ ಎಂದು ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿ ಚಂದ್ರಶೇಖರ್ ಅವರು ಮಾಹಿತಿ ನೀಡಿದರು.
ಇನ್ನಾದರೂ ಸಂಬಂಧಪಟ್ಟ ಇಲಾಖೆಗಳು ಆದಷ್ಟೂ ಬೇಗ 2 ವರ್ಷಗಳಿಂದ ತೊಂದರೆ ಅನುಭವಿಸುತ್ತಿರುವ ಶಾಲೆಯ ಮಕ್ಕಳ ಸಮಸ್ಯೆಗೆ ಪರಿಹಾರ ನೀಡಬೇಕಿದೆ.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ