ಮುಂಡಗೋಡ:ಟಿಬೆಟಿಯನ್ ಕಾಲೊನಿ ಮುಂಡಗೋಡ ನಗರಕ್ಕೆ ಹೆಚ್ಚು ಪ್ರವಾಸಿಗರನ್ನು ಸೆಳೆಯುವ ಪ್ರವಾಸಿ ತಾಣ ರಜಾ ದಿನಗಳಲ್ಲಿ ಅತಿಹೆಚ್ಚು ಪ್ರವಾಸಿಗರು ಹುಬ್ಬಳ್ಳಿ, ಹಾವೇರಿ,ಶಿರಸಿ ಭಾಗಗಳಿಂದ ರಜಾ-ಮಜಾ ಪಡೆಯಲು ಬರುತ್ತಾರೆ. ಮುಂಡಗೋಡ ನಗರದ ಹೊರಭಾಗ ಅಮ್ಮಾಜಿ ಕೆರೆ ಭಾಗದಿಂದ ಹಿಡಿದು ಟಿಬೆಟಿಯನ್ ಕಾಲೋನಿಯ ಬ್ಲೂ ಹಿಲ್ ಹೋಟೆಲ್ ವರೆಗಿನ ರಸ್ತೆ ಸಂಚಾರ ಪ್ರಯಾಣಿಕರಿಗೆ ದುಸ್ತರವಾಗಿದೆ ಇಳಕಲ್-ಕೈಗಾ ಹೆದ್ದಾರಿ ಆಗಿರುವ ಕಾರಣ ಗೋವಾ ಭಾಗಕ್ಕೆ, ಕಾರವಾರ,ಯಲ್ಲಾಪುರ ಗಳಿಗೆ ತೆರಳಲು ಇರುವ ಹತ್ತಿರದ ಮಾರ್ಗವಾಗಿದೆ ಅಂತಹದ್ದರಲ್ಲಿ ರಸ್ತೆಗಳಲ್ಲಿ ಅಪಾಯಕಾರಿ ರಸ್ತೆ ಗುಂಡಿಗಳಿದ್ದರೆ ದ್ವಿಚಕ್ರ ವಾಹನ,ಹಾಗೂ ಕಾರು,ಲಾರಿ ಚಾಲಕರಿಗೆ ತೀವ್ರ ಉಪದ್ರವವಾಗುತ್ತಿದ್ದು,ನಿದ್ರಾವಸ್ಥೆಯಲ್ಲಿರುವ ಲೋಕೋಪಯೋಗಿ ಇಲಾಖೆ ಈ ಕೂಡಲೇ ರಸ್ತೆ ಗುಂಡಿಗಳನ್ನು ಮುಚ್ಚಬೇಕು,ಇಲ್ಲವಾದಲ್ಲಿ ಮುಂದೆ ಆಗುವ ಪ್ರಯಾಣಿಕರ ಸಾವು ನೋವುಗಳಿಗೆ ಇಲಾಖೆಯೇ ಕಾರಣ ಎಂದು ಅಳಲು ತೋಡಿಕೊಳ್ಳುತ್ತಾರೆ ನಗರದ ಆಟೋ ಚಾಲಕರು.
ಅದರಲ್ಲೂ ಈಗ ಕಬ್ಬಿನ ಸೀಸನ್ ಶುರುವಾಗಿರುವ ಕಾರಣ ಕಬ್ಬಿನ ಫ್ಯಾಕ್ಟರಿಗೆ ನೂರಾರು ಟ್ರಾಕ್ಟರ್ ಗಳಲ್ಲಿ ಕಬ್ಬಿನ ಲೋಡ್ ಸಾಗಾಟ ಮಾಡಲಾಗುತ್ತಿದೆ. ಈ ರಸ್ತೆಗುoಡಿಗಳಿಂದ ನಾವು ಟ್ರಾಕ್ಟರ್ ಚಲಾಯಿಸುವುದು ದುಸ್ತರವಾಗಿದೆ ಎಂದು ಚಾಲಕ ಶಂಕರಪ್ಪ ಇಲಾಖೆಯ ಬೇಜವಾಬ್ದಾರಿ ಬಗ್ಗೆಬೇಸರ ವ್ಯಕ್ತಪಡಿಸುತ್ತಾರೆ.
ಇನ್ನಾದರೂ ಲೋಕೋಪಯೋಗಿ ಇಲಾಖೆ ಅವರು ಕೂಡಲೇ ಟಿಬೆಟಿಯನ್ ಕ್ಯಾಂಪ್ ಸಂಪರ್ಕಿಸುವ ಈ ಯಲ್ಲಾಪುರ ರಸ್ತೆ ಯ ಗುಂಡಿಗಳನ್ನು ಮುಚ್ಚಬೇಕು ಎಂದು ಸಾರ್ವಜನಿಕರು ಒಕ್ಕೊರಲಿನ ಆಗ್ರಹವಾಗಿದೆ.