ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಚೆಸ್ಕಾಂ ಆವರಣದಲ್ಲಿ ಜನಸಂಪರ್ಕ ಸಭೆ

ಹನೂರು:ಪಟ್ಟಣದ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ ಉಪ ವಿಭಾಗ ಹನೂರು ಪಟ್ಟಣದ ಸೆಸ್ಕ್ ಕಚೇರಿ ಆವರಣದಲ್ಲಿ ಆಯೋಜಿಸಲಾಗಿದ್ದ ಜನ ಸಂಪರ್ಕ ಸಭೆಯಲ್ಲಿ ತಾಲೂಕಿನ ವಿವಿಧ ಗ್ರಾಮಗಳಿಂದ ಬಂದಿದ್ದ ಜನರು ವಿದ್ಯುತ್ ಸಂಬಂಧಿತವಾಗಿ ತಮ್ಮ ಕಾಡಂಚಿನ ಗ್ರಾಮಗಳಲ್ಲಿ ಎದುರಿಸುತ್ತಿರುವ ವಿದ್ಯುತ್ ಸಮಸ್ಯೆಗಳ ಬಗ್ಗೆ ಹೇಳಿಕೊಂಡರು.
ಮಹದೇಶ್ವರ ಬೆಟ್ಟ ಸುತ್ತಮುತ್ತಲಿನ ಹಲವಾರು ಪೋಡುಗಳಲ್ಲಿ ವಿದ್ಯುತ್ ಸಂಪರ್ಕ ಇಲ್ಲ ಅಲ್ಲಿರುವಂತಹ ಜನರು ಕತ್ತಲಲ್ಲಿ ಜೀವನ ನಡೆಸುತ್ತಿದ್ದಾರೆ ಸುಮಾರು 70 ಮನೆಗಳು ಇವೆ ಪಾಲರ್ ಅಲಂಬಾಡಿ ಇಂಡಿಗನತ್ತ,ತಾವರೆ ಕೊಪ್ಪ ಇಲ್ಲೆಲ್ಲಾ ಸೋಲಾರ್ ಅಳವಡಿಸಿಲಾಗಿದೆ ಅವುಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ ಶಾಲಾ ಮಕ್ಕಳು ಮತ್ತು ಪೋಡಿನ ಜನರಿಗೆ ಕಷ್ಟ ಆಗುತ್ತಿದೆ ಈ ಸಮಸ್ಯೆ ಕೇವಲ ಭರವಸೆಯಾಗೇ ಉಳಿದಿದೆ ಎಂದು ಸಾರ್ವಜನಿಕರು ಮಾತನಾಡಿದರು ಜೊತೆಗೆ ಜಮೀನು ಹೊಂದಿರುವಂತಹ ರೈತರುಗಳಿಗೆ ಅಗತ್ಯ ಮೂಲ ಸೌಕರ್ಯಗಳನ್ನು ಸಮರ್ಪಕವಾಗಿ ಸಕಾಲಕ್ಕೆ ತಲುಪಿಸುತ್ತಿಲ್ಲ ಹಾಗೂ ಟಿ ಸಿ ಗಳು ಮತ್ತು ಇನ್ನಿತರ ವಿದ್ಯುತ್ ಪರಿಕರಗಳನ್ನು ಒದಗಿಸುವಂತೆ ಒತ್ತಾಯಿಸಿದರು ಇದೇ ವೇಳೆ ಮಾತನಾಡಿದ ಮೈಸೂರು ವಿಭಾಗದ ಅಧೀಕ್ಷಕ ಇಂಜಿನಿಯರ್ ಸೋಮಶೇಖರ್ ರವರು ಇವತ್ತಿನ ಜನ ಸಂಪರ್ಕ ಸಭೆಯಲ್ಲಿ ಐ ಪಿ ಸೆಟ್ ಗಳಿಗೆ ಟಿ ಸಿ ಲೈನ್ ಕಂಬಗಳು ಇನ್ನಿತರ ವಿದ್ಯುತ್ ಪರಿಕರಗಳಿಗೆ ಜನರು ಹಣ ಕಟ್ಟಿದ್ದು ಸಕಾಲಕ್ಕೆ ಅದು ರೈತರಿಗೆ ತಲುಪಿಲ್ಲ ಎಂಬ ದೂರು ಬಂದಿದೆ ನಮ್ಮ ಕಚೇರಿ ನಿಗಮದಿಂದ ಬಾಕಿ ಉಳಿದಿರುವ ಕೆಲಸಗಳ ಬಗ್ಗೆ ಇನ್ನು ಮೂರ್ನಾಲ್ಕು ತಿಂಗಳ ಒಳಗೆ ಬಾಕಿ ಇರುವ ಎಲ್ಲಾ ಕೆಲಸಗಳನ್ನು ಪೂರ್ಣಗೊಳಿಸಲು ಅಗತ್ಯ ಕ್ರಮ ವಹಿಸಲಾಗುವುದು ಎಂದರಲ್ಲದೆ ಹಾಗೂ ರೈತರ ಜಮೀನುಗಳಲ್ಲಿ ಟ್ರಾನ್ಸ್ ಫಾರ್ಮರ್ ಗಳು ಸುಡುವುದರ ಬಗ್ಗೆ ದೂರು ಬಂದಿದ್ದು ನೂತನವಾಗಿ ಅಳವಡಿಸಿ ಟ್ರಾನ್ಸ್ ಫಾರ್ಮ್ ಗಳು ಸುಡುವುದನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ನಮ್ಮ ಇಲಾಖೆ ಕ್ರಮ ವಹಿಸಲಾಗುವುದು ಎಂದರು ಕಾಡಂಚಿನ ಹಾಡಿಗಳಲ್ಲಿ ಐದು ವರ್ಷದ ಹಿಂದೆಯೇ ಕೇಂದ್ರ ಸರ್ಕಾರದ ಯೋಜನೆಯಲ್ಲಿ ಸೋಲಾರನ್ನು ಅಳವಡಿಸಿ ಮಿತವಾಗಿ ಬಳಕೆ ಮಾಡಲು ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು ಹಾಡಿಗಳಿಗೆ ವಿದ್ಯುತ್ ಪೂರೈಕೆ ವಿಚಾರವಾಗಿ ಮಾಧ್ಯಮದವರಿಗೆ ಪ್ರತಿಕ್ರಿಯಿಸಿದ ಇವರು ಉಸ್ತುವಾರಿ ಸಚಿವರು ಸ್ಥಳೀಯ ಶಾಸಕರು ಮತ್ತು ಜಿಲ್ಲಾಧಿಕಾರಿಗಳ ನಿರ್ದೇಶನದಲ್ಲಿ ನಾವು ನಮ್ಮ ವಿದ್ಯುತ್ ಶಕ್ತಿ ಜಾಲದಿಂದ ವಿದ್ಯುತ್ ನೀಡಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದೇವೆ ಅಲ್ಲಿ ತನಕ ಸೊಲಾರ್ ಮೂಲಕ ಸಮರ್ಪಕವಾಗಿ ಸುವ್ಯವಸ್ತೆಯಿಂದ ಸೋಲಾರ್ ವಿದ್ಯುತ್ ನೀಡುವ ಕೆಲಸ ಮಾಡುತ್ತಿದ್ದೇವೆ ಆದಷ್ಟು ಬೇಗನೆ ಅಲ್ಲಿನ ಪೋಡುಗಳಿಗೆ ವಿದ್ಯುತ್ ನೀಡುತ್ತೇವೆ ಎಂದು ಭರವಸೆ ನೀಡಿದರು ಇನ್ನು ಇದೆ ವೇಳೆಯಲ್ಲಿ ಇ.ಇ ಲಿಂಗರಾಜು ಹನೂರು ತಾಲೂಕು ಎಇಇ ಶಂಕರ್ ಎಇ ರಂಗಸ್ವಾಮಿ ಜೆ ಇ ಗಳಾದ ಮಹದೇವಸ್ವಾಮಿ. ಮಹೇಶ್ ಹಾಗೂ ಸಿಬ್ಬಂದಿ ವರ್ಗದವರು ರೈತರು ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು.

ವರದಿ:ಉಸ್ಮಾನ್ ಖಾನ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ