ಕಲಬುರಗಿ ಜಿಲ್ಲೆಯ ಜಿಲ್ಲಾಧಿಕಾರಿಗಳು ವಸತಿ ನಿಲಯದ ಮಕ್ಕಳಿಗೆ ಪ್ರತಿ ರವಿವಾರವೂ ಒಂದೊಂದು ಶಿಬಿರವನ್ನು ಹಮ್ಮಿಕೊಳ್ಳಲು ಮಹಿಳಾ ವಸತಿ ನಿಲಯ ಪಾಲಕರಿಗೆ ಹೊರಡಿಸಿದ ಆದೇಶದ ಮೇರೆಗೆ ಮಹಿಳಾ ನಿಲಯ ಪಾಲಕರು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಜೇವರ್ಗಿರವರಾದ ಸುಜಾತ ಪಾಟೀಲ ಹಾಗೂ ಸಾವಿತ್ರಿ ಮೇಲಿನ ಕೇರಿ ಮತ್ತು ಇನ್ನೋರ್ವ ಮಹಿಳಾ ನಿಲಯ ಪಾಲಕರು ಸಮಾಜ ಕಲ್ಯಾಣ ಇಲಾಖೆಯ ನಿಲಯ ಪಾಲಕರಾದ ಶಾರದಾ ಮುರಗಾನೂರ ರವರು ಚಾಚೂ ತಪ್ಪದೆ ಪ್ರತಿ ರವಿವಾರವೂ ಅರ್ಥಪೂರ್ಣವಾಗಿ ಬಹಳ ಅಚ್ಚುಕಟ್ಟಾಗಿ ವಿದ್ಯಾರ್ಥಿಗಳಿಗೆ ಆಯಾ ವಿಷಯ ಪರಿಣಿತರಿಂದ ವಿಷಯದ ಬಗ್ಗೆ ತಿಳುವಳಿಕೆ ಮತ್ತು ಬೋಧನೆಯ ಶಿಬಿರವನ್ನು ವಿದ್ಯಾರ್ಥಿನಿಯರಿಗೆ ಮೂಡಿಸುತ್ತಾ ತಮ್ಮ ಕಾರ್ಯೋನ್ಮುಖ ಬೆಳವಣಿಗೆಯನ್ನು ಜೇವರ್ಗಿಯ ದತ್ತನಗರ ಮತ್ತು ವಿದ್ಯಾನಗರದ ನಿಲಯ ಮಕ್ಕಳಿಗೆ ಅದ್ಭುತವಾದ ಜ್ಞಾನವನ್ನು ಮೂಡಿಸುತ್ತಾ ಬರುತ್ತಿದ್ದಾರೆ.
ದಿನಾಂಕ:17-12-2023 ರಂದು ಎರಡನೆಯ ಶಿಬಿರದ ಬ್ಯಾಂಕಿಂಗ್ ತಿಳಿವಳಿಕೆಯ ಬಗ್ಗೆಯನ್ನು ಸಂಬಂಧಿಸಿದ HDFC ಬ್ಯಾಂಕ್ ಮ್ಯಾನೇಜರ್ ಗಿರೀಶ್ ಮಾಲಿ ಪಾಟೀಲ್ ರವರಿಗೆ ಆಹ್ವಾನಿಸಿ ಸುಧೀರ್ಘವಾಗಿ ಬ್ಯಾಂಕಿಂಗ್ ಎಂದರೇನು?ಯಾವ ರೀತಿಯಾಗಿ ಬ್ಯಾಂಕ್ ಮತ್ತು ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಾರೆ,ಆನ್ಲೈನ್ ಬ್ಯಾಂಕಿಂಗ್,ಸ್ಕಾಲರ್ಶಿಪ್,ಬ್ಯಾಂಕ್ ಫ್ರಾಡ್ ಮತ್ತು ಫೇಕ್ ಕರೆಗಳು,ಬ್ಯಾಂಕ್ ಸರ್ಕಾರಿ ಮತ್ತು ಸರ್ಕಾರೇತರ ನೌಕರಿ ಅಥವಾ ಹುದ್ದೆಯನ್ನು ಪಡೆಯಬೇಕಾದರೆ ಯಾವ ಪರೀಕ್ಷೆ,ಯಾವ ಪುಸ್ತಕ,ಯಾವ ಕೋರ್ಸ್ ಓದಬೇಕೆಂದು ಸವಿವರವಾಗಿ ನಿಲಯದ ವಿದ್ಯಾರ್ಥಿನೀಯರಿಗೆ ಅರಿವು ಮೂಡಿಸಿದರು.
ಈ ಸಂದರ್ಭದಲ್ಲಿ ಶಿವುಗೌಡ ನಿಲಯ ಪಾಲಕರು ಸೂರಪೂರ,ಅಸಿಸ್ಟಂಟ್ ಮ್ಯಾನೇಜರ್ ಅನೀಲ್ ಪಾಟೀಲ್,ತಿರುಮಲ್ ಪಾಟೀಲ್ ಹಾಗೂ ನಿಲಯದ ಅಡುಗೆ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದರು.
ವರದಿ:ಚಂದ್ರಶಾಗೌಡ ಮಾಲಿ ಪಾಟೀಲ್