ವಡಗೇರಾ ಪಟ್ಟಣಕ್ಕೆ ಕನ್ನಡ ಜ್ಯೋತಿ ರಥಯಾತ್ರೆ
ಶಹಾಪುರ ತಾಲೂಕಿನಿಂದ ಆಗಮಿಸಲಿದ್ದು,ಅದ್ದೂರಿ ಸ್ವಾಗತಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳಬೇಕು ಎಂದು ತಾಲೂಕು ದಂಡಾಧಿಕಾರಿಗಳಾದ ಶ್ರೀನಿವಾಸ್ ಚಾಪಲ್ ರವರು ಹೇಳಿದರು.
ಪಟ್ಟಣದ ತಾಲೂಕು ಕಚೇರಿಯಲ್ಲಿ ಮಂಗಳವಾರ ಏರ್ಪಡಿಸಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ ಕನ್ನಡ ನಾಡು ನುಡಿಯ,ಸಾಂಸ್ಕೃತಿಕ ಪರಂಪರೆ,ಇತಿಹಾಸ ಮತ್ತು ಕನ್ನಡದ ಮಹತ್ವವನ್ನು ಸಾರಿ ಹೇಳುವ ವಿಶೇಷ ಜ್ಯೋತಿ ರಥಯಾತ್ರೆ ಇದಾಗಿದೆ ಡಿ.28ರಂದು ರಥಯಾತ್ರೆ ಹೈಯಾಳ (ಬಿ.) ಗ್ರಾಮದ ಮೂಲಕ ಬೆಂಡೆಬೆಂಬಳಿ ಗ್ರಾಮದಲ್ಲಿ ವಾಸ್ತವ್ಯವಿದ್ದು ಮರುದಿನ ಜೋಳದಡಿಗಿ, ಬಿಳ್ಹಾರ ಮಾರ್ಗವಾಗಿ ವಡಗೇರಾ ಪಟ್ಟಣಕ್ಕೆ ಆಗಮಿಸಲಿದೆ.
ಡಿ.29 ರಂದು ಅದ್ದೂರಿಯಾಗಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಂತರ ಸಾಂಸ್ಕೃತಿಕ ಕಾರ್ಯಕ್ರಮ ಏರ್ಪಡಿಸಲಾಗಿದೆ.
ಡಿ.30 ರಂದು ಯಾದಗಿರಿ ಜಿಲ್ಲೆಗೆ ಕನ್ನಡ ಜ್ಯೋತಿ ರಥವನ್ನು ಬೀಳ್ಕೊಡಲಾಗುವುದು ಆದ್ದರಿಂದ ಸಾರ್ವಜನಿಕರು, ವಿವಿಧ ಇಲಾಖೆಗಳು,ಕನ್ನಡ ಪರ ಸಂಘಟನೆಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಂಭ್ರಮದ ಸ್ವಾಗತ ಕೋರಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ವರದಿಗಾರರಾದ ರಘುಪತಿ ನಾಟೇಕಾರ,ಬಾಷುಮಿಯಾ ನಾಯ್ಕೋಡಿ, ಮಲ್ಲಿಕಾರ್ಜುನ ಕರ್ಕಳ್ಳಿ ಕ.ಸಾ.ಪ ತಾಲ್ಲೂಕು ಅಧ್ಯಕ್ಷರು, ವಿಶ್ವನಾಥರಡ್ಡಿಗೌಡ ಬಸರಡ್ಡಿ,ಸಂತೋಷ ಬೊಜ್ಜಿ ನಮ್ಮ ಕರ್ನಾಟಕ ಸೇನೆ ತಾಲ್ಲೂಕು ಅಧ್ಯಕ್ಷರು,ಶಿವರಾಜ ಭಾವೂರ,ಮಲ್ಲಪ್ಪ ಮಾಗನೂರ,ಭೀಮಣ್ಣ ಚಿನ್ನಿ ಮಲ್ಲು ಜಡಿ ಕರವೇ ತಾ.ಸಂಘಟನಾ ಕಾರ್ಯದರ್ಶಿ,ಸತೀಶ್ ಜಡಿ ಕರವೇ ವಲಯ ಅಧ್ಯಕ್ಷರು, ಶ್ರೀನಿವಾಸ್ ಮಡಿವಾಳ ಕರವೇ ನಗರ ಅಧ್ಯಕ್ಷರು,ಇನ್ನಿತರರು ಉಪಸ್ಥಿತರಿದ್ದರು.
ವರದಿ:ಶಿವರಾಜ ಸಾಹುಕಾರ್ ವಡಗೇರಾ