ವಿಜಯನಗರ ಜಿಲ್ಲೆ ಕೂಡ್ಲಿಗಿ ಕ್ಷೇತ್ರದ ಕೊಟ್ಟೂರು ಹೊಸ ತಾಲೂಕು ವ್ಯಾಪ್ತಿಗೆ ಬರುವ ಹನುಮನಹಳ್ಳಿ ಗ್ರಾಮದಿಂದ ಕೊಟ್ಟೂರಿನವರೆಗೆ ‘ರಸ್ತೆ ಪ್ಯಾಚ್ ವರ್ಕ್ ‘ ಕಳಪೆ ಕಾಮಗಾರಿ ನಡೆದಿದೆ.ಇದರ ಬಗ್ಗೆ ಸಾವ೯ಜನಿಕರು ಪಿ.ಡಬ್ಲ್ಯೂ.ಡಿ ಅಧಿಕಾರಿ ವೆಂಕಟರಮಣ ಅವರಿಗೆ ಸಾವ೯ಜನಿಕರು ಪೋನ್ ಕರೆಯ ಮೂಲಕ ತಿಳಿಸಿದರೆ,ಆ ಭಾಗಕ್ಕೆ ಸಂಬಂಧಿಸಿದ ನಾಗೇಶ್ ಇಂಜಿನೀಯರ್ ಮತ್ತು ಸಹಾಯಕ ಕಾಯ೯ನಿವಾ೯ಹಕ ಅಭಿಯಂತರರ ಅಧಿಕಾರಿ ವೆಂಕಟರಮಣ ‘ಕ್ಯಾರೆ’ ಅನ್ನುತ್ತಿಲ್ಲವಂತೆ.ನೀವು “ದುಡ್ಡಿಗಾಗಿ ಹೀಗೆಲ್ಲಾ ಮಾಡುತೀರಂತೆ”ಅಲ್ಲಿನ ಜನಗಳೇ ‘ಸರಿ’ ಇಲ್ಲ ಎಂದು ನನಗೆ ನಾಗೇಶ್ ರವರು ಹೇಳಿದರು.
ಸಾವ೯ಜನಿಕರು ಕಾಮಗಾರಿಗಳ ಬಗ್ಗೆ ಏನೇ ಕೇಳಿದರೂ,ನಮಗೆ ಏನೂ ಗೊತ್ತಿಲ್ಲ ನಾನು ಮೊನ್ನೆ ಬಂದಿದ್ದೇನೆ ಕಳಪೆ ಕಾಮಗಾರಿ ಇದ್ದರೆ,ಕೆಲಸವನ್ನು ನಿಲ್ಲಿಸಿ ಎಂದು ಸಾವ೯ಜನಿಕರಿಗೆ ಹೇಳಿ ನಾನು ಇದರಲ್ಲಿ ಒಂದು ರೂಪಾಯಿ ತಿಂದಿಲ್ಲ,ನನಗೆ ಬಹಳ ಬೇಸರವಾಗಿದೆ ಎಂದು ಸಾವ೯ಜನಿಕರಿಗೆ ನಾಮ ‘ಹಚ್ಚುತ್ತಾ’ಹೇಳಿ,ಗುತ್ತಿಗೆದಾರರಿಗೆ,ಇವರಿಂದ “ನನಗೆ ಸಾಕಾಗಿದೆ ನೀವಾದರೂ ಬುದ್ಧಿ ಕಲಿಸಿ “ಎಂದು ಗುತ್ತಿಗೆದಾರರ ಹತ್ತಿರ ತಮ್ಮ ‘ಬುರುಡೆ’ ಮಾತುಗಳಿಂದ ಬುರುಡೆ ಬಿಡುವರಂತೆ.
ಈ ಅಸ್ಸಾಮಿ ತಾನು ಮಾಡಬೇಕಾದ ಕೆಲಸವನ್ನು ನೆಟ್ಟಗೆ ಮಾಡದೇ ರಸ್ತೆ ‘ಪ್ಯಾಚಿಂಗ್ ‘ ಡಾಂಬರೀಕರಣವನ್ನು ಪರಿಶೀಲನೆ ಮಾಡಲು ಈಗ ತಾನೇ ‘ಡ್ಯೂಟಿ’ ಸೇರಿಕೊಡಿರುವ ಇಂಜಿನೀಯರ್ ನಾಗಜು೯ನ ನಾಯ್ಕರವರನ್ನು ಉದ್ದೇಶ ಪೂವ೯ಕವಾಗಿ ಕಳುಹಿಸಿ ಸಾವ೯ಜನಿಕರ ಹತ್ತಿರ ‘ಬಲಿಪಶು’ಮಾಡಿರುವರಂತೆ ಈ ವರದಿಯನ್ನು ನೋಡಿದ ಮೇಲಾದರೂ ಶಾಸಕರಾದ ಶ್ರೀನಿವಾಸ್ ಎನ್ ಟಿ ಕೂಡ್ಲಿಗಿ ವಿಧಾನಸಭಾ ಕ್ಷೇತ್ರ ಇಂತಹ ಅಧಿಕಾರಿಗಳು ‘ಪಾಪ’ ಎಂದು ಸುಮ್ಮನಿರುವರೋ ಅಥವಾ ಕಾನೂನು ಕ್ರಮ ಜರುಗಿಸುವರೋ ಕಾದುನೋಡೋಣ!
ವರದಿ:ವೈ.ಮಹೇಶ್ ಕುಮಾರ್