ಹನೂರು ಪಟ್ಟಣ ಪಂಚಾಯತಿ ಅಧಿಕಾರಿಗಳ ನಿರ್ಲಕ್ಷತನದಿಂದ ಕಳೆದ ಹತ್ತು ದಿನಗಳಿಂದ ವಿವಿಧ ಬಡಾವಣೆಗಳಿಗೆಕುಡಿಯುವ ನೀರಿನ ಸರಬರಾಜು ಇಲ್ಲದಂತಾಗಿದೆ ಎಂದು ಶಾಸಕರಾದ ಎಂ.ಆರ್. ಮಂಜುನಾಥ್ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಹನೂರು ಪಟ್ಟಣ ಪಂಚಾಯತಿ ಅಧಿಕಾರಿಗಳ ನಿರ್ಲಕ್ಷೆಯಿಂದ ಕಳೆದ ಹತ್ತು ದಿನಗಳಿಂದ ಹನೂರು ಪಟ್ಟಣದ ವ್ಯಾಪ್ತಿಗೆ ಕುಡಿಯುವ ನೀರು ಸರಬರಾಜು ಇಲ್ಲದೆ ಪರದಾಡುತ್ತಿರುವ ದೃಶ್ಯವನ್ನು ಕಂಡು ಹನೂರು ಕ್ಷೇತ್ರದ ಶಾಸಕರಾದ ಎಂ.ಆರ್ ಮಂಜುನಾಥ್ ಅಧಿಕಾರಿ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಮಹೇಶ್ ಹಾಗೂ ಅವರ ಸಿಬ್ಬಂದಿಗಳಿಗೆ ಶಾಸಕರು ತರಾಟೆ ತೆಗೆದುಕೊಂಡರು.
ಇಂದು ಕೊಳ್ಳೇಗಾಲ ತಾಲೂಕಿನ ಸಿದ್ದಯ್ಯನಪುರದ ಬಳಿಯಲ್ಲಿರುವ ನೀರು ಶುದ್ಧೀಕರಣ ಘಟಕದ ವಾಟರ್ ಪಂಪ್ ಹೌಸ್ ಗೆ ಭೇಟಿ ಪರಿಶೀಲಿಸಿ ನಂತರ ಸುದ್ದಿಗಾರರೊಂದಿಗೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಪಂಪ ಹೌಸ್ ನಲ್ಲಿ ಹನೂರು ಪಟ್ಟಣ ವ್ಯಾಪ್ತಿಗೆ ನೀರು ಸರಬರಾಜು ಆಗುತ್ತಿತ್ತು ಆದರೆ ಅಧಿಕಾರಿಗಳ ನಿರ್ಲಕ್ಷೆಯಿಂದ ಮೋಟಾರ್ ಕೆಟ್ಟುವುದರಿಂದ ಕಳೆದ ಹತ್ತು ದಿನಗಳಿಂದ ನೀರು ಸರಬರಾಜು ಆಗುತ್ತಿಲ್ಲ ಹಾಗಾಗಿ ಅಧಿಕಾರಿಗಳ ಜೊತೆ ಪಂಪ ಹೌಸ್ ಗೆ ಭೇಟಿ ನೀಡಿ ಕೂಡಲೇ ಕೆಟ್ಟಿರುವ ಮೋಟಾರ್ ದುರಸ್ತಿ ಪಡಿಸಿ ಹನೂರು ಪಟ್ಟಣದ ವ್ಯಾಪ್ತಿಗೆ ಜನತೆಗೆ ಯಾವುದೇ ಲೋಪದೋಷಗಳಿಲ್ಲದಂತೆ ನೀರು ಸರಬರಾಜು ಆಗಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಐದು ಆರು ದಿನಗಳಲ್ಲಿ ಈ ಪಂಪ್ ಹೌಸ್ ನಲ್ಲಿ ಕೆಟ್ಟಿರುವ ಮೋಟಾರ್ ರಿಪೇರಿ ಮಾಡಿ ಕೂಡಲೇ ನೀರು ಸರಬರಾಜು ಆಗುವಂತೆ ಮಾಡಬೇಕು ಜೊತೆಗೆ ಇಲ್ಲಿನ ಸುತ್ತಲೂ ಇರುವ ಗಿಡಗಳನ್ನು ಸ್ವಚ್ಛಗೊಳಿಸಿ ಇಲ್ಲದಿದ್ದರೆ ನಿಮ್ಮ ಮೇಲೆ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಜೆಡಿಎಸ್ ಮುಖಂಡರಾದ ರಾಜುಗೌಡ, ಮಂಜೇಶ್ .ಪಾಳ್ಯ ಗ್ರಾಮದ ಗೋಪಾಲ್ ನಾಯ್ಕ,ಯರಂಬಡಿ ಹುಚ್ಚಯ್ಯ,ಮಹದೇವ್, ಪೋನ್ನಾಚಿ ರಾಜು,ಮುನಿಯಪ್ಪ ಇನ್ನೂ ಹಲವು ಜೆಡಿಎಸ್ ಮುಖಂಡರು ಉಪಸ್ಥಿತರಿದ್ದರು.
ವರದಿ:ಉಸ್ಮಾನ್ ಖಾನ್