ಏನೆಂದರೇನು ಏನಿಲ್ಲದಿದ್ದರೇನು ಇವರು
ಸಂಪತ್ತಿನ ಗುಣಗಾಣ ಮಾಡುವರು
ಸಾಲದ ಹೊರೆಹೊತ್ತು ನಡೆದವರು
ನೆಟ್ಟರು ಸಾಲದಮರ ಗುಣವಂತರು
ಸಾವಿನಲ್ಲಿ ಸೋತರೂ ಸಂಪತ್ತಿನ ಸಾಹುಕಾರರು//
ಕರಿಯದೆ ಬಂದು ಹೋಗುವುದು
ಸಂಪತ್ತಿನ ಗೋಡೆಯ ನೆರಳು ಇದು
ಕರುಣಿಸದೆ ಬಂದು ಹೋಗುವುದು
ಮುಖದ ಮೇಲಿನ ಮೊಡವೆ ತರ ಕಾಣುವದು
ಸುಖದ ಸಂಪತ್ತು ಇದ್ದವರಿಗೆ ಇದು//
ಖಾಲಿ ಜೀವನದ ಬಂಡಿಯಲ್ಲಿ
ಬಂಡಿಯ ಚಾಲಕನಾಗಿ ಸಾಗಬೇಕು ಇಲ್ಲಿ
ಜಾಗ್ರತೆಯಿಂದ ಮುನ್ನಡೆಸಬೇಕುಮನಸ್ಸು ಇಲ್ಲಿ
ಅವಾಗ ಮಾತ್ರ ದಡ ಸೇರುವುದು ಸತ್ಯದಲ್ಲಿ
ಮನುಷ್ಯ ಎಂಬ ಜೀವಿ ಜೀವನದಲ್ಲಿ //
ಯಾವಾಗಲೂ ನಗುಮುಖದ ಒಡೆಯ
ನಡೆದ ದಾರಿಯ ನೆರಳು ಹಿಂಬಾಲಿಸುವುದಯ್ಯ
ಹಿಯಾಳಿಸಬೇಡಿ ಹಿಗ್ಗಾಮುಗ್ಗ ತುಳಿಯಬೇಡಿರಯ್ಯ
ಹಿಗ್ಗಿನಿಂದ ಬರುವರು ಬಡವರು ಬಲ್ಲವರುಯ್ಯ
ಬಲಿಯಾಯಿತು ನೋಡು ಸಂಪತ್ತು ಬಲ್ಲವರಿಗೆ//
-ಮಹಾಂತೇಶ ಖೈನೂರ (ಯಾತನೂರ)