ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)​​

"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.

ತ್ಯಾಜ್ಯವನ್ನು ವೈಜ್ಞಾನಿಕ ವಿಧಾನಗಳಲ್ಲಿ ವಿಂಗಡಿಸಿ, ಗ್ರಾಮದ ಸ್ವಚ್ಛತೆಗೆ ಆದ್ಯತೆ ನೀಡಿ:ಸಿಇಒ ಗರಿಮಾ ಪನ್ವಾರ್

ಯಾದಗಿರಿ:ಪ್ರತಿ ದಿನ ಸ್ವಚ್ಛ ವಾಹಿನಿ ಮೂಲಕ ಜಿ.ಪಿ.ಎಲ್.ಎಫ್ ಸಿಬ್ಬಂದಿಯ ಮೂಲಕ ತ್ಯಾಜ್ಯ ಸಂಗ್ರಹಿಸಿಕೊಂಡು ಬರುವ ತ್ಯಾಜ್ಯವನ್ನು ಸ್ವಚ್ಛ ಸಂಕೀರ್ಣ ಘಟಕಗಳಲ್ಲಿ (ತ್ಯಾಜ್ಯ ಸಂಸ್ಕರ್ಣ ಘಟಕ) ಪ್ರತ್ಯಕವಾಗಿ ವೈಜ್ಙಾನಿಕ ವಿಧಾನಗಳಲ್ಲಿ ವಿಂಗಡಿಸಿ, ಸಂಪನ್ಮೂಲವನ್ನಾಗಿಸಲು ಸಂಸ್ಕರಣೆ ಮಾಡಬೇಕು ಇದರಿಂದ ಗ್ರಾಮದಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಲು ಕ್ರಮವಹಿಸಬೇಕು ಎಂದು ಸೂಚನೆ ನೀಡಿದರು.
ಯಾದಗಿರಿ ತಾಲೂಕಿನ ಅಲ್ಲಿಪೂರ ಗ್ರಾಮದಲ್ಲಿ ನಿರ್ಮಿಸಿರುವ ಸ್ವಚ್ಛ ಸಂಕೀರ್ಣ ಘಟಕಕ್ಕೆ ಭೇಟಿ ನೀಡಿ ತ್ಯಾಜ್ಯ ವಿಂಗಡಣೆ ಮತ್ತು ಸಂಸ್ಖರ್ಣೆಯಲ್ಲಿ ಪ್ರತಿಕ್ರಿಯಲ್ಲಿ ತೊಡಗಿರುವ ಸಿಬ್ಬಂದಿಯರವನ್ನು ಬೇಟಿ ಮಾಡಿ ಮಾತನಾಡಿದರು.
ಸ್ವಚ್ಛವಾಹಿನಿಯ ಮೂಲಕ ಗ್ರಾಮ ಪಂಚಾಯತಿಯ ಎಲ್ಲಾ ಗ್ರಾಮಗಳಲ್ಲಿನ ಮನೆ-ಮನೆಗೆ ಹೋಗಿ ಅಂಗಡಿ, ಹೋಟೆಲ್,ಕಿರಾಣಿ,ಇತರೆ ವಾಣಿಜ್ಯ ಮಳಿಗೆಗಳ ಮೂಲಕ ಉತ್ಪಾದನೆಯಾಗುವ ತ್ಯಾಜ್ಯವನ್ನು ಮೂಲದಲ್ಲಿಯೇ ವಿಂಗಡಿಸಿಕೊAಡು ಬರಬೇಕು ಹಾಗೂ ಸಾರ್ವಜನಿಕರಿಗೆ,ಕಿರಾಣಿ,ಹೋಟೆಲ್ ಮಾಲೀಕರಿಗೆ ತ್ಯಾಜ್ಯವನ್ನು ವಿಂಗಡಿಸಿಕೊಡುವಂತೆ ಜಾಗೃತಿ ಮೂಡಿಸಿಬೇಕು ಎಂದರು ಇದಕ್ಕೆ ಗ್ರಾಮ ಪಂಚಾಯತಿಯ ಎಲ್ಲಾ ಸಿಬ್ಬಂದಿ,ಆಡಳಿತ ಮಂಡಳಿಯವರು ಒಗ್ಗೂಡಿ ಕೆಲಸ ಮಾಡಬೇಕು ಹೇಳಿದರು.
ಗ್ರಾಮ ಪಂಚಾಯತಿಯ ಜವಾಬ್ದಾರಿಯು ಬರಿ ತ್ಯಾಜ್ಯವನ್ನು ಸಂಗ್ರಹಿಸಿಕೊಂಡು ಬರವುದು ಅಷ್ಟೇ ಅಲ್ಲಾ,ಪ್ರತಿ ದಿನ ಉತ್ಪಾದನೆಯಾಗುವ ತ್ಯಾಜ್ಯವನ್ನು ಕಡಿಮೆ ಮಾಡುವುದು,ಮರುಬಳಿಕೆ ಮಾಡುವುದು ಹಾಗೂ ಏಕ ಬಳಕೆಯ ಪ್ಲಾಸ್ಟಿಕ್ ವಸ್ತುಗಳನ್ನು ತ್ಯಜ್ಯಿಸುವಂತೆ ನಮ್ಮ ಗ್ರಾಮೀಣ ಜನರಲ್ಲಿ ಅರಿವು ಮೂಡಿಸಿ ಪರಿಸರ ಸ್ನೇಹಿ ಕೈ ಚೀಲಗಳನ್ನು ಬಳಕೆ ಮಾಡಲು ಉತ್ತೇಜಿಸಬೇಕಿದೆ ಬಳಕೆ ಮಾಡಿರುವ ಬಿಸಾಡುವ,ಬಾಟಲಿ,ಪ್ಲಾಸ್ಟಿಕ್ ಕವರ್, ಕುರಕುರೆ- ಕವರ್ ಇತರೆ ವಸ್ತುಗಳನ್ನು ಎಲ್ಲೆಂದರಲ್ಲಿ ಬಿಸಾಡವುದರಿಂದ ಚರಂಡಿ ಕಟ್ಟುವುದು ಹಾಗೂ ಗ್ರಾಮದ ನೈರ್ಮಲ್ಯ ವಾತವರಣ ಕೇಡುವಂತದಾಗಿದೆ.
ಇಂತಹ ವಸ್ತುಗಳನ್ನು ಪ್ರಾಣಿ,ಪಕ್ಷಿಗಳು ತಿನ್ನುವುದರಿಂದ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ ಇದರ ಹೊಣೆ ನಮ್ಮದಾಗಿದೆ ಹೊರತು ಪ್ರಾಣಿ ಪಕ್ಷಿಗಳದ್ದಲ್ಲಾ ಹಾಗಾಗಿ ನಾವು ದಿನ ಬಳಕೆಯ ವಸ್ತುಗಳನ್ನು ಸ್ವಚ್ಛವಾಹಿನಿಗೆ ವೈಜ್ಞಾನಿಕ ವಿಧಾನಗಳ ಮೂಲಕ ವಿಲೇವಾರಿ ಮಾಡುವುದರಿಂದ ಗ್ರಾಮದಲ್ಲಿನ ರಸ್ತೆಯ ಪಕ್ಕದಲ್ಲಿ,ರಸ್ತೆಯ ಕೂಡುವಿಕೆಯ ಸ್ಥಳದಲ್ಲಿ ಕಸದ ರಾಶಿ ಬೀಳದಂತೆ ಮಾಡಿ ಗ್ರಾಮದಲ್ಲಿ ಸ್ವಚ್ಛತೆ ಕಾಪಾಡಿ ಎಂದರು.
ಇದಕ್ಕೆಲ್ಲಾ ಗ್ರಾಮ ಪಂಚಾಯತಿಯ ಚುನಾಯಿತ ಪ್ರತಿನಿಧಿಯವರು,ಗ್ರಾಮದ ಮುಖಂಡರು, ಯುವಕರು ಹಾಗೂ ಮಹಿಳೆರಿಂದ ಸಹಕಾರದಿಂದ ಸಾದ್ಯವಾಗುತ್ತದೆ ಗ್ರಾಮ ಪಂಚಾಯತಯು ಗ್ರಾಮದ ಸ್ವಚ್ಛತೆಗೆ ಆದ್ಯತೆ ನೀಡಬೇಕು ಎಂದರು.

ಮಕ್ಕಳೊಂದಿಗೆ ಬಿಸಿಊಟ ಸವೆದರು:ಅಲಿಪೂರ ಗ್ರಾಮದಲ್ಲಿರುವ ಶಾಲೆಗೆ ಭೇಟಿ ನೀಡಿ ಶಾಲೆಯಲ್ಲಿನ ಶೌಚಾಲಯ ಮತ್ತು ನೀರಿನ ವ್ಯವಸ್ಥೆ ಪರಿಶೀಲಿನೆ ಮಾಡಿ ಸ್ವಚ್ಛತೆ ಕಾಪಾಡಿಕೊಳ್ಳುವಂತೆ ತಿಳಿಸಿದರು.ಸರಳತೆಯೊಂದಿಗೆ ಮಕ್ಕಳ ಜೊತೆಯಲ್ಲಿ ಬಿಸಿಊಟ ಸವೆದು ಅಡುಗೆಯ ರುಚಿ ನೋಡಿದರು. ಗ್ರಾಮಸ್ಥರ,ಮಕ್ಕಳ ಮೆಚ್ಚುಗೆಗೆ ಪಾತ್ರರಾದರು.

ಯರಗೋಳದಲ್ಲಿರುವ ಪಿಯು ಕಾಲೇಜುಗೆ ಭೇಟಿ: ಯರಗೋಳ ಗ್ರಾಮದಲ್ಲಿರುವ ಪಿ.ಯು ಕಾಲೇಜು ಭೇಟಿ ನೀಡಿ ಪಠ್ಯ ಬೋದನೆ ತರಗತಿ ನಡೆಯುಕೆ ಮಕ್ಕಳ ಕಲಿಕೆಯ ಕುರಿತು ಮಕ್ಕಳೊಂದಿಗೆ ಚರ್ಚಿಸಿ ಅಚ್ಚು-ಕಟ್ಟಾಗಿ ವಿದ್ಯಾಬ್ಯಾಸ ಮಾಡಲು ಕಿವಿ ಮಾತು ಹೇಳಿದರು ಉನ್ನತ ವಿದ್ಯಾಬ್ಯಾಸ ಮಾಡಲು ಕಠಿಣ ಪ್ರರಿಶ್ರಮಿಸಬೇಕು ದೊಡ್ಡ ಹುದ್ದೆಗೆ ಹೋಗುವ ಕನಸು ತಮ್ಮಲ್ಲಿರಬೇಕು ಎಂದು ಮಕ್ಕಳಿಗೆ ಆತ್ಮವಿಶ್ವಾಸ ಹೆಚ್ಚಿಸಿದರು.
ಇವೇಳೆ ಕಾರ್ಯನಿರ್ವಾಹಕ ಅಧಿಕಾರಿಗಳಾದ ಬಸವರಾಜ ಶರಭೈ,ಗ್ರಾಮ ಪಂಚಾಯತಿಯ ಅಧ್ಯಕ್ಷರು,ಸದಸ್ಯರು,ನರೇಗಾ ತಾಂತ್ರಿಕ ಸಂಯೋಜಕರು,ಪಂಚಾಯತ ಅಭಿವೃಧ್ಧಿ ಅಧಿಕಾರಿಗಳು,ಶಾಲಾ ಶಿಕ್ಷಕರು,ಸಿಬ್ಬಂದಿಯವರು ಭಾಗಿಯಾಗಿದ್ದರು.
ವರದಿ,ಶಿವರಾಜ ಸಾಹುಕಾರ್,ವಡಗೇರಾ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ