ಕಲಬುರಗಿ:
RTI ಕಾರ್ಯಕರ್ತರು ಲೂಟಿ ಮಾಡಿದ್ದರೆ ದಾಖಲೆಗಳ ಸಮೇತ ಬಹಿರಂಗ ಪಡಿಸಿ ಶಿಕ್ಷೆ ನೀಡಿ ಹಾಗೂ ಎಲ್ಲಾ ಇಲಾಖೆಗಳಿಗೆ ಕ್ರಮ ಕೈಗೊಳ್ಳಲು ಸೂಚಿಸಿರಿ ಹಾಗೂ ಕಟ್ಟುನಿಟ್ಟಾಗಿ ಕಾಯ್ದೆ ಕಾನೂನುಗಳನ್ನು ಜಾರಿಗೆ ತಕೊಂಡು ಬನ್ನಿ ಅದು ಬಿಟ್ಟು ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನಲ್ಲಿ ನರೇಗಾ ಯೋಜನೆಯಲ್ಲಿ 150 ರಿಂದ 200 ಕೋಟಿಗೂ ಹೆಚ್ಚು ಅನುದಾನವನ್ನು ಈ ಭ್ರಷ್ಟ ಪಿಡಿಒ ಅಧಿಕಾರಿಗಳು ಹಾಗೂ ಮೇಲಧಿಕಾರಿಗಳು ನುಂಗಿ ನೀರು ಕುಡಿದಿದ್ದಾರೆಂದು ಸಾಮಾಜಿಕ ಲೆಕ್ಕ ಪರಿಶೋಧನೆ ವರದಿಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ದಾಖಲೆಗಳ ಸಮೇತ ಬಿಡುಗಡೆಯಾಗಿದೆ ಇಲ್ಲಿ ಲೂಟಿ ಆಗಿರುವುದು,ಲೂಟಿ ಮಾಡಿರುವುದು ಪಂಚಾಯತ್ ರಾಜ್ ಇಲಾಖೆ ಸಚಿವ ಪ್ರಿಯಾಂಕ ಖರ್ಗೆ ಅವರ ಕಣ್ಣಿಗೆ ಕಾಣಿಸುತ್ತಿಲ್ಲವೇ ಅಥವಾ ಪದೇ ಪದೇ ನಿಮ್ಮ ಗಮನಕ್ಕೆ ತೆಗೆದುಕೊಂಡು ಬರಬೇಕಾ?
ಈ ಭ್ರಷ್ಟ ರಾಜಕಿಯ ವ್ಯವಸ್ಥೆಯಲ್ಲಿ,ಈ ಭ್ರಷ್ಟ ಅಧಿಕಾರಿಗಳು ಲೂಟಿ ಮಾಡಿದರೆ ಇವರಿಗೆ ಶಿಕ್ಷೆ ಇಲ್ಲ ಕಾಯಿದೆ ಕಾನೂನುಗಳು ಆಟಕ್ಕುಂಟು ಲೆಕ್ಕಕ್ಕಿಲ್ಲ ಇವರನ್ನು ನಾವು ದೇವರಂತೆ ಪೂಜಿಸಬೇಕು ಈ ಮಧ್ಯೆ ಹೇಳಿಕೆಯನ್ನು ಸಮರ್ಥನೆ ಮಾಡಿಕೊಳ್ಳುವ ಜೇವರ್ಗಿ ತಾಲೂಕಿನ ಶಾಸಕರು ಹಾಗೂ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ ಅಧ್ಯಕ್ಷರು ಆಗಿರುವ ಡಾಕ್ಟರ್ ಅಜಯ ಸಿಂಗ್ ಅವರ ಕ್ಷೇತ್ರದಲ್ಲಿಯೆ ಸಮಸ್ಯೆಗಳ ಸರಮಾಲೆಯೇ ಇದೆ ಜೇವರ್ಗಿ ತಾಲೂಕಿನಲ್ಲಿ ಎರಡೆರಡು ಕಡೆ ಭ್ರಷ್ಟಾಚಾರದ ವಿರುದ್ಧ ಭೂಕಬಳಿಕೆ ವಿರುದ್ಧ ಹೋರಾಟ ನಡೆಯುತ್ತಿದ್ದರೂ ತಮ್ಮ ಗಮನಕ್ಕೆಇಲ್ಲ ಹೋರಾಟಗಾರರು ಸೂಕ್ತವಾದ ನ್ಯಾಯ ಕೊಡಿಸುವಂತೆ ಕೊರೆಯುವ ಚಳಿಯನ್ನು ಲೆಕ್ಕಿಸದೆ ರಸ್ತೆ ಬದಿಯಲ್ಲಿ ಟೆಂಟ್ ಹಾಕಿ ಮಲಗಿಕೊಂಡಿದ್ದಾರೆ ಇದರ ಬಗ್ಗೆ ಮಾತನಾಡಿ ಶಾಸಕರೆ ಎಂದು ರಾಜ್ಯ ಮಾಹಿತಿ ಹಕ್ಕು ಮತ್ತು ಸಾಮಾಜಿಕ ಕಾರ್ಯಕರ್ತರ ವೇದಿಕೆಯ ರಾಜ್ಯ ಕಾರ್ಯಧ್ಯಕ್ಷರಾದ ಚೆನ್ನಯ್ಯ ವಸ್ತ್ರದ ಅವರು ಜನಪ್ರತಿನಿಧಿಗಳ ವಿರುದ್ಧ ಕಿಡಿಕಾರಿದ್ದಾರೆ ಹಾಗೂ RTI ಕಾರ್ಯಕರ್ತರು,ಸಂಘ ಸಂಸ್ಥೆಗಳು,ಸಾಮಾಜಿಕ ಹೋರಾಟಗಾರರು, ಕೋಟಿಗಟ್ಟಲೇ ಲೂಟಿ ಮಾಡಿದರೆ ಬಹಿರಂಗಪಡಿಸಲ್ಲಿ ಇಲ್ಲಸಲ್ಲದ ಆರೋಪಗಳನ್ನು ಮಾಡಿ ಪತ್ರಿಕೆಯಲ್ಲಿ ಸ್ಟೇಟ್ಮೆಂಟ್ ಕೊಡುವುದು ಎಷ್ಟರಮಟ್ಟಿಗೆ ಸರಿ ದಾಖಲೆ ಇದ್ದರೆ ಬಹಿರಂಗಪಡಿಸಿ ಎಂದು
ಸವಾಲು ಹಾಕಿದ್ದಾರೆ
ಇದು ನಮ್ಮ ದೇಶದ ಸಂವಿಧಾನ ಆಡಳಿತ ಹಾಗೂ ಕಾನೂನಿನ ಕ್ರಮ ಸರ್ಕಾರಕ್ಕೆನಾಚಿಕೆ, ಮಾನ,ಮರ್ಯಾದೆ ಇದ್ದರೆ ಈ ಕೂಡಲೇ ಲೂಟಿ ಮಾಡಿದ 95 ಭ್ರಷ್ಟ ಪಿಡಿಓ ಅಧಿಕಾರಿಗಳನ್ನು ಶಿಕ್ಷಿಸಿ ಅದು ಬಿಟ್ಟು ಶಿಕ್ಷಿಸುವ ನೆಪದಲ್ಲಿ ಭ್ರಷ್ಟರನ್ನು ರಕ್ಷಿಸಿ ಸಮಾಜಕ್ಕೆ ಕೆಟ್ಟ ಸಂದೇಶವನ್ನು ಕೊಡವದು ಸರಿಯಲ್ಲ ಎಂದು ಚೆನ್ನಯ್ಯ ವಸ್ತ್ರದ್ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.