ಮುಂಡಗೋಡ:ಅದು ಆಟ ಆಡಿಕೊಂಡು ಬೆಳೆಯುತ್ತಿದ್ದ ಏನು ಅರಿಯದ 3 ವರ್ಷದ ಮುಗ್ದ ಮಗು, ಮೂಲತಃ ಮುಂಡಗೋಡ ತಾಲೂಕಿನ ಇಂದೂರ್ ಗ್ರಾಮದವರು , ಪೋಷಕರು ಇಟ್ಟಿಗೆ ಬಟ್ಟಿ ಯಲ್ಲಿ ಇಟ್ಟಿಗೆ ನಿರ್ಮಾಣ ಮಾಡುವ ಕೆಲಸ ದಲ್ಲಿ ನಿರತರಾಗಿರುವಾಗ ಮಗು ಆಕಸ್ಮಿಕವಾಗಿ ನೀರಿನ ತೊಟ್ಟಿಗೆ ಬಿದ್ದು ಸಾವನ್ನಪ್ಪಿದೆ. ತಕ್ಷಣವೇ ಪೋಷಕರು ಮಗುವನ್ನು ಮುಂಡಗೋಡ ತಾಲೂಕ ಆಸ್ಪತ್ರೆಗೆ ಕರೆ ತಂದಿದ್ದಾರೆ, ಆದರೆ ಅಷ್ಟರಲ್ಲಾಗಲೇ ಮಗು ಸಾವನ್ನಪ್ಪಿತ್ತೂ?? ಎಂದೆ ಹೇಳಲಾಗಿತ್ತು ಆದರೆ ಹೆಚ್ಚಿನ ಚಿಕಿತ್ಸೆಗೆ ಹುಬ್ಬಳ್ಳಿಯ ಕಿಮ್ಸ್ ಗೆ ಶಿಫಾರಸ್ಸು ಮಾಡಿದ್ದಾರೆ, ಅಲ್ಲಿಯೂ ಮಗು ಸಾವನ್ನಪ್ಪಿರುವ ಕುರಿತು ವೈದ್ಯರು ಹೇಳಿದಾಗ ಪೋಷಕರು ತೀವ್ರ ಆಘಾತ ವ್ಯಕ್ತಪಡಿಸಿದ್ದರು, ಅವರ ಆಕ್ರಂದನ ನೆರೆದವರ ಕಣ್ಣಾಲಿಯಲ್ಲಿ ಕಣ್ಣೀರು ಸುರಿಸಿತ್ತು.
ತಾಲೂಕಾ ಆಡಳಿತ ಏನು ಮಾಡುತ್ತಿದೆ??
ಈ ಹಿಂದೆ ನಾನ್ ಅಗ್ರಿಕಲ್ಚರ್ N A ಅಲ್ಲದ ಕೃಷಿ ಜಮೀನುಗಳಲ್ಲಿ ಇಟ್ಟಿಗೆ ಭಟ್ಟಿ ಗಳನ್ನು ನಡೆಸುತ್ತಿದ್ದವ ರ ಮೇಲೆ ನೋಟಿಸ್ ನೀಡಿ, ಇಟ್ಟಿಗೆ ಭಟ್ಟಿಗಳನ್ನು ಜೆಸಿಬಿ ಮೂಲಕ ನಾಶ ಮಾಡುವ ಕಾರ್ಯಕ್ಕೆ ತಹಶೀಲ್ದಾರ್ ಮುಂದಾಗಿದ್ದರು,ಆದರೆ ಈಗ ಅಕ್ರಮ ಭಟ್ಟಿಗಳಿಗೆ ಮಗು ಬಲಿಯಾಗಿರುವ ಕಾರಣ ತಹಶೀಲ್ದಾರ್ ರು ಯಾವ ರೀತಿ ಕ್ರಮ ಕೈಗೊಳ್ಳುವ ರೂ ಎಂಬುದನ್ನು ಕಾದು ನೋಡಬೇಕಿದೆ.
ನಿರ್ಲಕ್ಷ್ಯಕ್ಕೆ ಬಲಿಯಾದ ಮಗು?!
ಇಷ್ಟೆಲ್ಲಾ ಘಟನೆ ನಡೆದಿದ್ದು ಕೇವಲ ನಿರ್ಲಕ್ಷ್ಯ ದಿಂದಾ ಮಾತ್ರ ಅನ್ನುವುದು ,ಎಂಥವರಿಗೂ ಮೇಲ್ನೋಟಕ್ಕೆ ತಿಳಿಯುವ ವಿಷಯ. NA ಅಲ್ಲದ ಕೃಷಿ ಜಮೀನಿನಲ್ಲಿ ಇಟ್ಟಿಗೆ ಭಟ್ಟಿ ನಡೆಸಲು ಕೊಟ್ಟಿದ್ದು ಜಮೀನು ಮಾಲೀಕನ ನಿರ್ಲಕ್ಷಿತ ತಪ್ಪು, ಇಟ್ಟಿಗೆ ಭಟ್ಟಿ ಯಲ್ಲಿ ಕೆಲಸ ಮಾಡುವಾಗ ಮಗುವಿನ ಮೇಲೆ ಕಾಳಜಿ ವಹಿಸದೆ ಇರುವುದು ತಾಯಿಯ ನಿರ್ಲಕ್ಷಿತ ತಪ್ಪು, ಇಟ್ಟಿಗೆ ಭಟ್ಟಿ ನಡೆಸುವವನ ಮೇಲೆ ಹಾಗೂ ಅದಕ್ಕೆ ಅವಕಾಶ ಮಾಡಿಕೊಟ್ಟ ವನ ಮೇಲೆ ಕ್ರಮ ಕೈಗೊಳ್ಳದೆ ಇರುವುದು ತಾಲೂಕ ಆಡಳಿತದ ನಿರ್ಲಕ್ಷಿತ ತಪ್ಪು, ಒಟ್ಟಾರೆಯಾಗಿ ಚೆಂದವಾಗಿ ಆಡುತ್ತಾ, ಭವಿಷ್ಯದಲ್ಲಿ ಮಿಂಚಬೇಕಿದ್ದ ಮಗುವೊಂದು ದುರಂತ ಅಂತ್ಯ ಕಂಡಿದ್ದು ಮಾತ್ರ ನಿಜಕ್ಕೂ ಹೃದಯ ವಿದ್ರಾವಕ ಘಟನೆಯೇ ಸೇರಿ ಇದಕ್ಕೆ ಕಾರಣ ರಾದವರ ಮೇಲೆ ಕ್ರಮ ಕೈಗೊಂಡರೆ ಮಾತ್ರ ಮಗುವಿನ ಆತ್ಮಕ್ಕೆ ಶಾಂತಿ ಸಿಗುತ್ತದೆ ಎಂದು ಸಾರ್ವಜನಿಕರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.