ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಬೋಧಿಸತ್ವವು ಅಂಬೇಡ್ಕರ್ ರವರು ಸಮಾಜಕ್ಕೆ ಹಾಕಿಕೊಟ್ಟ ಬುನಾದಿ

ಹನೂರು:ಬೋಧಿಸತ್ವವು ಡಾ.ಬಾಬಾಸಾಹೇಬ್ ಅಂಬೇಡ್ಕರ್ ರವರು ಸ್ಥಾಪನೆ ಮಾಡಿರುವ ಭಾರತೀಯ ಬೌದ್ಧ ಮಹಾ ಸಭಾ ಕರ್ನಾಟಕ ರಾಜ್ಯ(ರಿ.) ಸಂಘಟನೆ ವತಿಯಿಂದ ನಾವು ಬೌದ್ಧ ಭಾರತಕ್ಕಾಗಿ ಸಂಘಟಿಸೋಣ ಕಾರ್ಯಕ್ರಮವು ಹನೂರು ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಜರುಗಿತು.
ದೀಪ ಬೆಳಗಿಸುವುದರ ಜೊತೆಗೆ ಪಂಚಶೀಲ ಪಟಿಸುವುದರ ಮೂಲಕ ಕಾರ್ಯಕ್ರಮವನ್ನು ಅತಿಥಿಗಳು ಉದ್ಘಾಟಿಸಿದರು.ಕಾರ್ಯಕ್ರಮ ಕುರಿತು ಮಾತನಾಡಿದ ಭಾರತೀಯ ಬೌದ್ಧ ಮಹಾ ಸಭಾ ಕರ್ನಾಟಕ ಯುವ ರಾಜ್ಯಾಧ್ಯಕ್ಷ ದರ್ಶನ್ ಸೋಮಶೇಖರ್ ಡಾ ಬಿ ಆರ್ ಅಂಬೇಡ್ಕರ್ ರು ಕನಸು ಕಂಡತಹ ಪ್ರಬುದ್ಧ ಭಾರತಕ್ಕಾಗಿ ನಾನು ಸದಾ ದುಡಿಯಲು ಸಿದ್ದನಿದ್ದೇನೆ ರಾಜ್ಯದ ಯುವ ಸಮೂಹವನ್ನು ಉತ್ತಮ ಬೆಳವಣಿಗೆಯತ್ತ ಕೊಂಡೋಯ್ಯೋ ಕೆಲಸವನ್ನು ನನ್ನ ಕೈಲಾದಷ್ಟು ಪ್ರಾಮಾಣಿಕವಾಗಿ ಮಾಡುತ್ತೇನೆ ಎಂದು ಹೇಳಿದರು.
ಹಾಗೂ ಹಿಂದೂಗಳು ದೇವಸ್ಥಾನಕ್ಕೆ ಹೋಗುತ್ತಾರೆ ಕ್ರಿಶ್ಚಿಯನ್ನರು ಚರ್ಚ್ ಗೆ ಹೋಗುತ್ತಾರೆ. ಮುಸಲ್ಮಾನರು ಮಸೀದಿಗೆ ಹೊಗುತ್ತಾರೆಯೋ ಅದೇ ರೀತಿ ದೇಶದ ಬಹುಜನರು ಬೌದ್ಧ ವಿಹಾರಗಳಿಗೆ ತೆರಳಬೇಕು ಭಗವಾನ್ ಬುದ್ಧರು ಬೋದಿಸಿದ ಪಂಚಾಶೀಲಗಳನ್ನು ಅಳವಡಿಸಿಕೊಂಡು ನಾವು ಉತ್ತಮವಾದ ಪ್ರಬುದ್ಧ ಭಾರತ ನಿರ್ಮಾಣ ಮಾಡಬೇಕು.ಧಾರ್ಮಿಕವಾಗಿ ಕ್ರಿಶ್ಚಿಯನ್ ರಾಷ್ಟ್ರಗಳಿವೆ ಧರ್ಮದ ರೂಢಿ ಸಂಪ್ರದಾಯದಂತೆ ರಾಜ್ಯ ಹಾಳುತ್ತಿವೆ ಆಗೆಯೇ ಮುಸ್ಲಿಂ ರಾಷ್ಟ್ರಗಳು ತಮ್ಮ ಧರ್ಮಸಂಸ್ಕೃತಿಯಂತೆ ರಾಜಕೀಯ ಅಧಿಕಾರ ಮಾಡುತ್ತಿವೆ ನಮ್ಮ ಭಾರತ ದೇಶ ಬುದ್ಧರ ಕಾರಣಕ್ಕಾಗಿ ಜಗಪ್ರಸಿದ್ದಿಯಾಗಿದ್ದರು ಸಹ ಬ್ರಾಹ್ಮಣ ಸ್ಮೃತಿಗಳು ಭಾರತವನ್ನು ಆಳುತ್ತಿವೆ ಭಾರತೀಯರಾದ ನಾವು ಬೌದ್ಧ ಧರ್ಮದ ಆದರ್ಶಗಳನ್ನು ರೂಢಿ ಮತ್ತು ಸಂಪ್ರದಾಯಗಳ ಮೂಲಕ ಒಂದು ರಾಷ್ಟ್ರೀಯ ದಮ್ಮ ಶಕ್ತಿಯಾಗಿ ಬೆಳೆಯಬೇಕಿದೆ ಏಕೆಂದರೆ ಅಬ್ರಾಹ್ಮಣರಾದ ನಾವು ಈ ದೇಶದ ಮೂಲ ನಿವಾಸಿಗಳಾಗಿದ್ದೇವೆ ಇದನ್ನು ಬಾಬಾಸಾಹೇಬರೇ ತಿಳಿಸಿದ್ದಾರೆ ಜಗತ್ತಿನ ಜ್ಞಾನಿ ಅವರೇ ಆಗಿರುವುದರಿಂದ ಬುದ್ಧರ ತತ್ವದರ್ಶಗಳಂತೆ ಜಗತ್ತನ್ನು ದುಃಖ್ಖದಿಂದ ಸುಖ ಜೀವನದ ಕಡೆಗೆ ಕೊಂಡೊಯ್ಯುವ ಕಾರ್ಯವನ್ನು ಹನೂರಿನಿಂದಲೇ ಪ್ರಾರಂಭಿಸೋಣ ಎಂದರು ಕರ್ನಾಟಕ ರಾಜ್ಯದಲ್ಲಿ ಯುವ ಬೌದ್ಧ ಸಮಾಜದ ಘಟಕವನ್ನು ಬಲಪಡಿಸಿ ಸಂಘಟನೆ ಮಾಡುವಂತೆ ಭಾರತೀಯ ಬೌದ್ಧ ಸಮಾಜದ ರಾಷ್ಟ್ರೀಯ ಕಾರ್ಯದಕ್ಷರಾದ ಭೀಮರಾವ್ ಯಸ್ವಂತ ರಾವ್ ಅಂಬೇಡ್ಕರ್ ರವರು ಕೊಟ್ಟಿರುವ ಜವಾಬ್ದಾರಿಯನ್ನು ಉತ್ತಮವಾಗಿ ನಿರ್ವಹಿಸುತ್ತಿನೆ ಎಂದು ತಿಳಿಸಿದರು.
ಇದೆ ವೇಳೆ ಮಾತನಾಡಿದ ಶಿಕ್ಷಕ ನಾಗರಾಜು ಉತ್ತಂಬಳ್ಳಿರವರು 1954 ರಲ್ಲಿ ಅಂಬೇಡ್ಕರ್ ರವರು ಸ್ಥಾಪನೆ ಮಾಡಿದಂತ ಈ ಭಾರತೀಯ ಬೌದ್ಧ ಮಹಾಸಭಾ ಸಂಘಟನೆಯು ಇಲ್ಲಿತನಕ 69 ವರ್ಷ ಕಳೆದಿದೆ ಆದರೂ ಕೂಡಾ ಪ್ರಬುದ್ಧ ಭಾರತದ ಕನಸು ಹಾಗೆ ಉಳಿದಿದೆ ದೇಶಕ್ಕೆ ಅಂಬೇಡ್ಕರ್ ರರು ಕೊಟ್ಟಂತಹ ಸಂವಿಧಾನ ಎಷ್ಟು ಮುಖ್ಯವೊ. ಭಾರತೀಯ ಬೌದ್ಧ ಮಹಾ ಸಭಾನು ಕೂಡ ಅಷ್ಟೇ ಮುಖ್ಯ ಆಗಾಗಿ ಈಗಿನ ಯುವ ಪೀಳಿಗೆ ಬೌದ್ಧ ದಮ್ಮವನ್ನು ಅರ್ಥಮಾಡಿಕೊಳ್ಳಬೇಕು ಅಂಬೇಡ್ಕರ್ ರವರು ತೋರಿದ ಸಮಾನತೆ ಸೋದರತೆ ಬಾತೃತ್ವದ ದಮ್ಮವನ್ನು ನಾವುಗಳು ಪಾಲಿಸಿ ಅನುಸರಿಸಬೇಕು ಬೌದ್ಧ ದಮ್ಮದಿಂದ ಮಾತ್ರ ಇಡೀ ದೇಶದ ಅಭಿವೃದ್ಧಿ ಸಾಧ್ಯ ಪ್ರತಿಯೊಬ್ಬರಿಗೂ ಸ್ಥಾನ ಮಾನ ಗೌರವ ಸಿಗುತ್ತದೆ ಆದ್ದರಿಂದ ಯುವಕರು ಬುದ್ಧರ ಚಿಂತನೆಗಳನ್ನು ಅಳವಡಿಸಿಕೊಂಡು ಬಾಬಾಸಾಹೇಬರ ಮಾರ್ಗದಲ್ಲಿ ನಡೆಯಿರಿ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ವಕೀಲರು ಶ್ರೀನಿವಾಸ್. ಶಿವರಾಜು,ಬಿ ಆರ್ ಕೃಷ್ಣಯ್ಯ,ನಂಜುಂಡಸ್ವಾಮಿ,ಬಾನು ಪ್ರಸಾದ್, ವರುಣ್,ಪ್ರಕಾಶ್,ನಾಗರಾಜು,ಹನೂರು ತಾಲೂಕಿನ ವಿವಿಧ ಗ್ರಾಮದ ಯುವಕರುಗಳು ಮುಖಂಡರು ಸೇರಿದಂತೆ ಬೌದ್ಧನುಯಾಯಿಗಳು ಉಪಸ್ಥಿತರಿದ್ದರು.

ವರದಿ:ಉಸ್ಮಾನ್ ಖಾನ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ