ದಾವಣಗೆರೆ:ಇಂದಿನ ದಿನಮಾನಗಳಲ್ಲಿ ಮಾಧ್ಯಮದಲ್ಲಿ ಗಮನಿಸಿದರೆ ಹೆಚ್ಚಿನ ಅಟ್ರಾಸಿಟಿ ಪ್ರಕರಣಗಳ ಬಗ್ಗೆ
ಬೇಸರ ಎನಿಸುತ್ತದೆ ಜಾತಿ ನಿಂದನೆ ಮಾಡಿದರೆ ಅಟ್ರಾಸಿಟಿ ಕೇಸ್ ದಾಖಲಿಸಿ ಕಾನೂನು ಪ್ರಕಾರ ಕ್ರಮ ಕೈಗೊಳ್ಳುವಂತೆ ವ್ಯಕ್ತಿನಿಂದನೆ ನಿಗ್ರಹಕ್ಕೆ ಹೊಸ ಕಠಿಣ ಕಾನೂನು ರೂಪಿಸಬೇಕಾದ ಅವಶ್ಯಕೆ ಇದೆ ಎಂದು ಸಿರಿಗೆರೆ ಶ್ರೀಮದ್ ಉಜ್ಜಯನಿ ಸದ್ಧರ್ಮ ಸಿಂಹಾಸನಾಧೀಶ್ವರ ತರಳಬಾಳು ಜಗದ್ಗುರು ಶ್ರೀ ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿ ಯವರು ಪ್ರತಿಪಾದಿಸಿದರು.
ನಗರದ ಎಂಬಿಎಂ ಕಾಲೇಜು ಮೈದಾನದಲ್ಲಿ ಏರ್ಪಡಿಸಿದ್ದ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ 24 ನೇ ಮಹಾ ಅಧಿವೇಶನದ ಉದ್ಘಾಟನಾ ಸಮಾರಂಭದ ಸಾನಿಧ್ಯ ವಹಿಸಿ ಮಾತನಾಡಿದ ಅವರು,ಇತ್ತೀಚಿನ ದಿನಗಳಲ್ಲಿ ರಾಜಕಾರಣಿಗಳು,ಜನಪ್ರತಿನಿಧಿಗಳು ಹಾಗೂ ಸ್ವಾಮೀಜಿಗಳ ವಿರುದ್ಧ ಟೀಕೆ ಮಾಡಲು ಬಳಸುತ್ತಿರುವ ಭಾಷೆ ಗಮನಿಸಿದರೆ ಬೇಸರ ಆಗುತ್ತದೆ ಈ ಕಾರಣಕ್ಕಾಗಿ ಜಾತಿನಿಂದನೆ ಕೇಸ್ ನಂತೆ ವ್ಯಕ್ತಿನಿಂದನೆ ಕಾನೂನು ಜಾರಿಗೆ ತುರ್ತಾಗಿ ಬರಬೇಕಾದ ಅಗತ್ಯವಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕಾನೂನು ಜಾರಿಗೊಳಿಸುವ ಸಂಬಂಧ ಶೀಘ್ರ ಕ್ರಮ ತೆಗೆದುಕೊಳ್ಳಬೇಕು ಎಂದು ಸಲಹೆ ನೀಡಿದರು.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.