ಯಾದಗಿರಿ:ಜಯ ಕರ್ನಾಟಕ ಸಂಘಟನೆಯ ಹೆಸರಲ್ಲಿಯೇ ಜಯವಿದೆ ಹೀಗಾಗಿ ಈ ಸಂಘಟನೆ ಕನ್ನಡ ನಾಡು ನುಡಿಗಾಗಿ ಯಶಸ್ವಿ ಹೋರಾಟ ಮಾಡುತ್ತಿದೆ ಎಂದು ನಾಲ್ವಾರ್ ಕೋರಿಸಿದ್ದೇಶ್ವರ ಮಠದ ಶ್ರೀ ಶ್ರೀ ಡಾ.ಸಿದ್ದತೋಟೆoದ್ರ ಶಿವಾಚಾರ್ಯರು ಅಬಿಪ್ರಾಯಪಟ್ಟರು.
ನಮ್ಮ ಜಯ ಕರ್ನಾಟಕ ಸಂಘಟನೆ ಯಾದಗಿರಿ ಜಿಲ್ಲಾ ಘಟಕದ ವತಿಯಿಂದ 50ನೇ ಸುವರ್ಣ ಕರ್ನಾಟಕ ಮಹೋತ್ಸವದ ಪ್ರಯುಕ್ತ ಜರುಗಿದ “ಯಾದಗಿರಿ ಜಿಲ್ಲಾ ಉತ್ಸವ” ಕಾರ್ಯಕ್ರಮಕ್ಕೆ ಆಗಮಿಸಿದ ದರಾ ಬೇಂದ್ರೆಯಂತವರು ಕನ್ನಡದ ಅಸ್ಮಿತೆಯನ್ನು ಎತ್ತಿಹಿಡಿದ ವಿಶೇಷತೆ ನಮ್ಮ ಮುಂದೆ ಇದೆ ಎಂದು ಹೇಳಿದರು.
ಕನ್ನಡ ಪದದಲ್ಲಿ ವಿಶೇಷತೆ ಇದೆ ಎಂದು ಶ್ರೀಗಳು ನುಡಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಶಾಸಕ ಚೆನ್ನಾರೆಡ್ಡಿ ಪಾಟೀಲ್ ತುನ್ನೂರು,ಜಯ ಕರ್ನಾಟಕ ಸಂಘಟನೆ ಜಿಲ್ಲೆಯಲ್ಲಿ ಉತ್ತಮ ಕಾರ್ಯ ಮಾಡುತ್ತಿದೆ ಎಂದರು.
ಹನುಮೇಗೌಡ ಬೀರನಕಲ್ ಮಾತನಾಡಿ ಜಯ ಕರ್ನಾಟಕ ವರ್ಷಗಳಿಂದ ಗಟ್ಟಿಯಾಗಿ ಕೆಲಸ ಮಾಡುತ್ತಿದೆ,ಕೋವಿಡ್ ಸಂದರ್ಭದಲ್ಲಿ ಜೀವದ ಹಂಗುತೊರೆದು ಅನ್ನದಾನ ಮಾಡಿದೆ.ಸಾಮಾಜಿಕ ಸಂಘಟನೆಯನ್ನು ಮಾಡುತ್ತಿದೆ ನನ್ನ ಬೆಂಬಲ ಸಂಘಟನೆಗೆ ಇದೆ ಎಂದರು.
ರಾಜ್ಯಾಧ್ಯಕ್ಷ ಬಿ.ಎನ್.ಜಗದೀಶ್ ಅಧ್ಯಕ್ಷತೆ ವಹಿಸಿ ಮಾತನಾಡಿ ರಾಜ್ಯದ ಉದ್ದಗಲಕ್ಕೂ ಸಂಘಟನೆ ಆಗಿದೆ ಅದೇ ರೀತಿ ಜಿಲ್ಲೆಯಲ್ಲಿ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ ಎಂದು ತಿಳಿಸಿದರು.
“ನಮ್ಮ ಯಾದಗಿರಿ ಜಿಲ್ಲಾ ಉತ್ಸವ” ಕಾರ್ಯಕ್ರಮಕ್ಕೆ ನಾಲವರ ಕೋರಿಸಿದ್ದೇಶ್ವರ ಮಠದ ಶ್ರೀ ಶ್ರೀ ಡಾ. ಸಿದ್ದತೋಟೆoದ್ರ ಶಿವಾಚಾರ್ಯರು,ಮಹರ್ಷಿ ವಾಲ್ಮೀಕಿ ಆಶ್ರಮದ ಶ್ರೀ ವರದಾನೇಶ್ವರ ಮಹಾಸ್ವಾಮಿಗಳು, ಕನ್ನಡ ಚಲನಚಿತ್ರ ನಟರಾದ ವಿಕ್ಟರಿ ಶರಣ್,ಚೋಳ ಸಿನಿಮಾದ ನಟರಾದ ರೂರಲ್ ಅಂಜನ್,ಜಯ ಕರ್ನಾಟಕ ಸಂಘಟನೆ ರಾಜ್ಯಾಧ್ಯಕ್ಷರಾದ ಶ್ರೀ ಬಿ ಎನ್ ಜಗದೀಶ್,ರಾಜ್ಯ ಕಾರ್ಯದರ್ಶಿಗಳಾದ ಶ್ರೀ ಹೆಚ್ ರಾಮಚಂದ್ರಪ್ಪ,ವಿಜಯಕುಮಾರ್ ಮೊಗ್ದoಪುರ, ಯಾದಗಿರಿ ಶಾಸಕರಾದ ಶ್ರೀ ಚನ್ನಾರೆಡ್ಡಿ ಪಾಟೀಲ್ ತುನ್ನೂರು,ಪ್ರಥಮ ದರ್ಜೆ ಗುತ್ತಿಗೆದಾರರಾದ ಶ್ರೀ ಹಣಮೇಗೌಡ ಬಿರನಕಲ್,ಜಿಲ್ಲಾ ವಾಲ್ಮೀಕಿ ಸಂಘದ ಅಧ್ಯಕ್ಷರಾದ ಶ್ರೀ ಗೌಡಪ್ಪಗೌಡ ಆಲ್ದಾಳ್ ಕರುನಾಡಿನ ಖ್ಯಾತ ಹಾಸ್ಯ ಕಲಾವಿದರು ಹಾಗೂ ಯಾದಗಿರಿ ಜಿಲ್ಲಾ ಗಣ್ಯಮಾನ್ಯರು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ವರದಿ:ಶಿವರಾಜ ಸಾಹುಕಾರ್ ವಡಗೇರಾ