ರಬಕವಿ ಬನಹಟ್ಟಿ:ತಂದೆ ತಾಯಿಗಳು ಇದ್ದರೂ ಈಗಿನ ಕಾಲದಲ್ಲಿ ಆಶ್ರಮಕ್ಕೆ ಬಿಟ್ಟು ಬರುವಂತ ಕಲಿಯುಗದಲ್ಲಿ ಇಲ್ಲೊಬ್ಬ ಸಾಮಾಜಿಕ ಹೋರಾಟಗಾರ ಸತತವಾಗಿ ಆರು ವರ್ಷಗಳಿಂದ ತಂದೆ ಪುಣ್ಯ ಸ್ಮರಣೆಯ ಅಂಗವಾಗಿ ಕಾಯಕ ಮಾಡುತ್ತಾ ಬಂದಿರುವ ಕರ್ನಾಟಕ ರಕ್ಷಣಾ ವೇದಿಕೆಯ ತಾಲೂಕ ಪ್ರಧಾನ ಕಾರ್ಯದರ್ಶಿಯಾದ ಬಶೀರ್ ಜಮಾದಾರ್ ಇವರು ವರ್ಷದ ಕಡೆಯ ಡಿಸೆಂಬರ್ ಬಂತಂದರೆ ವಿಶೇಷವಾಗಿ ತನ್ನ ತಂದೆ ಯ ಪುಣ್ಯಸ್ಮರಣೆ ನೆನಪಿನ ಗೋಸ್ಕರ ನೀರ್ಗತಿಯರನ್ನು ಗುರುತಿಸಿ ಬಸ್ ನಿಲ್ದಾಣ ಮಂದಿರ ಮಠಗಳು ಮಸೀದಿ ಹತ್ತಿರ ಬೀದಿಯಲ್ಲಿ ಮಲಗಿರುವಂತ ಅನಾಥರನ್ನು ಗುರುತಿಸಿ, ಅವರಿಗೆ ಊಟ ನೀರು ಕೊಟ್ಟು ,ಅವರ ಮಾತುಗಳನ್ನು ಆಲಿಸಿ
ಚಳಿಯಲ್ಲಿ ದಿಕ್ಕು ಇಲ್ಲದವರ ಅನಾಥ ನಿರ್ಗತಿಕರಿಗೆ ಮಲಗಲಿಕ್ಕೆ ರಗ್ಗು ಬೆಡ್ ಶೀಟುಗಳನ್ನು ಕೊಟ್ಟು,ತನ್ನ ತಂದೆ ಸಿಕಂದರ್ ಸಾಬ್ ಹೆಸರಿನಲ್ಲಿ ಪುಣ್ಯದ ಕೆಲಸ ಮಾಡುತ್ತಿದ್ದಾರೆ.
ಬಶೀರ್ ಜಮಾದಾರ್ ಇವರು ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ಬನಹಟ್ಟಿ ನಗರದ ಒಬ್ಬ ಆಟೋ ಚಾಲಕನಾಗಿ ವೃತ್ತಿಯನ್ನು ಮಾಡುತ್ತಿದ್ದು , ಇವರು ಮಾಡುವಂತಹ ತಂದೆಯ ಹೆಸರಿನಲ್ಲಿ ಕಾಯಕವನ್ನು ಹಲವರಿಗೆ ಪ್ರೀತಿ ಮೆಚ್ಚುಗೆ ಪಾತ್ರವಾಗಿದ್ದಾರೆ.ಇದೇ ಸಂದರ್ಭದಲ್ಲಿ ಸುರೇಶ್ ಗೋಕಾವಿ,ಸಂಜೀವ್ ಶಿರೋಳ,ರಾಜು ಕಂಬಾರ್ ಉಪಸ್ಥಿತರಿದ್ದು ಒಳ್ಳೆಯ ಕಾರ್ಯಕ್ಕೆ ಸಾತ್ ಕೊಟ್ಟಿದ್ದಾರೆ.
ವರದಿ ಮಹಬೂಬ್ ಬಾರಿಗಡ್ಡಿ