ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಡಣಾಪೂರ ಗ್ರಾಮದಲ್ಲಿ ಅಯೋಧ್ಯೆ ಶ್ರೀರಾಮ ಮಂದಿರದಿಂದ ಬಂದ ಮಂತ್ರಾಕ್ಷತೆಯ ವಿತರಣೆಯ ಕಾರ್ಯಕ್ರಮವು ಸಡಗರದಿಂದ ಜರುಗಿತು.
ಗ್ರಾಮದಲ್ಲಿ ಶ್ರೀರಾಮಭಕ್ತರು ಹಾಗೂ ಅಯ್ಯಪ್ಪ ಸ್ವಾಮಿ ಮಾಲಾಧಾರಿಗಳು ಗ್ರಾಮದ ಯುವಕರು ಹಿರಿಯರು ಸೇರಿದಂತೆ ಶ್ರೀರಾಮ ಮಂದಿರ ದಿಂದ ಬಂದ ಮಂತ್ರಾಕ್ಷತೆಯನ್ನು ಗ್ರಾಮದ ಆರಾಧ್ಯದೈವ ಸ್ವರೂಪಿಯಾಗಿರುವ ಶ್ರೀ ಮಾರುತೇಶ್ವರ ಸ್ವಾಮಿಯ ದೇವಸ್ಥಾನದಲ್ಲಿ ಅಕ್ಷತೆ ಹಾಗೂ ಕರಪತ್ರಕ್ಕೆ ಅರ್ಚಕರಿಂದ ಪೂಜೆ ಸಲ್ಲಿಸಿ ರಾಮ ನಾಮ ಹನುಮನಾಮ ಜಪಿಸುತ್ತಾ ಗ್ರಾಮದ ಮನೆಮನೆಗೆ ತೆರಳಿ ಶ್ರೀರಾಮ ಮಂತ್ರಾಕ್ಷತೆಯನ್ನು ವಿತರಿಸಿ ಶ್ರೀ ರಾಮನ ಕೃಪೆಗೆ ಪಾತ್ರರಾದರು.
ಈ ಕಾರ್ಯಕ್ರಮದಲ್ಲಿ ವೈ ಬಸವರಾಜ,ಜಿ ಮುತ್ತುರಾಜ,ಶಿವುಕುಮಾರ,ಪ್ರಶಾಂತ ಸ್ವಾಮಿ,ಆಂಜನೇಯ ಸ್ವಾಮಿ,ಬಸವರಾಜ ಸ್ವಾಮಿ, ಜಗದೀಶ ಮೂಷ್ಟೂರ ಸ್ವಾಮಿ,ಹನುಮೇಶ ಸ್ವಾಮಿ, ರಾಹುಲ್ ಸ್ವಾಮಿ,ವರದರಾಜ,ಶರಣಪ್ಪ ಸ್ವಾಮಿ ಹಾಗೂ ಗ್ರಾಮದ ಯುವಕರು ಹಿರಿಯರು ಮಕ್ಕಳು ಭಾಗಿ ಇದ್ದರು.
