ವಿಜಯನಗರ/ಕೊಟ್ಟೂರು:ಯುವಜನರೇ ಎಚ್ಚರ ಮಾದಕ ವಸ್ತುಗಳ ಸೇವನೆ,ನಾವೇ ಸಾವಿಗೆ ಅಹ್ವಾನ ಕೊಟ್ಟಂತೆ ಅಮಲು ಬರಿಸುವ ಮಾದಕ ವಸ್ತುಗಳ ಸೇವನೆಯಿಂದ ಮನುಷ್ಯ ಅನೇಕ ದೈಹಿಕ ಹಾಗೂ ಮಾನಸಿಕ ಕಾಯಿಲಿಗೆ ಒಳಗಾಗಿ ತನ್ನ ಜೀವವನ್ನೇ ಕಳೆದುಕೊಳ್ಳುತ್ತಾನೆ ಹಾಗೂ ಅರ್ಥಿಕವಾಗಿ ದಿವಾಳಿ ಕೂಡಾ ಆಗುತ್ತಾನೆ,ಇದರಿಂದ ಕುಟುಂಬ ಹಾಗೂ ಸಮಾಜದ ಮೇಲೆ ಕೆಟ್ಟ ಪರಿಣಾಮ ಉಂಟಾಗುತ್ತದೆ, ಸಮಾಜ ಮಾದಕ ವಸ್ತುಗಳಿಂದ ಮುಕ್ತವಾಗಿರಬೇಕು ಮಾದಕವಸ್ತುಗಳ ಬಳಕೆ ಹಾಗೂ ಅಕ್ರಮ ಸಾಗಣಿಕೆಯಿಂದ ಹಾಗೂ ಡ್ರಗ್ಸ್,ಮದ್ಯಪಾನ ಸೇವನೆಯಿಂದ ಉಂಟಾಗುವ ಸಮಸ್ಯಗಳ ಬಗ್ಗೆ ಜಾಗತಿಕವಾಗಿ ಸಾರ್ವಜನಿಕರಿಗೆ ಅರಿವು ಮೂಡಿಸುವ ಸಲವಾಗಿ ಜಿಲ್ಲಾದ್ಯಂತ ಪೋಲಿಸ್ ಇಲಾಖೆ ವತಿಯಿಂದ ಅಂತಾರಾಷ್ಟ್ರೀಯ ಮಾದಕ ದ್ರವ್ಯ ವಸ್ತುಗಳ ವಿರೋಧಿ ದಿನಾಚರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.ಈ ಕಾರ್ಯಕ್ರಮವನ್ನು ಕೊಟ್ಟೂರು ಪಟ್ಟಣದ ಹರಪ್ಪನಹಳ್ಳಿ ರಸ್ತೆ ಪೋಲಿಸ್ ಇಲಾಖೆ ಅವರಣದಲ್ಲಿ ಸಿ ಪಿ ಐ ವೆಂಕಟ ಸ್ವಾಮಿ ಹಾಗೂ ಪಿ ಎಸ್ ಐ ಗೀತಾಂಜಲಿ ಶಿಂಧೆ ರವರು ಚಾಲನೆ ನೀಡಿ ಪಟ್ಟಣದ ಸಾರ್ವಜನಿಕರು ಅಮಲು ಬರಿಸುವ ಮಾದಕ ವಸ್ತಗಳ ಸೇವನೆಯಿಂದ ಮನುಷ್ಯ ಅನೇಕ ದೈಹಿಕ ಹಾಗೂ ಮಾನಸಿಕ ಖಾಯಿಲಿಗೆ ಒಳಗಾಗದಂತೆ ಸಾರ್ವಜನಿಕರಿಗೆ ಜಾಗೃತಿ ಮೂಡಿಸಲು ಪೋಲಿಸ್ ಇಲಾಖೆ ಸಿಬ್ಬಂದಿಗಳು ಕಾಲ್ನಡಿಗೆ ಮುಖಾಂತರ ಪಟ್ಟಣದ ಪ್ರಮುಖ ಬೀದಿ ರಸ್ತೆಗಳಾದ ಎ ಪಿ ಎಂ ಸಿ ರಸ್ತೆ ಬಸ್ ನಿಲ್ದಾಣ,ಗಾಂಧಿ ಸರ್ಕಲ್,ಉಜ್ಜಿನಿ ಸರ್ಕಲ್ ಮೂಲಕ ಬಸ್ ನಿಲ್ದಾಣ ತಲುಪಿ ಸಾರ್ವಜನಿಕರು ಅರೋಗ್ಯದಿಂದರಲು ಸಾರ್ವಜನಿಕರಿಗೆ ಜಾಗೃತಿ ಮೂಡಿಸಿದರು.
ಈ ಸಂದರ್ಭದಲ್ಲಿ ಸಿ ಪಿ ಐ ವೆಂಕಟ ಸ್ವಾಮಿ,ಪಿ ಎಸ್ ಐ ಗೀತಾಂಜಲಿ ಶಿಂಧೆ,ಎ.ಎಸ್.ಐ ಮಹಾಬಲೇಶ್ವರಪ್ಪ, ಎಸ್ ಐ ಚಂದ್ರಶೇಖರ,ನೂರ್ ಅಹ್ಮದ್,ಚಂದ್ರಮೌಳಿ,ಪತ್ರಿ ರಮೇಶ ಹಾಗೂ ಪೋಲಿಸ್ ಸಿಬ್ಬಂದಿ ವರ್ಗದವರು ಇದ್ದರು.
ವರದಿ:ವೈ.ಮಹೇಶ್ ಕುಮಾರ್ ಕೊಟ್ಟೂರು