ಜೇವರ್ಗಿ:ಕರ್ನಾಟಕ ಸರ್ಕಾರ ಮತ್ತು ಸಹ ಕನ್ನಡ ಸಂಘಗಳು ಆಯೋಜಿಸಿದ ಕರ್ನಾಟಕ ಸಂಭ್ರಮ ಐವತ್ತರ (೫೦) ರಥ ಯಾತ್ರೆ ದಿನಾಂಕ 05/1/2024 ರಂದು ಬೆಳಿಗ್ಗೆ 9:30 ಗಂಟೆಗೆ ಜೇವರ್ಗಿ ಪಟ್ಟಣದ ರಿಲಯನ್ಸ್ ಪೆಟ್ರೋಲ್ ಬಂಕ್ ಹತ್ತಿರ ಆಗಮಿಸಿ ಜೇವರ್ಗಿ ತಾಲ್ಲೂಕು ದಂಡಾಧಿಕಾರಿಗಳಾದ ಮಲ್ಲಣ್ಣ ಯಲಗೋಡ್ ರವರು ರಥೋತ್ಸವಕ್ಕೆ ಚಾಲನೆ ನೀಡಿ ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟ ಬೇಕು ಎನ್ನುವ ಸಂಗೀತಕ್ಕೆ ಅದ್ಭುತವಾದ ನೃತ್ಯದ ಮುಖಾಂತರ ಕನ್ನಡ ಧ್ವಜವನ್ನೇತ್ತಿ ನಾವೆಲ್ಲರೂ ಕನ್ನಡಕ್ಕಾಗಿ ದುಡಿಯೋಣವೆಂದು ಜೇವರ್ಗಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಶ್ರೀ ಎಸ್ ಕೆ ಬಿರಾದಾರ,ಜೇವರ್ಗಿ ತಾಲ್ಲೂಕು ವೈದ್ಯಾಧಿಕಾರಿಗಳಾದ ಡಾ:ಸಿದ್ದು ಪಾಟೀಲ್ ಹಾಗೂ ಸಾಹಿತ್ಯ ಪರಿಷತ್ ಪದಾಧಿಕಾರಿಗಳು ನೃತ್ಯದ ಮುಖಾಂತರ ನೂರಾರು ಕನ್ನಡಾಭಿಮಾನಿಗಳು ಮತ್ತು ಶಾಲಾ- ಕಾಲೇಜಿನ ವಿದ್ಯಾರ್ಥಿಗಳು ಕನ್ನಡಾಂಬೆಯ ಘೋಷವನ್ನು ಕೂಗುತ್ತಾ ಅದ್ದೂರಿಯಾಗಿ ರಥೋತ್ಸವನ್ನು ಜರುಗಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
ಈ ಕಾರ್ಯಕ್ರಮದಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳಾದ ಗೌಡಪಗೌಡ,ಸೈಬಣ್ಣ,ವಿರುಪಾಕ್ಷಿ ಹುಳಿಮನಿ,ಸಂಗಮೇಶ ಸಂಕಾಲಿ,ವಿನಾಯಕ ಹಡಪಾದ ಹಾಗೂ ಕನ್ನಾಡಾಭಿಮಾನಿಗಳು ಉಪಸ್ಥಿತರಿದ್ದರು.
ವರದಿ: ಚಂದ್ರಶಾಗೌಡ ಮಾಲಿ ಪಾಟೀಲ್