ಕಲಬುರಗಿ:ಇತ್ತೀಚಿನ ದಿನಗಳಲ್ಲಿ ನಾರ್ಮಲ್ ಹೆರಿಗೆಗಳು ಕಡಿಮೆಯಾಗಿ ಸಿಸೇರಿಯನ್ ಹೆರಿಗೆಗಳು ನೋವು ರಹಿತ ಎಂಬ ನಂಬಿಕೆ ಹೆಚ್ಚಾಗುತ್ತಿದೆ. ಆದ್ದರಿಂದ ಮಹಿಳೆಯರು ನಾರ್ಮಲ್ ಹೆರಿಗೆ ಎಂದರೆ ಭಯ ಬೀಳುತ್ತಾರೆ ಅಲ್ಲದೇ ಕೆಲವು ವೈದ್ಯರೇ ಸಿಸೇರಿಯನ್ ಬಗ್ಗೆ ಒತ್ತು ಕೊಡುತ್ತಾರೆ ಎಂದು ಖಾಜಾ ಬಂದಾನವಾಜ ವಿಶ್ವವಿದ್ಯಾಲಯದ ಸಮ ಕುಲಾಧಿಪತಿ ಜನಾಬ ಸಯ್ಯದ ಮುಹಮ್ಮದ ಅಲಿ ಅಲ ಹುಸ್ಸೇನಿ ಹೇಳಿದರು.
ಖಾಜಾ ಬಂದಾನವಾಜ ವಿಶ್ವವಿದ್ಯಾಲಯದ ಪ್ರಸೂತಿ ಮತ್ತು ಸ್ತ್ರೀರೋಗ ವಿಭಾಗ ಮತ್ತು ಕರ್ನಾಟಕ ರಾಜ್ಯ ಪ್ರಸೂತಿ ಮತ್ತು ಸ್ತ್ರೀರೋಗ ಶಾಸ್ತ್ರ ಸಂಘವು ಶುಕ್ರವಾರ ಜಂಟಿಯಾಗಿ ಆಯೋಜಿಸಿದ
‘ಪ್ರಸೂತಿ ಮತ್ತು ಸ್ತ್ರೀರೋಗ ಶಾಸ್ತ್ರದಲ್ಲಿ ಇತ್ತೀಚಿನ ಪ್ರಗತಿಗಳು’ ವಿಷಯದ ಬಗ್ಗೆ ಅಂತಾರಾಷ್ಟ್ರೀಯ ಮುಂದುವರೆದ ವೈದ್ಯಕೀಯ ಶಿಕ್ಷಣ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ವೈದ್ಯರು ರೋಗಿಗಳ ವಿಶ್ವಾಸ ಗೆಲ್ಲಬೇಕು ಎಲ್ಲಾ ರೋಗಿಗಳ ಮನಸ್ಥಿತಿ ಒಂದೇ ರೀತಿ ಇರುವುದಿಲ್ಲ. ಅವರಿಗೆ ಸರಿಯಾದ ಸಮಾಲೋಚನೆ ಮಾಡಿದಲ್ಲಿ ಚಿಕಿತ್ಸೆ ನೀಡುವುದು ಸುಲಭವಾಗುತ್ತದೆ.
ಪ್ರಸೂತಿ ವಿಭಾಗದಲ್ಲಿ ಆಧುನಿಕ ತಂತ್ರಜ್ಞಾನದ ಪ್ರಗತಿ ಒಳ್ಳೆಯದು ಜೊತೆಗೆ ನಾರ್ಮಲ್ ಹೆರಿಗೆ ಆದ್ಯತೆ ಆಗುವತ್ತ ವೈದ್ಯರ ಚಿತ್ತ ಇರಬೇಕು ಎಂದು ಹೇಳಿದರು. ಇಂತಹ ಒಳ್ಳೆಯ ಕಾರ್ಯಕ್ರಮ ಹಮ್ಮಿಕೊಂಡಕ್ಕಾಗಿ ವಿಭಾಗದ ಮುಖ್ಯಸ್ಥೆ ಡಾ.ರಾಜಶ್ರೀ ಪಾಲದಿ ಮತ್ತು ತಂಡವನ್ನು ಅಭಿನಂದಿಸಿದರು.
ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಗಳಾದ ಡಾ.ಆಶಾ, ಡಾ.ಹೇಮಾ ಮತ್ತು ಆಸ್ಟ್ರೇಲಿಯಾದ ಡಾ.ಸುನಂದಾ ರವರಿಗೆ ವಿವಿ ಪರವಾಗಿ ಧನ್ಯವಾದಗಳನ್ನು ಹೇಳಿದರು.
ವಿವಿಯ ಉಪಕುಲಪತಿ ಪ್ರೊ.ಅಲಿ ರಜಾ ಮೂಸ್ವಿ ಇವರು ವಿವಿ ನಡೆದು ಬಂದ ದಾರಿಯ ಬಗ್ಗೆ ಮಾತನಾಡಿದರು ಅಲ್ಲದೇ ಈ ವರ್ಷದಲ್ಲಿ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದರ ಬಗ್ಗೆ ಹೇಳಿದರು.ಕೆಬಿಎನ್ ದಲ್ಲಿ ಸಂಶೋಧನೆಗೆ ಆದ್ಯತೆ ಇದ್ದು ಹೆಚ್ಚು ಸಂಶೋಧನೆಯಲ್ಲಿ ಪಾಲ್ಗೊಂಡು ಈ ವಿವಿಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಳೆಸುವ ಕಾರ್ಯ ನಮ್ಮದಾಗಬೇಕು ಎಂದರು.
ಅಲ್ಲದೇ ವೇದಿಕೆಯ ಮೇಲೆ ಹೆರಿಗೆಯ ಸಮಯದಲ್ಲಿ ಆಗುವ ರಕ್ತ ಸ್ರಾವದಿಂದ ಮತ್ತು ಬಿಪಿ ಹೆಚ್ಚಾಗಿ ರೋಗಿಗೆ ಸೆಳೆತ ಬಂದಾಗ ಹೇಗೆ ಪ್ರಾಣ ಕಾಪಾಡಬೇಕು ಎಂಬ ಪ್ರಕ್ರಿಯೆಯನ್ನು ಹಂತ ಹಂತವಾಗಿ ಅಣುಕು
ಪ್ರದರ್ಶನ ನೀಡಿದರು ಸುಮಾರು 280 ಅಭ್ಯರ್ಥಿಗಳು ಹೆಸರು ನೋಂದಾಯಿಸಿಕೊಂಡಿದ್ದರು.
ಪ್ರಭಾರಿ ಕುಲಸಚಿವೆ ಡಾ.ರುಕ್ಸರ ಫಾತಿಮಾ,ಡಾ.ವಿದ್ಯಾ ಥೋಬ್ಬಿ,ಸಂಘಟನಾ ಅಧ್ಯಕ್ಷ ಡಾ.ರಾಜಶ್ರೀ ಪಾಲದಿ, ಡಾ.ಸಿದ್ದೇಶ್,ಡಾ.ಗುರುಪ್ರಸಾದ,ಡಾ.ಅಬ್ದುಲ್ ಬಸೀರ್,ಡಾ.ಸಿದ್ಧಲಿಂಗ ಮುಂತಾದವರು ಹಾಜರಿದ್ದರು.
ವರದಿ-ಅಪ್ಪಾರಾಯ ಬಡಿಗೇರ